Breaking News

ಗಂಗಾವತಿ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿಗೆ ಕೊರೊನಾ ಸೋಂಕು

Spread the love

ಕೊಪ್ಪಳ: ಜಿಲ್ಲೆಯ ಗಂಗಾವತಿ ಕ್ಷೇತ್ರದ ಶಾಸಕ ಪರಣ್ಣ ಮುನವಳ್ಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಈ ಕುರಿತು ಗಂಗಾವತಿ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಮಾಹಿತಿ ನೀಡಿದ್ದಾರೆ. ಶಾಸಕರಲ್ಲಿ ಕೊರೊನಾ ಪತ್ತೆಯಾಗಿರುವುದು ಅವರ ಬೆಂಬಲಿಗರು ಹಾಗೂ ಸ್ನೇಹಿತರಲ್ಲಿ ಭಯವನ್ನುಂಟು ಮಾಡಿದೆ. ಶಾಸಕರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮುಂದಾಗಿದ್ದು, ಈಗಾಗಲೇ ಪ್ರಯಾಣ ಬೆಳೆಸಿದ್ದಾರೆ.

ಶಾಸಕ ಪರಣ್ಣ ಮುನವಳ್ಳಿ ಜುಲೈ 16ರಂದು ಜಿಲ್ಲಾಧಿಕಾರಿಗಳ ಕೋವಿಡ್-19 ನಿಯಂತ್ರಣ ಸಭೆಯಲ್ಲಿ ಸಹ ಭಾಗಿಯಾಗಿದ್ದರು. ಈ ಸಭೆಯಲ್ಲಿ ಕೊಪ್ಪಳ, ಕುಷ್ಟಗಿ, ಕನಕಗಿರಿ ಹಾಗೂ ಗಂಗಾವತಿ ಶಾಸಕರು, ಸಂಸದ ಸಂಗಣ್ಣ ಕರಡಿ ಹಾಗೂ ಜಿಲ್ಲಾಧಿಕಾರಿ ಸೇರಿ ವಿವಿಧ ಅಧಿಕಾರಿಗಳು ಭಾಗಿಯಾಗಿದ್ದರು. ಹೀಗಾಗಿ ಉಳಿದ ಶಾಸಕರು, ಸಂಸದರು ಹಾಗೂ ಅಧಿಕಾರಿಗಳಿಗೂ ಕೊರೊನಾ ಭೀತಿ ಎದರಾಗಿದೆ.


Spread the love

About Laxminews 24x7

Check Also

ಬಾಲ್ಯವಿವಾಹದಿಂದ ಐವರು ಬಾಲಕಿಯರ ರಕ್ಷಣೆ

Spread the loveಕೊಪ್ಪಳ: ತಾಲ್ಲೂಕಿನ ಜಿನ್ನಾಪುರ ತಾಂಡದ ದೇವಸ್ಥಾನದಲ್ಲಿ ನಿಗದಿಯಾಗಿದ್ದ ಐದು ಜನ ಬಾಲಕಿಯರ ಬಾಲ್ಯ ವಿವಾಹವನ್ನು ಜಿಲ್ಲಾ ಮಕ್ಕಳ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ