ಬಾಗಲಕೋಟೆ: ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದ್ದು ಬಿಜೆಪಿ ಪ್ರಚಾರಕ್ಕೆ ಜನ ಬೆಂಬಲ ಪ್ರವಾಹದಂತೆ ಹರಿಯುತ್ತಿದೆ. ಇಂದು ಶಾಸಕ ಬಸನಗೌಡ ಯತ್ನಾಳ ಅವರು ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಪರವಾಗಿ ಗ್ರಾಮೀಣ ಪ್ರದೇಶಗಳಾದ ಸುತಗುಂಡಾರ, ಮುಗಳೊಳ್ಳಿ, ಚಿಕ್ಕಮ್ಯಾಗೇರಿ, ಹಿರೇಮ್ಯಾಗೇರಿಗಳಲ್ಲಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರದ ದುರಾಡಳಿತ, ಒಂದು ಕೋಮಿನವರಿಗೆ ಆದ್ಯತೆ ನೀಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದೂಳಿದ ಸಮುದಾಯದವರಿಗೆ ಮಾಡುತ್ತಿರುವ ಅನ್ಯಾಯಕ್ಕೆ ಬೇಸತ್ತ ಮತದಾರರು ತಕ್ಕ ಉತ್ತರ ಕೊಡಲು ಚುನಾವಣೆ ದಿನಕ್ಕಾಗಿ ಕಾಯುತ್ತಿದ್ದಾರೆ. ಹಿಂದಿನ ಬಾರಿಗೆ ಆದ ತಪ್ಪನ್ನು ಈ ಬಾರಿ ಮರುಕಳಿಸದೇ ವೀರಣ್ಣ ಚರಂತಿಮಠ ಅವರನ್ನು ಗೆಲ್ಲಿಸಿ. ಹಿಂದೂಗಳ ಒಗ್ಗಟ್ಟಿನಿಂದ ದೇಶವನ್ನು ಬಲಿಷ್ಠವಾಗಿ ಕಟ್ಟಲು ಸಾಧ್ಯ ಎಂದರು.
ಪ್ರತಿ ಗ್ರಾಮದಲ್ಲಿಯೂ ಉತ್ಸಾಹ, ಹುಮ್ಮಸ್ಸಿನಿಂದ ಜನ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಗೆಲುವಿನ ಭರವಸೆ ನೀಡಿದರು. ಮುಗಳೊಳ್ಳಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ ಅವರಿಗೆ ಹೆಗಲಮೇಲೆ ಕಂಬಳಿ ಹೊರಿಸಿ ಕುರಿಮರಿ ಉಡುಗರೆ ನೀಡಿದರು.
ಈ ವೇಳೆ ಮಾಜಿ ಶಾಸಕ ರಮೇಶ ಬುಸನೂರ, ಸಂಗಣ್ಣ ಕಲಾದಗಿ, ಮೋಹನ ಜಾದವ ಸೇರಿದಂತೆ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
Laxmi News 24×7