ದಾವಣಗೆರೆ: ದಕ್ಷಿಣ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ರಾಜ್ಯ ಎಸ್ಟಿ ಮೋರ್ಚಾದ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಶುಕ್ರವಾರ ಅವರು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಏಪ್ರಿಲ್ 9ರಂದು ಉಪ ಚುನಾವಣೆ ನಡೆಯಲಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ. ಮಾರ್ಚ್ 23ರ ಸೋಮವಾರ ಪುನಃ ಬಿಜೆಪಿ ನಾಯಕರ ಜೊತೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ದಾವಣಗೆರೆ ಬಿಜೆಪಿಯಲ್ಲಿ ಬಣ ರಾಜಕೀಯವಿದೆ ಎಂಬ ಆರೋಪಗಳ ನಡುವೆಯೇ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಿರೋಧಿ ಬಣಕ್ಕೆ ಟಿಕೆಟ್ ನೀಡಲಾಗಿದೆ. ಆದ್ದರಿಂದ ಉಪ ಚುನಾವಣೆಯಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುವರೇ? ಎಂಬುದು ಪ್ರಶ್ನೆಯಾಗಿದೆ.
ಆಸ್ತಿ ವಿವರ: ಶ್ರೀನಿವಾಸ್ ದಾಸಕರಿಯಪ್ಪ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸುವಾಗ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡೆವಿಟ್‌ನಲ್ಲಿ ಆಸ್ತಿ ವಿವರದ ಕುರಿತು ಉಲ್ಲೇಖಿಸಿದ್ದಾರೆ. ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ 5.75 ಕೋಟಿ ರೂ. ಒಡೆಯ, ಸಾಲ 2.96 ಲಕ್ಷ ರೂ. ಇದೆ.
ಒಟ್ಟು ಆಸ್ತಿ 5.75 ಕೋಟಿ ರೂ.
ನಗದು 3.60 ಲಕ್ಷ ರೂ.
ಒಟ್ಟು ಚರಾಸ್ತಿ 34.79 ಲಕ್ಷ ರೂ.
ಸ್ಥಿರಾಸ್ತಿ 5.41 ಕೋಟಿ ರೂ.
ವಾಹನ 4 ಬೈಕ್, 1 ಕಾರು
ಚಿನ್ನ 120 ಗ್ರಾಂ
ಸಾಲ 2.96 ಲಕ್ಷ ರೂ.ಗಳು
ಅಪರಾಧ ಪ್ರಕರಣಗಳು ಇಲ್ಲ
ಪತ್ನಿ ಸಂಧ್ಯಾ ಎಸ್. ಆಸ್ತಿ ವಿವರ
ಒಟ್ಟು ಆಸ್ತಿ ಮೌಲ್ಯ 15.94 ಲಕ್ಷ
ನಗದು 90,000
ಚಿನ್ನ 120 ಗ್ರಾಂ
ತಾಯಿ ರಂಗಮ್ಮ ಆಸ್ತಿ ವಿವರ
ಒಟ್ಟು ಆಸ್ತಿ ಮೌಲ್ಯ 12.14 ಲಕ್ಷ
ನಗದು 5000
ಚಿನ್ನ 100 ಗ್ರಾಂ
ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ಮಾತನಾಡಿದ ಶ್ರೀನಿವಾಸ್ ದಾಸಕರಿಯಪ್ಪ, “ಪಕ್ಷದ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಅವಕಾಶ ನೀಡಿದ ನಾಯಕರಿಗೆ ಕೃತಜ್ಞನಾಗಿದ್ದೇನೆ” ಎಂದರು.
“ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ್, ಎಂ.ಪಿ.ರೇಣುಕಾಚಾರ್ಯ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುತ್ತದೆ. ಎಲ್ಲರೂ ಒಂದಾಗಿ ಕಾಂಗ್ರೆಸ್ ವಿರುದ್ಧ ಹೋರಾಡುತ್ತೇವೆ. ಬಿಜೆಪಿಯಲ್ಲಿ ಯಾವುದೇ ಬಣಗಳಿಲ್ಲ” ಎಂದು ಸ್ಪಷ್ಟಪಡಿಸಿದರು.
Laxmi News 24×7