Breaking News

ತೀಯ ಪಿಯುಸಿ ಫಲಿತಾಂಶದಲ್ಲಿ ಇಡೀ ರಾಜ್ಯಕ್ಕೆ 2ನೇ ರ್ಯಾಂಕ್

Spread the love

ಬೆಳಗಾವಿ: ಹುಕ್ಕೇರಿ ತಾಲ್ಲೂಕಿನ ನಿಡಸೋಸಿಯ ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಅಂಕಿತ್ ಭೀಮಪ್ಪ ಕಾರತಗಿ ಇಂದು ಪ್ರಕಟವಾದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಇಡೀ ರಾಜ್ಯಕ್ಕೆ 2ನೇ ರ್ಯಾಂಕ್ ಗಳಿಸುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾನೆ.‌

ಮೂಲತಃ ಗೋಕಾಕ್ ತಾಲ್ಲೂಕಿನ ರಾಜಾಪುರ ಗ್ರಾಮದ ಅಂಕಿತ್ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತ ಮತ್ತು ಕನ್ನಡ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಗಳಿಸಿದರೆ, ಇಂಗ್ಲೀಷ ನಲ್ಲಿ ಮಾತ್ರ 98 ಅಂಕ ಪಡೆದಿದ್ದಾನೆ.

ಅಂಕಿತ್ ತಂದೆ ಭೀಮಪ್ಪ ಚಿಕ್ಕೋಡಿಯ ಸಿಮೆಂಟ್ ಅಂಗಡಿಯೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದರೆ, ತಾಯಿ ಸುನೀತಾ ಗೃಹಿಣಿ ಆಗಿದ್ದಾರೆ. ವಸತಿ ಕಾಲೇಜಿನಲ್ಲೆ ಇದ್ದು, ಕಠಿಣ ಪರಿಶ್ರಮದಿಂದ ಓದಿರುವ ಅಂಕಿತ್ ಸಾಧನೆ ಎಲ್ಲರಿಗೂ ಮಾದರಿ ಆಗಿದೆ.

ಬೆಳಗಾವಿ ಸುದ್ದಿಗೆ ಮಾಹಿತಿ ನೀಡಿದ ಪಿಯುಸಿ ಟಾಪರ್ ಅಂಕಿತ್ ಕಾರತಗಿ, 600ಕ್ಕೆ 600 ಅಂಕ ಪಡೆಯುವ ನಿರೀಕ್ಷೆ ಇತ್ತು. ಆದರೆ, ಇಂಗ್ಲೀಷ ನಲ್ಲಿ ಎರಡು ಅಂಕ ಕಳೆದುಕೊಂಡಿದ್ದೇನೆ. ಇದರಿಂದ ಒಂದು ರೀತಿ ದುಃಖವೂ ಇದೆ. ಪ್ರತಿದಿನ 8 ಗಂಟೆ ಅಭ್ಯಾಸ ಮಾಡುತ್ತಿದ್ದೆ. ನಿರಂತರ ಓದು, ಕಾಲೇಜಿನ ಪ್ರಾಧ್ಯಾಪಕರ ಬೆಂಬಲ ಮತ್ತು ಪಾಲಕರ ಪ್ರೋತ್ಸಾಹದಿಂದ ರಾಜ್ಯಕ್ಕೆ 2ನೇ ರ್ಯಾಂಕ್ ಬಂದಿದ್ದೇನೆ.‌ ಮುಂದೆ ಸಾಫ್ಟವೇರ್ ಎಂಜಿನಿಯರ್ ಆಗುವ ಆಸೆ ಇದೆ ಎಂದು ಹೇಳಿದರು‌.


Spread the love

About Laxminews 24x7

Check Also

ಪ್ರತಿಯೊಂದು ಕೆಲಸ ಮಾಡಲು ಪೋಲಿಸರಿಗೆ ಸಾರ್ವಜನಿಕರ ಸಹಕಾರಬೇಕು

Spread the love ಗೋಕಾಕ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಗೋಕಾಕ ಉಪ ವಿಭಾಗದಲ್ಲಿ ಸುಮಾರು 5 ವರ್ಷಗಳ ಹಿಂದಿನಿಂದ ಕಳೆದುಹೋದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ