Breaking News

ಮುಂದಿನ ಸಿಎಂ ಯಾರು – ಪ್ರಶ್ನೆಗೆ ಉತ್ತರ ನೀಡದೇ ನಗುಮುಖದಿಂದ ಎದ್ದು ಹೋದ ಸಿದ್ದರಾಮಯ್ಯ

Spread the love

ಬೆಂಗಳೂರು: ಮುಂದೆ ಕರ್ನಾಟಕದ ಸಿಎಂ  ಯಾರು ಎನ್ನುವ ಪ್ರಶ್ನೆಗೆ ಸಿಎಂ ಯಾವುದೇ ಉತ್ತರ ನೀಡದೇ ಹೈಕಮಾಂಡ್‌ ನಿರ್ಧಾರ ಮಾಡಲಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಗೃಹ ಕಚೇರಿ ಕೃಷ್ಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೈಕಮಾಂಡ್‌ ಮತ್ತು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಆಯ್ಕೆ ಮಾಡಲಾಗುತ್ತದೆ. ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಲಿದ್ದಾರೆ ಎಂದು ತಿಳಿಸಿದರು.

ನನ್ನನ್ನು ಸೋನಿಯಾ ಗಾಂಧಿ ಅವರು‌ ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಂಡರು. ಆಗ ನನ್ನ ಜೊತೆ 8 ಜನ‌ ಶಾಸಕರು ಸೇರಿಕೊಂಡಿದ್ದರು. ಅವರ ಪೈಕಿ ಕೆಲವರು ನಿಧನರಾಗಿದ್ದಾರೆ. ಅವರಿಗೆಲ್ಲ ನಾನು ಚಿರಋಣಿಯಾಗಿರುತ್ತೇನೆ. 8 ವರ್ಷ ಸಿಎಂ, ಎರಡು ಸಲ ವಿರೋಧ ಪಕ್ಷದ ನಾಯಕನಾಗಿ ಕಾಂಗ್ರೆಸ್ ಅವಕಾಶ ಕೊಟ್ಟಿದೆ. ಈ ಅವಕಾಶ ನೀಡಿದ್ದಕ್ಕೆ ಕಾಂಗ್ರೆಸ್‌ಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ತಿಳಿಸಿದರು.

ನಾನು ಯಾವತ್ತೂ ಅಧಿಕಾರ ಹಿಂದೆ ಹೋಗಿಲ್ಲ. ಆಸ್ತಿ ಪಾಸ್ತಿ ಮಾಡಬೇಕು ಹೋಗಿಲ್ಲ. 1983ರಲ್ಲಿ ನಾನು ಶಾಸಕನಾಗಿದ್ದೆ, 50 ವರ್ಷ ರಾಜಕೀಯ ಜೀವನ ನನ್ನ ತೆರೆದ ಪುಸ್ತಕ ಎಂದು ಹೇಳಿದರು

ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯನವರ ಮಾತುಗಳು ಮುಗಿಯುತ್ತಿದ್ದಂತೆ ಮಾಧ್ಯಮಗಳು ಹಲವು ಪ್ರಶ್ನೆಗಳು ಕೇಳಿದವು. ಆದರೆ ಸಿದ್ದರಾಮಯ್ಯ ನಗುಮುಖದಿಂದಲೇ ನಿಮ್ಮ ಸಹಕಾರಕ್ಕೆ ಧನ್ಯವಾದಗಳು ಎಂದು ತಿಳಿಸಿ ಸುದ್ದಿಗೋಷ್ಠಿ ಮುಗಿಸಿ ತೆರಳಿದರು. ಎದ್ದು ಹೋಗುವಾಗ ಡಿಕೆ ಶಿವಕುಮಾರ್‌, ಪರಮೇಶ್ವರ್‌ ಸೇರಿದತೆ ಕಾಂಗ್ರೆಸ್‌ ನಾಯಕರು ಕೈಯನ್ನು ಮೇಲಕ್ಕೆ ಎತ್ತಿ ಒಗ್ಗಟ್ಟು ಪ್ರದರ್ಶಿಸಿದರು.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ