Breaking News

ಸಿದ್ದರಾಮಯ್ಯ ಬಗ್ಗೆ ನನಗಿದ್ದ ಗೌರವ ಮತ್ತಷ್ಟು ಹೆಚ್ಚಾಯ್ತು: ಸಂಜಯ್ ರಾವತ್

Spread the love

ಮುಂಬೈ: ಸಿದ್ದರಾಮಯ್ಯ  ಅವರ ಬಗ್ಗೆ ನನಗಿದ್ದ ಗೌರವ ಮತ್ತಷ್ಟು ಹೆಚ್ಚಾಯ್ತು ಎಂದು ಮಹಾರಾಷ್ಟ್ರದ ಉದ್ಧವ್‌ಠಾಕ್ರೆ ಬಣದ ಶಿವಸೇನೆ ನಾಯಕ ಸಂಜಯ್ ರಾವತ್  ಕೊಂಡಾಡಿದ್ದಾರೆ.

ಸಿದ್ದರಾಮಯ್ಯರಂತೆ ಸುಗಮ ಅಧಿಕಾರ ಹಸ್ತಾಂತರ  ಅಪರೂಪ. ರಾಜಕಾರಣಿಗಳು ಸಾಮಾನ್ಯವಾಗಿ ತಮ್ಮ ಅಧಿಕಾರ ಮತ್ತು ಸ್ಥಾನಗಳನ್ನು ಬಿಟ್ಟುಕೊಡಲು ಹಿಂಜರಿಯುತ್ತಾರೆ. ಆದರೆ, ಸಿದ್ದರಾಮಯ್ಯ ನಡೆಸಿದ ಈ “ಸುಗಮ ಅಧಿಕಾರ ಹಸ್ತಾಂತರ” ಅತ್ಯಂತ ಅಪರೂಪವಾಗಿ ಕಂಡುಬರುತ್ತದೆ. ಯಾವುದೇ ಹಠ ಹಿಡಿಯದೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಮೂಲಕ ರಾಜಕಾರಣದಲ್ಲಿ ಅಪರೂಪದ ಮಾದರಿಯನ್ನು ಹಾಕಿಕೊಟ್ಟಿದ್ದಾರೆ.

ರಾಜಕೀಯದಲ್ಲಿ ಅಧಿಕಾರ ತ್ಯಜಿಸುವುದು ಸಾಮಾನ್ಯ ವಿಷಯವಲ್ಲ. “ಸಾಮಾನ್ಯವಾಗಿ ಯಾರೂ ಸ್ವಯಂಪ್ರೇರಿತವಾಗಿ ತಮ್ಮ ಸ್ಥಾನ ಬಿಟ್ಟುಕೊಡುವುದಿಲ್ಲ. ಆದರೆ, ಇದು ದೇಶದ ರಾಜಕೀಯದಲ್ಲಿ ಅಪರೂಪದ ಬೆಳವಣಿಗೆ. ಪಕ್ಷದ ತೀರ್ಮಾನಕ್ಕೆ ಬದ್ಧತೆ ತೋರಿರುವುದು ರಾಜಕೀಯ ಪ್ರೌಢತೆಯ ಸಂಕೇತ. ಅವರ ಬಗ್ಗೆ ಗೌರವ ಮತ್ತಷ್ಟು ಹೆಚ್ಚಾಗಿದೆ ಎಂದು ಅವರು ಮುಕ್ತವಾಗಿ ಶ್ಲಾಘಿಸಿದ್ದಾರೆ.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ