Breaking News

ಯಲ್ಲಮ್ಮನಗುಡ್ಡ ಕ್ಷೇತ್ರ; ಸಸಿ ನೆಟ್ಟು, ಪೋಷಿಸಲು ಶಾಸಕ ವಿಶ್ವಾಸ್ ವೈದ್ಯ ಕರೆ

Spread the love

ಉಗರಗೋಳ: ‘ರೇಣುಕಾ ಯಲ್ಲಮ್ಮನ ಕ್ಷೇತ್ರ ಬಂಡೆಗಲ್ಲುಗಳಿಂದ ಕೂಡಿರುವ ಪ್ರದೇಶ. ಇಲ್ಲಿ ಸಸಿ ನೆಟ್ಟು ಪೋಷಿಸುವುದು ಸವಾಲಿನ ಕೆಲಸ. ಹೀಗಾಗಿ ಪ್ರತಿಯೊಬ್ಬರು ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆ ಮಾಡುವ ಮೂಲಕ ಆರೋಗ್ಯಕರ ಸಮಾಜ ನಿರ್ಮಿಸಲು ಶ್ರಮಿಸಬೇಕು’ ಎಂದು ಯಲ್ಲಮ್ಮ ದೇವಸ್ಥಾನ ಅಭಿವೃದ್ದಿ ಪ್ರಾಧಿಕಾರದ ಉಪಾಧ್ಯಕ್ಷ, ಶಾಸಕ ವಿಶ್ವಾಸ್ ವೈದ್ಯ ಹೇಳಿದರು.

ಯಲ್ಲಮ್ಮನ ಗುಡ್ಡದಲ್ಲಿ ಶನಿವಾರ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆ, ಭದ್ರತಾ ಕೊಠಡಿಯ ಉದ್ಘಾಟನೆ, ಯಲ್ಲಮ್ಮನ ಗುಡ್ಡದ ಸೌಂದರ್ಯೀಕರಣ, ನೆರಳಿನ ದೃಷ್ಟಿಯಿಂದ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

ದೇವಸ್ಥಾನ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ಶಿದ್ದನಗೌಡ ಗೂಡರಾಶಿ ಮಾತನಾಡಿದರು. ಅಭಿವೃದ್ದಿ ಕಾರ್ಯದರ್ಶಿ ಪ್ರಭವತಿ ಫಕೀರಪೂರ, ಮಲ್ಲು ಜಕಾತಿ, ಶಿವಾನಂದ ಪಟ್ಟಣಶೆಟ್ಟಿ, ನಾಗರತ್ನಾ ಚೋಳಿನ, ಮಂಜುನಾಥ ಅಂಗಡಿ, ಅಲ್ಲಮಪ್ರಭು ಪ್ರಭುನವರ, ಆರ್.ಎಚ್. ಸವದತ್ತಿ, ಸಿ.ಎನ್. ಕುಲಕರ್ಣಿ, ನಾಗರಾಜ ಬಡೆಪ್ಪನವರ, ಶ್ರೀಧರ ಇನಗಂಟಿ ಇದ್ದರು.


Spread the love

About Laxminews 24x7

Check Also

ಭಟ್ಕಳ ದುರಂತ: ಮೃತರ ಕುಟುಂಬಕ್ಕೆ ₹2 ಲಕ್ಷ, ಗಾಯಾಳುಗಳಿಗೆ ₹50 ಸಾವಿರ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

Spread the loveದೆಹಲಿ: ಕರ್ನಾಟಕದ ಕಾರವಾರ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ದುರಂತಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತೀವ್ರ ಕಳವಳ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ