Breaking News

ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ – ತಪ್ಪಿದ ಭಾರೀ ಅನಾಹುತ

Spread the love

ಮಡಿಕೇರಿ: ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತಸಂಭವಿಸಿ ಬಸ್ ಅಪಘಾತಕ್ಕೀಡಾದ ಘಟನೆ ಮಡಿಕೇರಿ ಸಮೀಪದ ತಾಳತ್ ಮನೆ ಬಳಿ ಇಂದು ಮುಂಜಾನೆ  5 ಗಂಟೆ ಸುಮಾರಿಗೆ ನಡೆದಿದೆ.

ಬೆಂಗಳೂರಿನಿಂದ  ಹೊರಟ ಖಾಸಗಿ ಬಸ್ ಮಡಿಕೇರಿ ಸಮೀಪದ ತಲುಪುತ್ತಿದ್ದಂತೆ ಚಾಲಕನಿಗೆ ತೀವ್ರ ಹೃದಯಾಘಾತ ಸಂಭವಿಸಿದೆ. ಪರಿಣಾಮ ಬಸ್ ರಸ್ತೆ ಪಕ್ಕದ ಇಳಿಜಾರಿಗೆ ವಾಲಿಕೊಂಡಿದೆ.

ತನಗೆ ಹೃದಯಘಾತವಾಗುತ್ತಿದ್ದಂತೆ ಚಾಲಕ ಬಸ್ ನಿಲ್ಲಿಸುವ ಪ್ರಯತ್ನ ಮಾಡಿದ್ದಾನೆ. ಹೃದಯಾಘಾತ ತೀವ್ರವಾಗುತ್ತಿದ್ದಂತೆ ಚಾಲಕ ಚರಂಡಿಯ ಬಳಿ ಬಸ್ ನಿಲ್ಲಿಸಿದ್ದಾನೆ, ಈ ವೇಳೆ ಬಸ್ ಕೊಂಚ ವಾಲಿಕೊಂಡಿದೆ, ಆದಾಗ್ಯೂ ಪ್ರಯಾಣಿಕರ ಜೀವ ಉಳಿಸಿದ್ದಾನೆ. ತಕ್ಷಣವೇ ಚಾಲಕನನ್ನು ಮಡಿಕೇರಿ ಬಳಿ ಇರುವ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಮಡಿಕೇರಿ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಸ್ತೆ ಬದಿಯಲ್ಲಿ ಬಸ್ ವಾಲಿಕೊಂಡು ನಿಂತ ಕಾರಣ ಹೆದ್ದಾರಿಯಲ್ಲಿ ಇತರ ವಾಹನ ಸಂಚಾರಕ್ಕೆ ಯಾವುದೇ ಅಡೆ ತಡೆ ಆಗಿಲ್ಲ. ಇತ್ತ ಘಟನೆಯಿಂದ ಆತಂಕಗೊಂಡ ಪ್ರಯಾಣಿಕರಿಗೆ ಬೇರೆ ವಾಹನಗಳ ವ್ಯವಸ್ಥೆ ಮಾಡಲಾಗಿದೆ.


Spread the love

About Laxminews 24x7

Check Also

ವಿಧಾನ ಪರಿಷತ್‌ ಸಭಾಪತಿಯಾಗಿ ಸಲೀಂ ಅಹಮದ್ ಆಯ್ಕೆ

Spread the love ಬೆಂಗಳೂರು: ಬಸವರಾಜ ಹೊರಟ್ಟಿ ಅವರ ರಾಜೀನಾಮೆಯಿಂದ ತೆರವಾಗಿದ್ದ ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಇಂದು ಸಲೀಂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ