Breaking News

ದಾವಣಗೆರೆಯಲ್ಲಿ ಕಾಂಗ್ರೆಸ್‌ ವಿರುದ್ಧ ಸಮರ – ಬಂಡಾಯ ಅಭ್ಯರ್ಥಿ ಸೇರಿದಂತೆ 23 ಮಂದಿ ಮುಸ್ಲಿಮ್‌ ನಾಯಕರಿಂದ ನಾಮಪತ್ರ ಸಲ್ಲಿಕೆ

Spread the love

ದಾವಣಗೆರೆ: ಸಮರ್ಥ್ ಶಾಮನೂರು  ಟಿಕೆಟ್‌ ನೀಡಿದ್ದಕ್ಕೆ ಕಾಂಗ್ರೆಸ್ (Congress) ವಿರುದ್ದ ಅಲ್ಪಸಂಖ್ಯಾತ ನಾಯಕರು ಸಮರ ಸಾರಿದ್ದಾರೆ. 23 ಮಂದಿ ಮುಸ್ಲಿಮ್‌ ನಾಯಕರು  ನಾಮಪತ್ರ ಸಲ್ಲಿಕೆ ಮಾಡುವ ಮೂಲಕ ಬಂಡಾಯದ ಬಿಸಿ ಮುಟ್ಟಿಸಿದ್ದಾರೆ.

ಶಾಮನೂರು ಶಿವಶಂಕರಪ್ಪಅವರ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ  ಕ್ಷೇತ್ರದ ಟಿಕೆಟ್‌ ನಮಗೆ ನಮ್ಮ ಸಮುದಾಯ ನಾಯಕರಿಗೆ ನೀಡಬೇಕೆಂದು ಮುಸ್ಲಿಮ್‌ ನಾಯಕರು ಪಟ್ಟು ಹಿಡಿದಿದ್ದರು. ಆದರೆ ಕಾಂಗ್ರೆಸ್‌ ಹೈಕಮಾಂಡ್‌ ಮುಸ್ಲಿಮರ ಬೇಡಿಕೆಗೆ ಸ್ಪಂದಿಸದೇ ಎಸ್‌ಎಸ್‌ ಮಲ್ಲಿಕಾರ್ಜುನ್‌ ಪುತ್ರ ಸಮರ್ಥ್‌ಗೆ ಟಿಕೆಟ್‌ ನೀಡಿತ್ತು.

ಅಧಿಕೃತವಾಗಿ ಈ ವಿಚಾರ ಪ್ರಕಟಗೊಂಡ ನಂತರ ನಮ್ಮ ಸಮುದಾಯದಿಂದ 100ಕ್ಕೂ ಹೆಚ್ಚು ನಾಮಪತ್ರ ಸಲ್ಲಿಸಬೇಕು ಎಂದು ಮುಸ್ಲಿಮರು ಕರೆ ನೀಡಿದ ಬೆನ್ನಲ್ಲೇ ಇಂದು 23 ಮಂದಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಸಾವಿರಾರು ಕಾರ್ಯಕರ್ತರ ಜೊತೆ ಮೆರವಣಿಗೆ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಿರುವ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಸಾಧಿಕ್ ಪೈಲ್ವಾನ್‌ ಪ್ರತಿಕ್ರಿಯಿಸಿ, ಯಾವುದೇ ಕಾರಣಕ್ಕೂ ಕಣದಿಂದ ಹಿಂದೆ ಸರಿಯುವುದಿಲ್ಲ. ಕೊನೆ ಕ್ಷಣಗಳವರೆಗೆ ನಮಗೆ ಟಿಕೆಟ್ ಸಿಗುತ್ತದೆ ಎನ್ನುವ ವಿಶ್ವಾಸ ಇತ್ತು. ಆದರೆ ನಮಗೆ ಟಿಕೇಟ್ ಸಿಗದಕ್ಕೆ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಶಾಮನೂರು ಶಿವಶಂಕರಪ್ಪ ನವರು ನಮಗೆ ಗುರುಗಳು ನಾನು ಶಿಷ್ಯ. ಅವರಿಗಾಗಿ ದುಡಿದುಕೊಂಡು ಬಂದಿದ್ದೇವೆ. ಅವರ ಮಾರ್ಗದರ್ಶನದಲ್ಲೇ ಚುನಾವಣೆ ಮಾಡಿಕೊಂಡು ಬಂದಿದ್ದು ಚುನಾವಣೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು.


Spread the love

About Laxminews 24x7

Check Also

ಕೈ ಟಿಕೆಟ್ ಘೋಷಣೆ ಮುನ್ನವೇ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ

Spread the loveದಾವಣಗೆರೆ : ಕರ್ನಾಟಕದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ ಒಂಬತ್ತರಂದು ಉಪಚುನಾವಣೆ ನಡೆಯಲಿದೆ. ಆಪೈಕಿ, ದಾವಣಗೆರೆ ದಕ್ಷಿಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ