Breaking News

ಇಸ್ರೇಲ್, ಅಮೇರಿಕಾ ಹಾಗೂ ಇರಾನ್ ಯುದ್ಧ ಹಿನ್ನಲೆ, ಧಾರವಾಡದಲ್ಲಿ ಕಟ್ಟಿಗೆ ಸೌದೆ ಗೆ ಹೆಚ್ಚುದ ಡಿಮ್ಯಾಂಡ್ …

Spread the love

ಅಮೇರಿಕ ಇಸ್ರೇಲ್ ಇರಾನ್ ಯುದ್ಧ 38ನೇಯ ದಿನಕ್ಕೆ ಕಾಲಿಟ್ಟಿದ್ದು, ಇದರ ಪರಿಣಾಮ ಭಾರತದಲ್ಲಿ ಎಲ್ ಪಿ ಜಿ ಬಳಕೆದಾರರ ಮೇಲೆ ಬೀಳುತ್ತಿದೆ. ಯುದ್ಧದಿಂದ ಎಲ್ ಪಿ ಜಿ ಅಭಾವತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಧಾರವಾಡದಲ್ಲಿ ಸೌದೆ ಹಾಗೂ ಕಟ್ಟಿಗೆಗೆ ಫುಲ್ ಡಿಮ್ಯಾಂಡ್ ಉಂಟಾಗಿದೆ.

ಹೌದು,… ಎಲ್ ಪಿ ಜಿ ಅಭಾತೆಯಿಂದಾಗಿ ಈಗ ಧಾರವಾಡದಲ್ಲಿ ಹೋಟೆಲ್ ರೆಸ್ಟೋರೆಂಟ್ ಮಾಲೀಕರು ಸೇರಿದಂತೆ ಮನೆಗಳಿಗೂ ಜನ ಈಗ ಸೌದೆ ಕಟ್ಟಿಗೆ ಒಲೆಯ ಕಡೆಗೆ ಮುಖ ಮಾಡುತ್ತಿದ್ದಾರೆ. ಯುದ್ಧ ಹಿನ್ನಲೆಯಲ್ಲಿ ಧಾರವಾಡದಲ್ಲಿ ಒಂದು ಕೆಜಿ ಸೌದೆ ಕಟ್ಟಿಗೆ ಈಗ 90 ರಿಂದ 100 ರೂಪಾಯಿ ದರ ಹೆಚ್ಚಳವಾಗಿ ಮಾರಾಟ ಮಾಡುತ್ತಿದ್ದಾರೆ. ಯುದ್ಧ ಆರಂಭದ ಮೊದಲು ದಿನಕ್ಕೆ 1 ರಿಂದ 1.50.ಟನ್ ಕಟ್ಟೆಗೆ ಮಾರಾಟವಾಗುತ್ತಿಂತೆ. ಈಗ ಗ್ಯಾಸ್ ಸಿಲಿಂಡರ್ ಅಭಾವದ ಹಿನ್ನೆಲೆಯಲ್ಲಿ 2 ರಿಂದ 3 ಟನ್ ಸೌದೆ ಮಾರಾಟವಾಗುತ್ತಿದೆ. ಮೊದಲು 1 ಕ್ವಿಂಟಲ್ ಗೆ 1000 ದರ ಇತ್ತು ಆದರೆ ಈಗ 1200 ರೂ ದರ ಹೆಚ್ಚಳವಾಗಿದೆ. ಯುದ್ಧದಿಂದಾಗಿ ಎಲ್ ಪಿ ಜಿ ತೀವ್ರ ಅಭಾವತೆ ಉಂಟಾಗುತ್ತಿದ್ದು, ಇದರಿಂದಾಗಿ ಈಗ ಜನ ಹಳೇಯ ಒಲೆಯ ಪದ್ಧತಿಗೆ ಮೊರೆ ಹೋಗುವಂತಾಗಿದೆ.


Spread the love

About Laxminews 24x7

Check Also

ರಾಜ್ಯದಲ್ಲಿ SIR ಲೋಪ – ಬಿಜೆಪಿ, ಜೆಡಿಎಸ್‌ನ ಮೈತ್ರಿ ನಾಯಕರಿಂದ ಮುಖ್ಯ ಚುನಾವಣಾಧಿಕಾರಿಗೆ ದೂರು

Spread the loveಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್‌ನಲ್ಲಿ  ಕೆಲವು ಲೋಪ ಕಂಡುಬಂದ ಹಿನ್ನೆಲೆ ಬಿಜೆಪಿ, ಜೆಡಿಎಸ್  ಮೈತ್ರಿ ನಾಯಕರು ಮುಖ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ