ಬೆಂಗಳೂರು: ಕೊರೊನಾ ನಡುವೆ ಚಿಕಿತ್ಸೆ ಸಿಗದೇ ತಿಂಗಳ ಹಸುಗೂಸೊಂದು ಜೀವ ಬಿಟ್ಟಿದೆ.
ಜುಲೈ 11ರಂದು ಹೃದಯದ ಸಮಸ್ಯೆಗೆ ತುತ್ತಾದ ಒಂದು ತಿಂಗಳ ಮಗುವನ್ನು ಉಳಿಸಿಕೊಳ್ಳಲು ಬೆಂಗಳೂರಿನ ಮಂಜುನಾಥನಗರದ ಪೋಷಕರು ಪಟ್ಟ ಪಾಡು ಅಷ್ಟಿಷ್ಟಲ್ಲ. ಬರೋಬ್ಬರಿ 36 ಗಂಟೆಗಳ ಕಾಲ 200 ಕಿಲೋಮೀಟರ್ ಸುತ್ತಿದ್ರೂ, ಹತ್ತಾರು ಆಸ್ಪತ್ರೆಗಳ ಮೆಟ್ಟಿಲನ್ನು ಹತ್ತಿಳಿದ್ರೂ, ನಿರ್ದಯಿ ಆಸ್ಪತ್ರೆ ಸಿಬ್ಬಂದಿ ಮಗುವನ್ನು ಪರೀಕ್ಷಿಸಿ ಅಡ್ಮಿಟ್ ಮಾಡಿಕೊಂಡಿಲ್ಲ.ಬೆಡ್ ಮತ್ತು ಕೊರೊನಾ ನೆಪ ಹೇಳಿದ ಆಸ್ಪತ್ರೆಗಳು ಮಗುವನ್ನು ಅಡ್ಮಿಟ್ ಮಾಡಿಕೊಳ್ಳಲು ನಿರಾಕರಿಸಿವೆ. ಕೊನೆಗೆ ಸೋಮವಾರ ಸಂಜೆ ಹೊತ್ತಿಗೆ ಮಾರತ್ ಹಳ್ಳಿಯ ಆಸ್ಪತ್ರೆಯೊಂದು ಹಸುಗೂಸನ್ನು ಅಡ್ಮಿಟ್ ಮಾಡಿಕೊಂಡಿದೆ. ಆದ್ರೆ ಅಷ್ಟೊತ್ತಿಗೆ ಸಮಯ ಮೀರಿತ್ತು. ಚಿಕಿತ್ಸೆ ವಿಳಂಬದ ಕಾರಣ ಎಳೆಯ ಕಂದಮ್ಮ ಉಸಿರು ಚೆಲ್ಲಿತು
.