ಹಸಿರುಕ್ರಾಂತಿ ಹರಿಕಾರ, ರಾಷ್ಟ್ರ ನಾಯಕ, ಮಾಜಿ ಉಪ ಪ್ರಧಾನಿ ಹಾಗೂ ತಳ ಸಮುದಾಯಗಳ ಆಶಾಕಿರಣ
ಡಾ. ಬಾಬು ಜಗಜೀವನರಾಮ್ ರವರ 119ನೇ ಜಯಂತೋತ್ಸವದಲ್ಲಿ ಬಾಬುಜಿ ರವರ ಪ್ರತಿಮೆಗೆ ಪುಷ್ಪಾರ್ಚನೆ ನಡೆಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾನ್ಯ ಆಹಾರ ಸಚಿವರಾದ ಕೆಹೆಚ್. ಮುನಿಯಪ್ಪ ರವರ.
ವಿಧಾನ ಸೌಧದ ಮುಂಭಾಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು.
ಹಸಿರುಕ್ರಾಂತಿ ಹರಿಕಾರ, ರಾಷ್ಟ್ರ ನಾಯಕ, ಮಾಜಿ ಉಪ ಪ್ರಧಾನಿ ಸಮರ್ಥ ಸಂಸದೀಯ ಹೋರಾಟಗಾರ ಮತ್ತು ಹಿರಿಯ ದಲಿತ ಚೇತನ ಡಾ. ಬಾಬು ಜಗಜೀವನ್ ರಾಮ್ ರವರ 119ನೇ ಜನ್ಮ ದಿನೋತ್ಸವದ ಶುಭಾಷಯಗಳು.
. ಸ್ವಾತಂತ್ರ್ಯ ಹೋರಾಟಗಾರ ಮತ್ತು ಮಾಜಿ ಉಪ ಪ್ರಧಾನಿ 5, 1908 ಜನಿಸಿದರು. ಅವರ ಜನ್ಮದಿನವನ್ನು ಭಾರತದಾದ್ಯಂತ ‘ಸಮತಾ ದಿವಸ್’ ಅಥವಾ ‘ಸಮಾನತೆ ದಿನ’ ಎಂದು ಆಚರಿಸಲಾಗುತ್ತಿದೆ.
ಜಗಜೀವನ್ ರಾಮ್ ಬಿಹಾರದ ಚಾಂದ್ಯಾದಲ್ಲಿ ದಲಿತ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಬ್ರಿಟಿಷ್ ಸೈನ್ಯದಲ್ಲಿದ್ದರು.
– ಶಾಲಾ ಶಿಕ್ಷಣವನ್ನು ಅರ್ರಾ ಪಟ್ಟಣದಲ್ಲಿ ಕಲಿತರು, ಅಲ್ಲಿ ಅವರು ಮೊದಲ ಬಾರಿಗೆ ತಾರತಮ್ಯವನ್ನು ಎದುರಿಸಿದರು. ಅವರನ್ನು “ಅಸ್ಪೃಶ್ಯ” ಎಂದು ಪರಿಗಣಿಸಲಾಯಿತು ಮತ್ತು ಬೇರೆ ಮಡಕೆಯಿಂದ ನೀರು ಕುಡಿಯಬೇಕಾಯಿತು. ಜಗಜೀವನ್ ರಾಮ್ ಇದನ್ನು ವಿರೋಧಿಸಿ ಮಡಕೆಯನ್ನು ಒಡೆದರು. ನಂತರ ಪ್ರಾಂಶುಪಾಲರು ಶಾಲೆಯಿಂದ ಪ್ರತ್ಯೇಕ ಮಡಕೆಯನ್ನು -ತೆಗೆದುಹಾಕಬೇಕಾಯಿತು.
ಮಹಾನ್ ನಾಯಕ ಬಾಬು ಜಗಜೀವನ್ ರಾಮ್ ರವರ ಜೀವನ ನಮಗೆ ಮಾರ್ಗದರ್ಶನ
ಅವರ ರಾಜಕೀಯ ಜೀವನದುದ್ದಕ್ಕೂ ಕೇಂದ್ರದಲ್ಲಿ ಸಚಿವರಾಗಿಯೇ ಕಾರ್ಯ ನಿರ್ವಹಿಸಿ ಸುದೀರ್ಘ ಸಂಸದರಾಗಿ ಸೇವೆ ಸಲ್ಲಿಸಿರುವ ಮಹಾನ್ ಚೇತನ ಬಾಬುಜಿ ರವರ 119 ನೇ ಜನ್ಮದಿನದ ಶುಭಾಶಯ ಮತ್ತೊಮ್ಮೆ ತಿಳಿಸುತ್ತೇನೆ
ಒಳಮೀಸಲಾತಿ ವಿಚಾರದಲ್ಲಿ ಕೆಲವರು ಮಹದೇವಪ್ಪ ರವರ ಬಗ್ಗೆ ಜಟುವಾಗಿ ಮಾತಾನಾಡಿದ್ದಾರೆ ಅದು ಒಳ್ಳೆಯ ಬೆಳವಣಿಗೆ ಅಲ್ಲಾ ಅವರ ಮುಂದಾಳತ್ವ ಒಳಮೀಸಲಾತಿ ಅನುಷ್ಠಾನ ಆಗಲಿದೆ ಅವರ ನೇತೃತ್ವದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಉಪ ಚುನಾವಣೆ ಹಿನ್ನಲೆಯಲ್ಲಿ ಮುಂದೂಡಿದ್ದು ಮುಂದಿನ ಕೆಲವೆ ದಿನಗಳಲ್ಲಿ ಇದರ ಸಾದಕ ಬಾದಕಗಳ ಚರ್ಚಿಸಿ ಅತಿ ಶೀಘ್ರದಲ್ಲಿ ಒಳಮೀಸಲಾತಿಯನ್ನು ಮುಖ್ಯಮಂತ್ರಿಗಳು ಅನುಷ್ಠಾನ ಮಾಡಲಿದ್ದಾರೆ
ಸಮುದಾಯದ ನಾವೆಲ್ಲಾರು ಒಗ್ಗಟ್ಟಾಗಿರಬೇಕು ನಾವು ಒಂದಾಗಿದ್ದರೆ ಏನು ಬೇಕಾದರು ಸಾದಿಸಬಹುದು ಸಂಘಟನೆಯ ಮುಖಂಡರು ಗೊಂದಲಕ್ಕೆ ಒಳಗಾಗದಿರಿ ನಮ್ಮ ಸರ್ಕಾರ ನುಡಿದಂತೆ ನಡೆಯಲಿದ್ದು ಒಳಮೀಸಲಾತಿ ಅನುಷ್ಠಾನಕ್ಕೆ ಬದ್ದವಾಗಿದೆ ಎಂದರು
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಹೆಚ್.ಸಿ.ಮಹದೇವಪ್ಪ, ಸಲಹೆಗಾರ ವೆಂಕಟಯ್ಯ,ಸರ್ಅಕರದ ಕಾರ್ಯದರ್ಶಿ ರಣದೀಪ್, ಕೈಸ್ ನ ಇಡಿ ಕಾಂತರಾಜ್,ಅಂಬೇಡ್ಕರ್ ನಿಗಮದ ನಿರ್ದೇಶಕರಾದ ಸತ್ಯಬಾಮ,ಸಚಿವರ ಆಪ್ತ ಕಾರ್ಯದರ್ಶಿ ಡಾ.ಹೆಚ್.ನಟರಾಜ್, ಜಗಜೀವನ್ ರಾಮ್ ಪ್ರಶಸ್ತಿ ಪುರಸ್ಕೃತರು, ಸಮುದಾಯದ ಮುಖಂಡರು ಅಧಿಕಾರಿಗಳು ಉಪಸ್ಥಿತರಿದ್ದರು.
Laxmi News 24×7