Breaking News

ಪ್ರತಿ ಹಳ್ಳಿಗೆ 5-10 ಲಕ್ಷ ಹಣ ಹಂಚುತ್ತಿರುವ ಕಾಂಗ್ರೆಸ್: ಛಲವಾದಿ ಆರೋಪ

Spread the love

ಬೆಂಗಳೂರು: ಬಾಗಲಕೋಟೆಯ ಪ್ರತಿ ಹಳ್ಳಿಗೆ 5ರಿಂದ 10 ಲಕ್ಷ ರೂ.ಯನ್ನು ಕಾಂಗ್ರೆಸ್ ಪಕ್ಷ ಹಂಚುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ  ಅವರು ಆರೋಪಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಾಗಲಕೋಟೆಯ  ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ಖಚಿತ. ಚರಂತಿಮಠರನ್ನು ಗೆಲ್ಲಿಸಲು ಜನರು ತೀರ್ಮಾನ ಮಾಡಿದ್ದಾರೆ. ಮುಸ್ಲಿಮರೂ ಕೂಡ ಬಿಜೆಪಿ ಬೆಂಬಲಕ್ಕೆ ನಿಂತಿದ್ದಾರೆ. ಹಳ್ಳಿಗಳಲ್ಲಿ ಸೋಲು ಖಚಿತವೆಂದು ಗೊತ್ತಾದ ಬಳಿಕ ಮುಖ್ಯಮಂತ್ರಿಗಳು 5 ದಿನ ಅಲ್ಲೇ ಠಿಕಾಣಿ ಹೂಡಿದ್ದಾರೆ. ಕೆಲವೆಡೆ ರಸ್ತೆಗಳನ್ನು ಕೆಂಪು ಮಣ್ಣಿನಿಂದ ಮುಚ್ಚಿದ್ದಾರೆ. ಕಾಂಗ್ರೆಸ್  ಪಕ್ಷಕ್ಕೆ ಕಾರ್ಯಕರ್ತರು ಸಿಗುತ್ತಿಲ್ಲ. ಆದ್ದರಿಂದ ಸರ್ಕಾರಿ ನೌಕರರು, ಶಿಕ್ಷಕರನ್ನು ಬಳಸಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಭೇಟಿಗೂ ಮೊದಲು ಒಂದೊಂದು ಹಳ್ಳಿಗೆ 5ರಿಂದ 10 ಲಕ್ಷ ಹಣ ಹಂಚುತ್ತಿದ್ದಾರೆ ಎಂದು ಹೇಳಿದರು.

ಮಧ್ಯಪ್ರಾಚ್ಯದಲ್ಲಿ ಯುದ್ಧ ಪ್ರಾರಂಭವಾಗಿದೆ. ಕಚ್ಚಾ ತೈಲಕ್ಕಾಗಿ ನಾವು ಗಲ್ಫ್ ರಾಷ್ಟ್ರಗಳನ್ನು ಅವಲಂಬಿಸಿದ್ದೇವೆ. ಹೀಗಾಗಿ ಅವುಗಳ ಬೆಲೆಯಲ್ಲಿ ಏರಿಕೆ ಆಗಬಹುದು. ಕಾಂಗ್ರೆಸ್‌ನವರು ಗ್ಯಾರಂಟಿ ಮುಂದಿಟ್ಟು ಬೆಲೆ ಏರಿಸುತ್ತಲೇ ಬಂದಿದ್ದಾರೆ. ಇವರ ಜನವಿರೋಧಿ ನೀತಿಗಳಿಗೆ ಬಿಜೆಪಿಯನ್ನು ಟ್ಯಾಗ್ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.

ದಾವಣಗೆರೆಯಲ್ಲಿ  ಸಾದಿಕ್ ಪೈಲ್ವಾನರನ್ನು ಕಾಂಗ್ರೆಸ್‌ನವರು ತಪ್ಪು ದಾರಿಗೆ ಎಳೆದ ಭಾವನೆ ಇದೆ. ಹೀಗಾಗಿ ಮುಸ್ಲಿಮರು ಅಲ್ಲಿ ಮತ ಹಾಕದೇ ಇರಲು ತೀರ್ಮಾನಕ್ಕೆ ಬಂದಿದ್ದಾರೆ. ಎಸ್‌ಡಿಪಿಐ ಅಭ್ಯರ್ಥಿಯೂ ಇದ್ದಾರೆ. ನಲಪಾಡ್ ಮುಸ್ಲಿಮರನ್ನೇ ದಿದ್ದಾರೆ. ಇದರಿಂದ ಮುಸ್ಲಿಮರು ಇನ್ನಷ್ಟು ಕೋಪಗೊಂಡಿದ್ದಾರೆ. ಇವೆಲ್ಲವೂ ಕಾಂಗ್ರೆಸ್ಸಿನ ಸೋಲಿಗೆ ಕಾರಣ ಆಗಬಹುದು. ಕಾಂಗ್ರೆಸ್ಸಿನಲ್ಲಿ ಅಭ್ಯರ್ಥಿ ವಿಚಾರದಲ್ಲಿ ಅಸಮಾಧಾನವಿದೆ. ಕಾಂಗ್ರೆಸ್ಸಿನವರೇ ಸೇರಿ ಬಿಜೆಪಿಯನ್ನು ಎರಡೂ ಕಡೆ ಗೆಲ್ಲಿಸಬಹುದು ಎಂದರು.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ