Breaking News

ಶಾಸಕ ಗಣೇಶ ಹುಕ್ಕೇರಿ ಪ್ರಯತ್ನದಿಂದ 50 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಚಾಲನೆ

Spread the love

ಚಿಕ್ಕೋಡಿ:ರಾಮಪೂರ ಗ್ರಾಮದಲ್ಲಿ ರಸ್ತೆ & ಚರಂಡಿ ನಿರ್ಮಾಣ ಕಾಮಗಾರಿಗೆ ಅನುದಾನ ಮಂಜೂರು ಮಾಡುವಂತೆ ಗ್ರಾಮಸ್ಥರು ನನ್ನಲ್ಲಿ ಹಾಗೂ ಮಾನ್ಯ ಶ್ರೀ ಪ್ರಕಾಶ ಬಾ ಹುಕ್ಕೇರಿ, ನವದೆಹಲಿ ವಿಶೇಷ ಪ್ರತಿನಿಧಿಗಳು ಹಾಗೂ ವಿಧಾನ ಪರಿಷತ ಸದಸ್ಯರಲ್ಲಿ ಮನವಿ ಮಾಡಿಕೊಂಡಿರುವ ಪ್ರಯುಕ್ತ ಸನ್‌ 2025-26ನೇ ಸಾಲಿನ ಮುಖ್ಯಮಂತ್ರಿಗಳ ಮೂಲಸೌಕರ್ಯ ಯೋಜನೆಯಡಿ ರೂ.50.00 ಲಕ್ಷಗಳ ಅನುದಾನವನ್ನು ರಾಮಪೂರ ಗ್ರಾಮ ಪರಿಮಿತಿಯಲ್ಲಿ ರಸ್ತೆ & ಚರಂಡಿ ನಿರ್ಮಾಣಕ್ಕೆ ಮಂಜೂರು ಮಾಡಿಲಾಗಿದ್ದು, ಇವತ್ತು ಈ ಕಾಮಗಾರಿಗೆ ಗ್ರಾಮಸ್ಥರಿಂದ ಪೂಜೆ ಸಲ್ಲಿಸುವ ಮುಖಾಂತರ ಚಾಲನೆ ನೀಡಲಾಯಿತು. ಸದರಿ ಕಾಮಗಾರಿಗೆ ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಉತ್ತಮ ಗುಣಮಟ್ಟದ ಕಾಮಗಾರಿಯನ್ನು ಕೈಗೊಳ್ಳುವಂತೆ ಸೂಚಿಸಿದರು.

ನಂತರ ಮಾತನಾಡಿದ ಶಾಸಕರು ಈಗಾಗಲೇ ಚಿಕ್ಕಲವಾಳ ಗ್ರಾಮದಲ್ಲಿ ಗ್ರಾಮ ಪರಿಮೀತಿ ರಸ್ತೆ & ಚರಂಡಿ ಕಾಮಗಾರಿಗೆ ರೂ.50.00 ಲಕ್ಷ ಹಾಗೂ ಚಿಕ್ಕಲವಾಳ-ರಾಮಪೂರದಿಂದ ಎಮ್,ಎನ್.‌ ರಸ್ತೆ ಕೂಡುವ ರಸ್ತೆಗೆ (ಚಿಕ್ಕಲವಾಳ ಹಳ್ಳಕ್ಕೆ) ಸೇತುವೆ ನಿರ್ಮಾಣಕ್ಕೆ ರೂ.2.00 ಕೋಟಿ ಹಾಗೂ ಚಿಕ್ಕಲವಾಳ ಗ್ರಾಮದ ಮರಾಠ ಸಮಾಜ ಸಮುದಾಯ ಭವನ ಪೂರ್ತಿಗೊಳಿಸಲು ರೂ.10.00 ಲಕ್ಷಗಳ ಹಿಗೇ ಒಟ್ಟು ರೂ.2.60 ಕೋಟಿಗಳ ಅನುದಾನದ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.

ಅಲ್ಲದೇ ಪಾಂಗೇರಿ ಏ ಗ್ರಾಮದಲ್ಲಿ ಪಾಂಗೇರಿ-ಏ ಗ್ರಾಮದಿಂದ ಅಕ್ಕೋಳ ಗ್ರಾಮದವರೆಗೆ ರಸ್ತೆ ನಿರ್ಮಾಣಕ್ಕೆ ರೂ. 70.00 ಲಕ್ಷ ಹಾಗೂ ಪಾಂಗೇರಿ-ಏ ಹಾಗೂ ಅಕ್ಕೋಳ ಗ್ರಾಮದ ಮಧ್ಯದ ಸರ್ಕಾರಿ ಹಳ್ಳಕ್ಕೆ ಕಿರು ಸೇತುವೆಗೆ ರೂ.70.00 ಲಕ್ಷಗಳ ಕಾಮಗಾರಿಗಳು ಮುಕ್ತಾಯಗೊಂಡಿದ್ದು, ಪಾಂಗೇರಿ-ಏ ಗ್ರಾಮದ ಶ್ರೀ ಹನುಮಾನ ದೇವಸ್ಥಾನ ಪೂರ್ತಿಗೊಳಿಸಲು ರೂ.7.00 ಲಕ್ಷಗಳ ಅನುದಾನದ ಕಾಮಗಾರಿ ಪ್ರಗತಿಯಲ್ಲಿದೆ. ಹಿಗೇ ಒಟ್ಟು ರೂ. 1.47 ಕೋಟಿಗಳ ಅನುದಾನದ ಕಾಮಗಾರಿಗಳು ಮುಕ್ತಾಯ ಹಾಗೂ ಪ್ರಗತಿಯಲ್ಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಟ್ಟಣಕುಡಿ ಗ್ರಾಮದ ಮಾಜಿ ಗ್ರಾ.ಪಂ ಅಧ್ಯಕ್ಷ ವಿಧ್ಯಾದರ ಕಾಗೆ, ರಾಮಪೂರ ಗ್ರಾಮದ ತಾತ್ಯಾಸಾಬ ಬಂಕಾಪೂರೆ, ಅಣ್ಣಾಸಾಬ ಲೋಹಾರ, ಮಹಾರುದ್ರ ಜಬಡೆ, ಅಣ್ಣಾಸಾಬ ತಾಂದಳೆ, ಶಶಿಕಾಂತ ನೇಸರೆ ಮಲಗೌಡಾ ಪಾಟೀಲ, ಲಕ್ಷ್ಮಣ ಸಂಕಪಾಳ, ಸುನೀಲ ಸಂಕಪಾಳ, ಉತ್ತಮ ತಾಂದಳೆ, ಕುಮಾರ ಜಾಧವ, ಸಚೀನ ಪವಾರ, ಸುರಜ ಕುಂಬಾರ, ವಿಜಯ ದಾವಣೆ, ಶಂಕರ ವಡ್ಡರ, ಸುರೇಶ ಕುಂಬಾರ, ಹಾಗೂ ಚಿಕ್ಕಲವಾಳ & ಪಾಂಗೇರಿ ಗ್ರಾಮದ ಮಾಣಿಕ ಪಾಟೀಲ, ಬಾಬುರಾವ ಪಾಟೀಲ, ಅಶೋಕ ಸಟಾಲೆ, ಸಂಜು ಚೌಗುಲಾ, ನಿಲಕು ಪಾಟೀಲ, ರಾಜು ಪಾಟೀಲ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಸಾಕು ತಾಯಿಯನ್ನೇ ಓಡಿಸಿಕೊಂಡು ಹೋದ ಮಗ ಕಲಿಯುಗದ ಘೋರ ದುರಂತ: ಹೆತ್ತ ತಂದೆಗೆ ದ್ರೋಹ ಬಗೆದು, ಸಾಕು ತಾಯಿಯನ್ನೇ ಮದುವೆಯಾದ ಮಗ!

Spread the love“ಪ್ರೀತಿಗೆ ಕಣ್ಣಿಲ್ಲ, ವಯಸ್ಸಿನ ಮಿತಿಯಿಲ್ಲ” ಅಂತಾರೆ. ಆದರೆ ಹರಿಯಾಣದಲ್ಲಿ ನಡೆದಿರೋ ಈ ಘಟನೆಯನ್ನು ಕೇಳಿದ್ರೆ, ಪ್ರೀತಿಯ ಹೆಸರಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ