Breaking News

ಬೆಳಗಾವಿ: ಶಹಾಪುರದ ಸಂಕಟ ವಿಮೋಚನ ಹನುಮಾನ್ ಮಂದಿರದಲ್ಲಿ ಮಾರುತಿ ಜಯಂತಿ ಸಮಾರೋಪ; ಭಕ್ತ ಸಾಗರಕ್ಕೆ ಮಹಾಪ್ರಸಾದ ವಿನಿಯೋಗ!

Spread the love

ಬೆಳಗಾವಿ ಶಹಾಪುರದ ಕಚೇರಿ ಗಲ್ಲಿ, ಮಹಾತ್ಮಾ ಫೂಲೆ ರಸ್ತೆಯಲ್ಲಿರುವ ಸಂಕಟ ವಿಮೋಚನ ಹನುಮಾನ ಮಂದಿರದಲ್ಲಿ ಶನಿವಾರ ಸಂಜೆ ಮಾರುತಿ ಜಯಂತಿ ಸಮಾರೋಪದ ಹಿನ್ನೆಲೆ ಮಹಾಪ್ರಸಾದವನ್ನು ಆಯೋಜಿಸಲಾಗಿತ್ತು.

ಬೆಳಗಾವಿ ಶಹಾಪುರದ ಕಚೇರಿ ಗಲ್ಲಿ, ಮಹಾತ್ಮಾ ಫೂಲೆ ರಸ್ತೆಯಲ್ಲಿರುವ ಸಂಕಟ ವಿಮೋಚನ ಹನುಮಾನ ಮಂದಿರದಲ್ಲಿ ಶನಿವಾರ ಸಂಜೆ ಮಾರುತಿ ಜಯಂತಿ ಸಮಾರೋಪದ ಹಿನ್ನೆಲೆ ಮಹಾಪ್ರಸಾದವನ್ನು ಆಯೋಜಿಸಲಾಗಿತ್ತು. ಹನುಮಾನ ಜಯಂತಿಯ ದಿನದಿಂದ ಶನಿವಾರದ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶನಿವಾರ ಸಂಜೆ ಮಹಾಪ್ರಸಾದದೊಂದಿಗೆ ಪ್ರಸ್ತುತ ವರ್ಷದ ಹನುಮಾನ ಜಯಂತ್ಯೋತ್ಸವ ಕಾರ್ಯಕ್ರಮ ಸಮಾರೋಪಗೊಂಡಿತು.

ಶಹಾಪುರದ ಕಚೇರಿ ಗಲ್ಲಿಯಲ್ಲಿ 1991 ರಲ್ಲಿ ಶ್ರೀ ಮಾರುತಿ ಮಂದಿರ ಸ್ಥಾಪನೆಯಾಯಿತು. ಕಾಲಾನಂತರ ಭಕ್ತರ ಸಹಯೋಗದಲ್ಲಿ ಬೃಹತ್ ಮಂದಿರ ನಿರ್ಮಾಣವಾಗಿದ್ದು, ಪ್ರತಿ ಹನುಮಾನ ಜಯಂತಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಮತ್ತು ಮಹಾಪ್ರಸಾದವನ್ನು ಆಯೋಜಿಸಲಾಗುತ್ತದೆ. ಪ್ರತಿವರ್ಷ ಸುಮಾರು 5 ಸಾವಿರ ಭಕ್ತರು ಮಹಾಪ್ರಸಾದವನ್ನು ಸ್ವೀಕರಿಸುತ್ತಾರೆಂದು ಪ್ರವೀಣ್ ಚತುರ್ ಇನ್ ನ್ಯೂಸ್’ಗೆ ತಿಳಿಸಿದರು.

ಮಹಾಪ್ರಸಾದವನ್ನು ಯಶಸ್ವಿಗೊಳಿಸಲು ಶಿವ ಸಮ್ರಾಟ್ ಯುವಕ ಮಂಡಳ ಸೇರಿದಂತೆ ಸ್ಥಳೀಯ ಭಕ್ತರು ಶ್ರಮವಹಿಸಿದರು. ಮಂದಿರದ ಆವರಣದಲ್ಲಿ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿತ್ತು. ಹನುಮ ನಾಮ ಸ್ಮರಣೆಯೊಂದಿಗೆ ಇಡೀ ಶಹಾಪುರ ಭಾಗದಲ್ಲಿ ಆಧ್ಯಾತ್ಮಿಕ ಕಳೆ ಮನೆ ಮಾಡಿತ್ತು, ಭಕ್ತರು ಭಕ್ತಿಭಾವದಿಂದ ಮಾರುತಿಯ ದರ್ಶನ ಪಡೆದು ಪುನೀತರಾದರು.


Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ