Breaking News

ಕುಡಿದ ಮತ್ತಲ್ಲಿ ಕಿರಿಕ್ – ತಲೆ ಮೇಲೆ ಕಲ್ಲು ಎತ್ತಿಹಾಕಿ ಸ್ನೇಹಿತನ ಕೊಲೆ

Spread the love

ಬೆಂಗಳೂರು: ಕುಡಿದ ಮತ್ತಲ್ಲಿ ಸ್ನೇಹಿತರ  ನಡುವೆ ಕಿರಿಕ್ ಉಂಟಾಗಿ ಗೆಳೆಯನ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರು  ಹೊರವಲಯ ಸರ್ಜಾಪುರ  ಸಮೀಪದ ಮಟ್ಟನಹಳ್ಳಿ  ಕೆರೆ ಬಳಿ ನಡೆದಿದೆ.

ಮೋಹನ್(25) ಕೊಲೆಯಾದ ಯುವಕ. ತಮಿಳುನಾಡಿನ ಸಿಂಗಸದನಪಲ್ಲಿ ಗ್ರಾಮದವನಾದ ಮೋಹನ್ ಗುರುವಾರ ಸಂಜೆ ಸ್ನೇಹಿತನ ಜೊತೆ ಎಣ್ಣೆ ಪಾರ್ಟಿ ಮಾಡಲು ಬಂದಿದ್ದ. ಸ್ನೇಹಿತ ಮನೋಜ್ ಮತ್ತು ಮೋಹನ್ ಕಂಠಪೂರ್ತಿ ಕುಡಿದಿದ್ದರು. ಕುಡಿದ ನಶೆಯಲ್ಲಿ ಮೋಹನ್ ಮತ್ತು ಮನೋಜ್ ನಡುವೆ ಗಲಾಟೆ ನಡೆದಿದೆ. ಈ ವೇಳೆ ಮನೋಜ್ ಅಲ್ಲೇ ಇದ್ದ ಕಲ್ಲನ್ನ ಮೋಹನ್ ತಲೆ ಮೇಲೆ ಎತ್ತಿಹಾಕಿದ್ದಾನೆ. ಘಟನೆ ಪರಿಣಾಮ ಮೋಹನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಘಟನಾ ಸ್ಥಳಕ್ಕೆ ಬೆಂ.ಗ್ರಾಮಾಂತರ ಎಸ್ಪಿ ಚಂದ್ರಕಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಆರೋಪಿ ಮನೋಜ್‌ನನ್ನು ಸರ್ಜಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ