ಬಾಗಲಕೋಟೆ : ಉಪಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ಮತದಾನ ಮಾಡಿ, ಆಮಿಶಗಳಿಗೆ ಬಲಿಯಾಗದೆ ಅಭಿವೃದ್ಧಿಪರವಾದ ಬಿಜೆಪಿ ಬೆಂಬಲಿಸಿ ದೇಶಕ್ಕೆ ಮೋದಿ ಬಾಗಲಕೋಟೆಗೆ ಚರಂತಿಮಠ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ಅಚನೂರಿನಲ್ಲಿ ಮತಯಾಚನೆಯ ಸಂದರ್ಭದಲ್ಲಿ ಮಾತನಾಡಿದ ಅವರು ಗ್ರಾ.ಪಂ, ತಾ.ಪಂ ಚುನಾವಣೆಯಂತೆಯೇ ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ. ಹಣಕ್ಕಿಂತ ದೇಶ ಮತ್ತು ಧರ್ಮ ಮುಖ್ಯ, ಮೋದಿ ವ್ಯಕ್ತಿಯಾಗಿರದೇ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಅವರ ಕೈ ಬಲಪಡಿಸಲು ಬಿಜೆಪಿಯನ್ನು ತಳಮಟ್ಟದಿಂದ ಗೆಲ್ಲಿಸುವ ಕೆಲಸ ಮಾಡಬೇಕು. ಕುತಂತ್ರಕ್ಕೆ ಬಲಿಯಾಗದಿರಿ ಪಕ್ಷನಿಷ್ಠರಾಗಿ ಕಾರ್ಯನಿರ್ವಹಿಸಿ. ಚರಂತಿಮಠರ ಅಭಿವೃದ್ಧಿ ಕೆಲಸದಿಂದ ಹಳ್ಳಿಗಳಲ್ಲಿ ಬದಲಾವಣೆಯಾಗಿದ್ದು ಬಿಜೆಪಿ ಪರವಾದ ವಾತಾವರಣ ನಿರ್ಮಾಣವಾಗಿದೆ. ನಗರ ಪ್ರದೇಶಗಳು ಸಂಪೂರ್ಣವಾಗಿ ಕಮಲ ಪಕ್ಷದ ಬೆಂಬಲಕ್ಕಿವೆ ಸಮರ್ಪಕವಾದ ಮತದಾನ ಮಾಡಿ ಅಭ್ಯರ್ಥಿಗಳನ್ನು ಗೆಲ್ಲಿಸಿ. ಕಾಂಗ್ರೆಸ್ ಹಂಚುವ ಹಣವು ನಿಮ್ಮದೇ ಅವರ ಗ್ಯಾರಂಟಿಗಳ ಹೆಸರಿನಲ್ಲಿ ಅಭಿವೃದ್ಧಿ ಕಾರ್ಯ ನಿಲ್ಲಸಿ ಜನರಿಂದ ವಸೂಲಿ ಮಾಡಿದ ಹಣವನ್ನು ನಿಮಗೆ ಕೊಡಲು ಮುಂದಾಗಿದ್ದಾರೆ. ಇನ್ನು ಗೃಹಲಕ್ಷ್ಮೀ ಹಣದಲ್ಲಿ ಹಗರಣ ಮಾಡಿದ ಬಿಜೆಪಿಗೆ ತಕ್ಕ ಪಾಠ ಕಲಿಸಿ, ಸಣ್ಣ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವಂತ ಪರಿಸ್ಥಿತಿಗೆ ತಂದಿದ್ದಾರೆ. ಕಳೆದ ಮೂರು ವರ್ಷಗಳಿಂದ ಒಬ್ಬ ಬಡವರಿಗೂ ಒಂದು ಮನೆ ಜಾರಿ ಮಾಡಿಲ್ಲ, ಬಿಪಿಎಲ್ ಕಾರ್ಡ್, ಸಂಧ್ಯಾಸುರಕ್ಷಾ ಯೋಜನೆಗಳನ್ನು ರದ್ದು ಮಾಡಿದ ದುರಾಡಳಿತ ಸರಕಾರಕ್ಕೆ ತಕ್ಕ ಉತ್ತರ ನೀಡುವ ಕೆಲಸವನ್ನು ಉಪಚುನಾವಣೆಯಲ್ಲಿ ಮಾಡೋಣ ಎಂದರು.
ವೀರಣ್ಣ ಚರಂತಿಮಠ ಅವರು ಮಾತನಾಡಿ ಅಚನೂರ ಪ್ರದೇಶಕ್ಕೆ ನೀರಾವರಿ ಆಗಲು ಸಾಧ್ಯವಿಲ್ಲ ಎಂದು ಹೇಳುವ ಸಂದರ್ಭದಲ್ಲಿ 50 ಸಾವಿರ ಎಕರೆ ಜಮೀನಿಗೆ ತಂದ ನೀರಾವರಿಯ ಯೋಜನೆಯನ್ನು ಕಾಂಗ್ರೆಸ್ ರದ್ದು ಮಾಡಿ ಜನರ ಜೀವನದ ಜೊತೆ ಆಟವಾಡಿದೆ. ಮತದಾರರು ಬಿಜೆಪಿ ಆಡಳಿತದ ಅಭಿವೃದ್ಧಿ ಕಾರ್ಯ ಅರಿತು ಹೆಚ್ಚು ಮತದಾನ ಮಾಡಿ ಬಿಜೆಪಿಗೆ ಬೆಂಬಲ ನೀಡಿ. ಪ್ರಚಾರಕ್ಕೆ ಯಾರೇ ಬಂದರೂ ಯಾರಿಗೆ ಮತ ನೀಡಬೇಕು ಎಂಬ ನಿರ್ಧಾರ ನಿಮ್ಮದು ಜವಾಬ್ದಾರಿಯಿಂದ ಕಮಲ ಗೆಲ್ಲಿಸುವ ಕಾರ್ಯಮಾಡಿ ಎಂದರು.
Laxmi News 24×7