Breaking News

ಸಕಲ ದೋಷ ನೋಡಿಕೊಂಡು ಡಿಕೆಶಿ ಮುನ್ನಡೆಯಬೇಕಾಗುತ್ತೆ – ಕರಿವೃಷಭ ಶಿವಯೋಗೀಶ್ವರ ಸ್ವಾಮೀಜಿ ಎಚ್ಚರಿಕೆ

Spread the love

ತುಮಕೂರು: ಶಾಸ್ತ್ರದ ಪ್ರಕಾರ ಡಿಕೆ ಶಿವಕುಮಾರ್‌ ಅವರು ಸಕಲ ದೋಷ ನೋಡಿಕೊಂಡು ಮುನ್ನಡೆಯಬೇಕಾಗುತ್ತದೆ ಎಂದು ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಕರಿವೃಷಭ ಶಿವಯೋಗೀಶ್ವರ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಹಾಗೂ ಮುಂದಿನ ಸಿಎಂ ಡಿಕೆಶಿ ಎನ್ನುವ ವಿಚಾರ ಕುರಿತು ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.

ಶ್ರೀಮಠದ ಆಶೀರ್ವಾದ ಡಿಕೆಶಿ ಅವರಿಗೆ ಇದ್ದೇ ಇರುತ್ತದೆ. ʻರಾಜಾ ಪ್ರತ್ಯಕ್ಷ ದೇವತಾ…ʼ ಅಂದ್ರೆ ರಾಜ್ಯವನ್ನು ಆಳುವಂತಾ ದೊರೆ ನಾಯಕ. ರೈತರ ಪರ ಬಡವರ ಪರಯಿರುವ ನಾಯಕನಾಗಿ ಹೊರಹೊಮ್ಮುತ್ತಾರೆ. ಶ್ರೀ ಮಠದ ಧರ್ಮದ ಧ್ವಜವನ್ನ ಕೊಟ್ಟು ಅವರಿಗೆ ಆರ್ಶಿವಾದ ಮಾಡುವ ಕಾಲ ಹತ್ತಿರ ಬಂದಿದೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸದಿಂದ ಅವರ ಬಾಳು ಬಂಗಾರವಾಗಲೆಂದು ಆರ್ಶಿವಾದ ಮಾಡುತ್ತೇನೆ. ಪ್ರಮಾಣವಚನದ ಸಮಯ ನಾವು ಹೇಳಲು ಆಗಲ್ಲ. ಅವರವರ ನಿರ್ಧಾರಕ್ಕೆ ಬಿಟ್ಟಿದ್ದು ಎಂದಿದ್ದಾರೆ.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ