Breaking News

ಸಿದ್ದರಾಮಯ್ಯ ಗ್ಯಾಂಗ್‌ಗೆ ಕತ್ತರಿ ಹಾಕೋಕೆ ಕಾಂಗ್ರೆಸ್‌ನವರಿಂದಲೇ ಆಡಿಯೋ ರಿಲೀಸ್: ಅಶೋಕ್‌

Spread the love

ಬೆಂಗಳೂರು: ಸಿದ್ದರಾಮಯ್ಯ ಗ್ಯಾಂಗ್‌ಗೆ ಕತ್ತರಿ ಹಾಕೋಕೆ ಆಡಿಯೋ ರಿಲೀಸ್ ಆಗಿದೆ ಅಂತ ವಿಪಕ್ಷ ನಾಯಕ ಆರ್‌. ಅಶೋಕ್  ಆರೋಪ ಮಾಡಿದ್ದಾರೆ‌.

ಮಾಜಿ ಸಚಿವ ಜಮೀರ್ ಅಹಮದ್ ಅವರದ್ದು ಎನ್ನಲಾದ ಆಡಿಯೋ ವೈರಲ್ ಆದ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಗ್ಯಾಂಗ್‌ಗೆ ಕತ್ತರಿ ಹಾಕೋಕೆ ಈ ಆಡಿಯೋ ರಿಲೀಸ್ ಆಗಿದೆ. ಸಿದ್ದರಾಮಯ್ಯ ಗ್ಯಾಂಗ್ ಹುಷಾರಾಗಿ ಇರಬೇಕು. ಚುನಾವಣೆ ಆಗಿ ಎಷ್ಟು ದಿನ ಆಯ್ತು‌. ಈಗ ಯಾಕೆ ರಿಲೀಸ್ ಮಾಡಿದ್ರು. ಜಮೀರ್‌ಗೆ ಸ್ಥಾನ ತಪ್ಪಿಸೋಕೆ ಕಾಂಗ್ರೆಸ್ ಅವರೇ ಈ ಆಡಿಯೋ ರಿಲೀಸ್ ಮಾಡಿರೋದು. ಉರ್ದು ಭಾಷಣ ಕನ್ನಡ ಅನುವಾದ ಕೊಟ್ಟಿದ್ದಾರೆ. ಇದೆಲ್ಲ ಪ್ಲ್ಯಾನ್. ಇದು ಕಾಂಗ್ರೆಸ್ ಅವರೇ ಮಾಡಿರೋದು‌ ಎಂದಿದ್ದಾರೆ. ಇದನ್ನೂ ಓದಿ

ಸಚಿವ ಸ್ಥಾನಕ್ಕಾಗಿ ಈಗ ದೆಹಲಿಗೆ ಓಡ್ತಿದ್ದಾರೆ. ಇನ್ನು ಮುಂದೆ ಕಾಂಗ್ರೆಸ್ ಪಕ್ಷದಲ್ಲಿ ಸಚಿವ ಸ್ಥಾನ ಸಿಗದವರ ಕೈಬಿಟ್ಟ ಗುಂಪು ರಚನೆ ಆಗಲಿದೆ. ಸಚಿವ ಸ್ಥಾನ ಸಿಗದವರದ್ದು ಗುಂಪು‌ ಆಗಲಿದೆ. ಪ್ರಮಾಣ ವಚನಕ್ಕೆ ಮುಗಿದ ಮೇಲೆ ಎಲ್ಲವೂ ಶುರುವಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ