Breaking News

ಕಂಟ್ರಿ ಪಿಸ್ತೂಲ್ ತಯಾರಿಸುತ್ತಿದ್ದ 13 ಆರೋಪಿಗಳು ಅರೆಸ್ಟ್

Spread the love

ಬೆಳಗಾವಿಯಲ್ಲಿ ಕಂಟ್ರಿ ಪಿಸ್ತೂಲ್ ತಯಾರಿಸುತ್ತಿದ್ದ 13 ಆರೋಪಿಗಳ ಗ್ಯಾಂಗ್‌ ನ್ನು ಖಾನಾಪುರ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಾದ ಮಾರುತಿ ಸುತಾರ, ಸೋಮನಾಥ ಚೌಗಲೆ, ಸಂತೋಷ ನಾಯಕ, ಮಾರುತಿ ಗುಡದ್ಯಾಗೋಳ, ಬಾಳು ನಾಯಕ, ಲಕ್ಷ್ಮಣ ಗುಜನಾಳ, ಬಸವರಾಜ ಸಾಲೋಟಗಿ, ಬಸವಂತ ಯರಮಾಳಕರ, ಲಕ್ಷ್ಮಣ ಗುರವ, ಮರಿಯಪ್ಪ ನಾಯಕ, ವಿಶ್ವನಾಥ ದೇಸಾಯಿ ಬಂಧಿತರು.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ನಡೆದಿದ್ದ ಕೊಲೆ ಕೇಸ್‌ನ ತನಿಖೆ ನಡೆಸುತ್ತಿದ್ದ ವೇಳೆ ಪೊಲೀಸರಿಗೆ ಕಂಟ್ರಿ ಪಿಸ್ತೂಲ್‌ನಿಂದ ಕೊಲೆ ಮಾಡಿರುವುದು ಗೊತ್ತಾಗಿತ್ತು. ಬಳಿಕ ಕಂಟ್ರಿ ಪಿಸ್ತೂಲ್ ಮೂಲ ಬೆನ್ನುಬಿದ್ದ ಪೊಲೀಸರಿಗೆ ಖಾನಾಪುರದ ಕಾಟಗಾಳಿ ಗ್ರಾಮದಲ್ಲಿ ಆರೋಪಿಗಳು 2024ರಿಂದ ಅಕ್ರಮವಾಗಿ ತಯಾರಿಸುತ್ತಿರುವ ಸ್ಫೋಟಕ ಅಂಶ ಬೆಳಕಿಗೆ ಬಂದಿತ್ತು.

ಆರೋಪಿ ಮಾರುತಿ ಸಿಂಗಲ್ ಲೋಡೆಡ್, ಡಬಲ್ ಲೋಡೆಡ್ ಕಂಟ್ರಿ ಪಿಸ್ತೂಲ್ ತಯಾರಿಸುತ್ತಿದ್ದು, ಇವುಗಳ ತಯಾರಿಕೆಗೆ ಆರೋಪಿ ಮರಿಯಪ್ಪ ನಾಯಕ ಹಣ ಕೊಡುತ್ತಿದ್ದ. ಇನ್ನೋರ್ವ ಆರೋಪಿ ವಿಶ್ವನಾಥ ದೇಸಾಯಿ ಬಂದೂಕಿನ ಬಿಡಿಭಾಗಗಳನ್ನ ಪೂರೈಸುತ್ತಿದ್ದ. ಜೊತೆಗೆ ಬುಕ್ ಸ್ಟಾಲ್‌ನಲ್ಲಿ ಬಂದುಕಿನ ಬಿಡಿಭಾಗಗಳು ಮತ್ತು ಮದ್ದುಗುಂಡುಗಳನ್ನು ಮಾರಾಟ ಮಾಡಿದ್ದ. ಈತನಿಂದ ಬಂದೂಕಿನ 21 ಟ್ರೀಗರಗಳು, 5 ಹೆಡ್‌ಗಳು, 15 ನಿಪ್ಪಲಗಳು, 1 ಸಿಲಿಂಗ್ ಬೆಲ್ಟ್, 34 ಮದ್ದು ತುಂಬಿದ ಪ್ಯಾಕೇಟ್, 499 ಸೀಸಿನ ಗೋಲಿಗಳು, 420 ಕೇಪಗಳು, 48 ಜೀವಂತ ಕಾಡತೂಸುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪೊಲೀಸರು 13 ಆರೋಪಿಗಳನ್ನು ಬಂಧಿಸಿದ್ದು, ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಯ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದ 8 ಕಂಟ್ರಿ ಪಿಸ್ತೂಲ್ ಸೇರಿ ಒಟ್ಟು 9 ಕಂಟ್ರಿ ಪಿಸ್ತೂಲ್ ಜಪ್ತಿ ಮಾಡಿದ್ದಾರೆ. ಪಿಸ್ತೂಲ್‌ಗಳನ್ನು ಬೇಟೆಗೆ ಬಳಕೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ