Breaking News

ಆರ್‌ಡಿಪಿಆರ್ ಕಚೇರಿಯಲ್ಲಿ ಗುಂಡು, ತುಂಡು ಪಾರ್ಟಿ: ಎಇಇ ಸೇರಿ ಮೂವರು ಅಮಾನತು

Spread the love

ರಾಯಚೂರು: ಜಿಲ್ಲೆಯ ಲಿಂಗಸುಗೂರಿನ  ಆರ್‌ಡಿಪಿಆರ್  ಕಚೇರಿಯಲ್ಲಿ ಗುಂಡು ತುಂಡು ಪಾರ್ಟಿ ಮಾಡಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡು, ಎಇಇ  ಸೇರಿ ಮೂವರನ್ನ ಅಮಾನತು ಮಾಡಲಾಗಿದೆ.

ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಎಇಇ ಕಚೇರಿಯಲ್ಲಿ ಆರ್‌ಡಿಪಿಆರ್ ಎಇಇ ಹನುಮಪ್ಪ ಆದವಾನಿ, ಎಫ್‌ಡಿಎ ರಾಮಣ್ಣ ಪೂಜಾರಿ ಹಾಗೂ ಕಾವಲುಗಾರ ಹನುಮಂತ ಮೂವರು ಗುಂಡು, ತುಂಡು ಪಾರ್ಟಿ ನಡೆಸಿದ್ದರು. ಇದೀಗ ಮೂವರು ಸರ್ಕಾರಿ ಕಚೇರಿಯನ್ನು ವೈಯಕ್ತಿಕ ಉದ್ದೇಶಕ್ಕೆ ಬಳಕೆ ಮಾಡಿಕೊಂಡು ಕರ್ತವ್ಯಲೋಪ ಎಸಗಿದ್ದಾರೆ ಎಂಬ ಆರೋಪದ ಹಿನ್ನೆಲೆ ಆರ್‌ಡಿಪಿಆರ್ ಇಲಾಖೆ ಅಧೀನ ಕಾರ್ಯದರ್ಶಿ ಚೇತನ್ ಎಂ.ಆದೇಶ ಅಮಾನತು ಮಾಡಿ, ಆದೇಶಿಸಿದ್ದಾರೆ.

ಸರ್ಕಾರಿ ಕಚೇರಿಯಲ್ಲಿ ನಿವೃತ್ತ ನೌಕರರು ಹಾಗೂ ಹೊರಗಿನ ವ್ಯಕ್ತಿಗಳ ಜೊತೆ ಅಧಿಕಾರಿಗಳು ಗುಂಡು, ತುಂಡು ಪಾರ್ಟಿ ಮಾಡಿದ್ದರು. ಈ ಹಿನ್ನೆಲೆ ನೋಟಿಸ್ ಜಾರಿ ಮಾಡಿದ್ದು, ಇಲಾಖೆ ವಿಚಾರಣೆ ಬಾಕಿಯಿರಿಸಿ, ಅಮಾನತು ಮಾಡಿದ್ದಾರೆ.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ