Breaking News

ಜಮೀರ್ ಅಹ್ಮದ್ ಭವಿಷ್ಯ ರಾಹುಲ್ ಗಾಂಧಿ ಕೈಯಲ್ಲಿ?

Spread the love

ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್  ಅವರು ಇದೇ ಬುಧವಾರ ಪ್ರಮಾಣವಚನ ಸ್ವೀಕರಿಸಲಿದ್ದು, ಸಂಪುಟ ರಚನೆ ಕಸರತ್ತು ನಡೆಯುತ್ತಿದೆ. ಡಿಕೆಶಿ ಸಂಪುಟದಲ್ಲಿ ಜಮೀರ್ ಅಹ್ಮದ್  ಅವರಿಗೆ ಸಚಿವ ಸ್ಥಾನ ಸಿಗುತ್ತಾ ಎಂಬ ಪ್ರಶ್ನೆ ಮೂಡಿದೆ.

ಹಂಗಾಮಿ ಸಿದ್ದರಾಮಯ್ಯ ಪಟ್ಟಿಯಲ್ಲಿ ಜಮೀರ್ ಹೆಸರಿದೆ. ಆದರೆ, ಡಿಕೆ ಶಿವಕುಮಾರ್ ಪಟ್ಟಿಯಲ್ಲಿ ಜಮೀರ್ ಹೆಸರಿಲ್ಲ. ಜಮೀರ್ ಬದಲಿಗೆ 3 ಹೆಸರು ಪಿಕ್ ಮಾಡಿ ಡಿಕೆಶಿ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ಯು.ಟಿ.ಖಾದರ್, ಹ್ಯಾರಿಸ್, ತನ್ವೀರ್ ಸೇಠ್ ಹೆಸರು ಆಯ್ಕೆ ಮಾಡಿರಬಹುದು ಎನ್ನಲಾಗಿದೆ. ಈಗ ಸಿದ್ದರಾಮಯ್ಯ ಮಾತು ಫೈನಲ್ ಆಗುತ್ತಾ ಅಥವಾ ಡಿಕೆ ಮಾತು ಅಂತಿಮ ಆಗುತ್ತಾ ಎಂಬ ಪ್ರಶ್ನೆ ಮೂಡಿದೆ. ಜಮೀರ್ ಭವಿಷ್ಯ ರಾಹುಲ್ ಗಾಂಧಿ ಕೈಯಲ್ಲಿದೆ.

ಸಂಪುಟ ಸರ್ಜರಿ ಹೊಸ್ತಿಲಿನಲ್ಲೇ ಆಡಿಯೋವೊಂದು ಕಾಂಗ್ರೆಸ್‌ನಲ್ಲಿ ಸಂಚಲನ ಮೂಡಿಸಿದೆ. ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಜಮೀರ್ ಮೇಲೆ ಪಕ್ಷ ವಿರೋಧಿ ಚಟುವಟಿಕೆ ಆರೋಪ ಕೇಳಿಬಂದಿದೆ. ಆದರೆ, ಇದು ನನ್ನ ಮೇಲಿನ ಷಡ್ಯಂತ್ರ ಎಂದು ಜಮೀರ್ ಹೇಳಿದ್ದಾರೆ. ಇದೊಂದು ನಕಲಿ ಆಡಿಯೋ ಎಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ನಕಲಿ ಆಡಿಯೋ ಮಾಡಿ ವೈರಲ್ ಮಾಡಿದವರ ವಿರುದ್ಧ ದೂರು ನೀಡಲಾಗುವುದು. ಆಡಿಯೋ ಬಗ್ಗೆ ಯಾವ ತನಿಖೆಗೆ ಬೇಕಾದರೂ ಒಳಪಡಿಸಲಿ. ನಾನು ಪಕ್ಷ ವಿರೋಧಿ ಮಾತನಾಡಿಲ್ಲ ಎಂದು ಜಮೀರ್ ತಿಳಿಸಿದ್ದಾರೆ.

ಸಚಿವ ಸ್ಥಾನ ತಪ್ಪಿಸುವುದಕ್ಕಾಗಿ ಜಮೀರ್ ವಿರುದ್ಧ ಕುತಂತ್ರ ನಡೆದಿದೆ ಎಂದು ಹ್ಯಾರಿಸ್, ಬಾಲಕೃಷ್ಣ, ಸುಧಾಕರ್ ಮಾತನಾಡಿದ್ದರೆ. ಇದು ಗಲೀಜು ರಾಜಕಾರಣ ಎಂದು ಶಾಸಕ ಹ್ಯಾರಿಸ್ ಕಿಡಿಕಾರಿದ್ದಾರೆ. ಸಚಿವ ಸ್ಥಾನ ತಪ್ಪಿಸಲು ಆಡಿಯೋ ರಿಲೀಸ್ ಎಂದು ಬಾಲಕೃಷ್ಣ ತಿಳಿಸಿದ್ದಾರೆ. ಈ ಹಿಂದೆ ನನಗೂ ಹೀಗೆ ಆಗಿತ್ತು ಎಂದ ಸುಧಾಕರ್ ಅಸಮಾಧಾನ ಹೊರಹಾಕಿದ್ದಾರೆ.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ