Breaking News

ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ, ರಾಜ್ಯದಲ್ಲಿ ಎಸ್‌ಐಆರ್ ವಿಚಾರ – ಬೆಂಗಳೂರಿಗೆ ಕೇಂದ್ರದ ವೀಕ್ಷಕರ ಮೊದಲ ತಂಡ ಆಗಮನ

Spread the love

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರ  ಆಯ್ಕೆ ಮತ್ತು ರಾಜ್ಯದಲ್ಲಿ ಎಸ್‌ಐಆರ್ ವಿಚಾರ ಸಂಬಂಧ ಬೆಂಗಳೂರಿಗೆ ಕೇಂದ್ರದ ವೀಕ್ಷಕರ ಮೊದಲ ತಂಡ ಆಗಮಿಸಿದೆ.

ಬಿಜೆಪಿ ರಾಷ್ಟ್ರೀಯ ಜಂಟಿ ಸಂಘಟನಾ ಕಾರ್ಯದರ್ಶಿ ಶಿವಪ್ರಕಾಶ್, ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ ಜಯ್ ಪಾಂಡಾ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಡಾ.ರಾಧಾಮೋಹನ್ ದಾಸ್ ಅಗರ್‌ವಾಲ್ ಬೆಂಗಳೂರಿಗ ಆಗಮಿಸಿದ್ದು, ಗುರುವಾರ ದಿನವಿಡೀ ರಾಜ್ಯ ಬಿಜೆಪಿ ನಾಯಕರಿಂದ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಹಾಗೆಯೇ ಎಸ್‌ಐಆರ್ ನಡೆಯಲಿರುವ ಹಿನ್ನೆಲೆಯಲ್ಲಿ ರಾಜ್ಯ ನಾಯಕರ ಜೊತೆ ಸಭೆ ನಡೆಸಲಿದ್ದಾರೆ.

ಇನ್ನು ಇದೇ ಮೇ 25ರಂದು ಎರಡನೇ ವೀಕ್ಷಕರ ತಂಡವೂ ರಾಜ್ಯಕ್ಕೆ ಆಗಮಿಸುವ ಸಾಧ್ಯತೆ ಇದ್ದು, ಅಂದೂ ಕೂಡ ಬಿಜೆಪಿ ನಾಯಕರ ಜೊತೆ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.

ಇನ್ನು ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಆಯ್ಕೆ ಚರ್ಚೆ ಬೆನ್ನಲ್ಲೇ ಕೋರ್ ಕಮಿಟಿ ಪುನಾರಚನೆ ವಿಚಾರ ಮತ್ತೆ ಸದ್ದು ಮಾಡಿದೆ. 2021ರಿಂದ ರಾಜ್ಯ ಬಿಜೆಪಿ ಕೋರ್ ಕಮಿಟಿ ಪುನಾರಚನೆ ಆಗಿಲ್ಲ. ಕೆಎಸ್ ಈಶ್ವರಪ್ಪ ಹಾಗೂ ಲಕ್ಷ್ಮಣ ಸವದಿ ಸ್ಥಾನಗಳು ತೆರವಾಗಿದ್ದು, ಇನ್ನೂ ಖಾಲಿ ಇವೆ. ಹೀಗಾಗಿ ಕೋರ್ ಕಮಿಟಿಗೆ ಸೇರಲು ಸುನಿಲ್ ಕುಮಾರ್, ಶೋಭಾ ಕರಂದ್ಲಾಜೆ, ವಿ. ಸೊಮಣ್ಣ ಹಾಗೂ ಜಗದೀಶ್ ಶೆಟ್ಟರ್ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.


Spread the love

About Laxminews 24x7

Check Also

ರಾಮನ ಹೆಸರಿನಲ್ಲಿ 20 ಸಾವಿರ ಕೋಟಿ ಲೂಟಿ ಆಗಿದೆ ಅನ್ನೋ ಮಾಹಿತಿ ಇದೆ: ಮಲ್ಲಿಕಾರ್ಜುನ ಖರ್ಗೆ ಆತಂಕ

Spread the love ಚಿಕ್ಕಬಳ್ಳಾಪುರ: ರಾಮಮಂದಿರದ ಹೆಸರಿನಲ್ಲಿ 20 ಸಾವಿರ ಕೋಟಿ ರೂಪಾಯಿ ಲೂಟಿ ನಡೆದಿದೆ ಎಂಬ ಸುದ್ದಿಗಳು ಬರುತ್ತಿವೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ