Breaking News

ಆಶಾ ಭೋಸ್ಲೆ ಅಗಲಿಕೆಯಿಂದ ಸಂಗೀತದ ಒಂದು ಸುವರ್ಣ ಯುಗ ಅಂತ್ಯ: ಜೋಶಿ ಕಂಬನಿ

Spread the love

ಬೆಂಗಳೂರು: ಖ್ಯಾತ ಹಿನ್ನೆಲೆ ಗಾಯಕಿ , ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತೆ ಆಶಾ ಭೋಸ್ಲೆ ಅಗಲಿಕೆಯಿಂದ ಸಂಗೀತದ ಒಂದು ಸುವರ್ಣ ಯೋಗವೇ ಅಂತ್ಯಗೊಂಡಂತಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್‌ ಜೋಶಿ ಕಂಬನಿ ಮಿಡಿದಿದ್ದಾರೆ.

ಆಶಾ ಭೋಸ್ಲೆ ಅವರು ಭಾರತೀಯ ಸಂಗೀತ ಲೋಕದ ಅಪ್ರತಿಮ ಹಿನ್ನೆಲೆ ಗಾಯಕಿಯಾಗಿದ್ದು, ಇವರ ನಿಧನದ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಗಾನ ಕೋಗಿಲೆ ಅಗಲಿಕೆ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ ಸಚಿವರು.

7 ದಶಕಗಳ ಕಾಲ ಸಂಗೀತ ಲೋಕವನ್ನಾಳಿದ ಈ ಬಹು ಭಾಷಾ ಗಾಯಕಿ, 12,000ಕ್ಕೂ ಹೆಚ್ಚು ಹಾಡುಗಳಿಗೆ ಅದ್ಭುತ ಕಂಠಸಿರಿ ಮೂಲಕ ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅನನ್ಯ ಮತ್ತು ಚಿರಸ್ಮರಣೀಯ. ಅವರ ಹಾಡುಗಳು ಎಂದೆಂದಿಗೂ ಅಮರವಾಗಿ ಉಳಿಯಲಿವೆ ಎಂದು ಜೋಶಿ ಸ್ಮರಿಸಿದ್ದಾರೆ.

ಭಗವಂತ ಆಶಾ ಭೋಸ್ಲೆ ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಹಾಗೂ ಕುಟುಂಬಕ್ಕೆ, ಕೋಟ್ಯಂತರ ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ನೀಡಲೆಂದು ಜೋಶಿ ಪ್ರಾರ್ಥಿಸಿದ್ದಾರೆ.


Spread the love

About Laxminews 24x7

Check Also

ಅನ್ನಸೇವೆ ಆ್ಯಪ್ ರಾಜ್ಯಾದ್ಯಂತ ಲಭ್ಯ; ಅ.20ರೊಳಗೆ e-KYC ಕಡ್ಡಾಯ

Spread the loveಬೆಂಗಳೂರು: ಅನ್ನಭಾಗ್ಯ ಸೇರಿದಂತೆ ಸಾರ್ವಜನಿಕ ವಿತರಣಾ ಯೋಜನೆಗಳ ಫಲಾನುಭವಿಗಳಿಗೆ ಸಿಹಿಸುದ್ದಿ. ಫಲಾನುಭವಿಗಳು ಮನೆಯಲ್ಲೇ ಕುಳಿತು e-KYC ಮಾಡಿಕೊಳ್ಳಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ