Breaking News

ಶಿಶುಗೀತೆ ರಚಿಸಿದ 6ನೇ ತರಗತಿ ವಿದ್ಯಾರ್ಥಿನಿ

Spread the love

ಬೆಳಗಾವಿ : ನಗರದ ಬಿರ್ಲಾ ಇಂಟರ್‌ನ್ಯಾಷನಲ್ ಸ್ಕೂಲ್‌ನ 6ನೇ ತರಗತಿ ವಿದ್ಯಾರ್ಥಿನಿ 12 ವರ್ಷದ ಲಾವಣ್ಯ ಪೃಥ್ವಿರಾಜ ಕಮ್ಮಾರ ಭಾರತೀಯ ಸಂಸ್ಕೃತಿ, ವೀರ ನಾಯಕರು, ಮಹಿಳೆಯರು ಹಾಗೂ ವಿವಿಧ ಆದರ್ಶ ವ್ಯಕ್ತಿತ್ವಗಳನ್ನು ಆಧರಿಸಿ ಶಿಶುಗೀತೆ(ರೇಮ್ಸ್)ಗಳನ್ನು ರಚಿಸಿದ್ದು ’ದಿ ಶ್ಯಾಡೋ ಆಫ್ ಇನೋಸೆನ್ಸ್ ಆ್ಯಂಡ್ ಇಮ್ಯಾಜಿನೇಷನ್’ ಎಂಬ ಶೀರ್ಷಿಕೆಯ ಕೃತಿ ಬಿಡುಗಡೆಗೆ ಸಜ್ಜಾಗಿದೆ.
ತನ್ನ ಚೊಚ್ಚಲ ಕವನ ಸಂಕಲನ ಸಾಹಿತ್ಯ ಲೋಕಕ್ಕೆ ಪದಾರ್ಪಣೆಗೊಳ್ಳುತ್ತಿರುವ ಹಿನ್ನೆಲೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತನ್ನ ಕೃತಿಯನ್ನು ಪ್ರದರ್ಶಿಸಿ ಮಾತನಾಡಿದ ಲಾವಣ್ಯ ಕಮ್ಮಾರ, ಪೂರ್ವ ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ’ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್’ ಅಥವಾ ’ಜಾಕ್ ಆ್ಯಂಡ್ ಜಿಲ್’ದಂತಹ ಪಾಶ್ಚಾತ್ಯ ಶಿಶು ಗೀತೆಗಳನ್ನೇ ಕಲಿಸಲಾಗುತ್ತದೆ. ಆಧರೆ ನಮ್ಮ ದೇಶದ ಸಂಸ್ಕೃತಿ, ಮೌಲ್ಯಗಳು ಮತ್ತು ನಾಯಕರನ್ನು ಪರಿಚಯಿಸುವ ಪದ್ಯಗಳು ಏಕಿಲ್ಲ ಎಂಬ ವಿಚಾರ ನನಗೆ ಬಂತು. ಇದುವೆ ನನಗೆ ಬರವಣಿಗೆಗೆ ಸ್ಪೂರ್ತಿಯಾಯಿತು ಎಂದು ಹೇಳಿದಳು.
 ರಾಣಿ ಚನ್ನಮ್ಮ, ಭಗತ್ ಸಿಂಗ್, ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಕ್ಯಾಪ್ಟನ್ ವಿಕ್ರಮ್ ಬಾತ್ರಾರಂತಹ ವೀರರು, ಶ್ರೀಕೃಷ್ಣ, ರಾಮ ಮತ್ತು ಶಿವನಂತಹ ದೈವೀ ಶಕ್ತಿಗಳು, ಮಕ್ಕಳಿಗೆ  ಸಂಬಂಧಗಳ ಮಹತ್ವ ತಿಳಿಸುವ ಉದ್ದೇಶದ ಮೌಲ್ಯಕ್ಕೆ ಅನುಗುಣವಾದ ಕವಿತೆಗಳು ನನ್ನ ಕೃತಿಯಲ್ಲಿವೆ. ನನ್ನ ಸುತ್ತಲಿನ ಪ್ರಪಂಚ, ಶಾಲೆ ಮತ್ತು ಬೆಳಗಾವಿಯ ಬಗ್ಗೆ ನನಗಿರುವ ಆಲೋಚನೆಗಳ ಪ್ರತಿಬಿಂಬವಾಗಿಯೂ ಅನೇಕ ಪಂದ್ಯಗಳಿವೆ. ಚಿಕ್ಕಂದಿನಿಂದ ನನ್ನ ತಾಯಿ ವೀರರ ಕುರಿತು ಕತೆಗಳನ್ನು ಹೇಳಿದ್ದರು. ಅದಕ್ಕೆ ಪೂರಕವಾಗಿ ಕೆಲ ಕಿರು ಪುಸ್ತಕಗಳನ್ನು ಓದಿ, ಅರ್ಥೈಸಿಕೊಂಡು ಪಂದ್ಯ ರಚಿಸಿದ್ದೇನೆ. . ಶೀಘ್ರವೇ ಕೃತಿಯನ್ನು ಅಧಿಕೃತವಾಗಿ ಬಿಡುಗಡೆಗೊಳಿಸಲಾಗುವುದು ಎಂದು ಲಾವಣ್ಯ ತಿಳಿಸಿದಳು.
ಪೃಥ್ವಿರಾಜ ಕಮ್ಮಾರ, ತಿಲೋತ್ತಮ ಚವಾಣ, ಜಯರಾಜ ಚವಾಣ, ಜಿತೇಶ ಮೆಣಸಿ ಸುದ್ದಿಗೋಷ್ಠಿಯಲ್ಲಿದ್ದರು.

Spread the love

About Laxminews 24x7

Check Also

ನರ್ಸಿಂಗ್ ಎಂದರೆ ಉದ್ಯೋಗವಲ್ಲ ಅದು ಸೇವಾ ಧರ್ಮ

Spread the loveಬೆಳಗಾವಿ :  ನರ್ಸಿಂಗ್ ಎಂದರೆ ಕೇವಲ ಒಂದು ಉದ್ಯೋಗವಲ್ಲ, ಅದು ಒಂದು ಸೇವಾ ಧರ್ಮ.  ನರ್ಸ್ ಗಳು ಹೃದಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ