Breaking News

ಬಾಗಲಕೋಟೆಯಲ್ಲಿ ಹಿಂದೂ ಶಕ್ತಿ ಒಂದಾಗಿದೆ ಧರ್ಮ ಗೆಲುವು ನಿಶ್ಚಿತ : ನಾರಾಯಣಸಾ ಭಾಂಡಗೆ

Spread the love

ಬಾಗಲಕೋಟೆ: ಬಾಗಲಕೋಟೆಯಲ್ಲಿ ಹಿಂದೂ ಶಕ್ತಿ ಒಂದಾಗಿದೆ ಚುನಾವಣೆಯಲ್ಲಿ ಧರ್ಮದ ಗೆಲುವು ನಿಶ್ವಿತ
ಎಂದು ರಾಜ್ಯಸಭಾ ಸದಸ್ಯರಾದ ನಾರಾಯಣಸಾ ಭಾಂಡಗೆ ಹೇಳಿದರು.
ಅವರು ಬಿಜೆಪಿ ಕಾರ್ಯಾಲಯದಲ್ಲಿ ಚುನಾವಣಾ ಸಭೆಯಲ್ಲಿ ಬಿಜೆಪಿ ಸೇರ್ಪಡೆಗೊಂಡ ನಗರ ಸಭೆ ಮಾಜಿ ಅಧ್ಯಕ್ಷ ಬಸವರಾಜ ಕಟಗೇರಿ ಹಾಗೂ ಅರುಣ ಲೋಕಾಪುರ ಅವರಿಗೆ ಅಭಿನಂದಿಸಿ ಮಾತನಾಡಿದ ಅವರು ವೀರಣ್ಣ ಚರಂತಿಮಠ ಶಾಸಕರಾಗಿದ್ದ ಅವದಿಯಲ್ಲಿಯೃ ಬಾಗಲಕೋಟೆ ಅಭಿವೃದ್ಧಿ ಹೊಂದಿದ್ದು, ನಗರ ಸ್ವಚ್ಚತೆ, ಸುಂದರನಗರವನ್ನಾಗಿ ಮಾಡಿ ಒಂದು ಮಾದರಿ ಕ್ಷೇತ್ರವನ್ನಾಗಿಸಿದವರು ಚರಂತಿಮಠರು, ಮುಳಗಡೆ ಸಂತ್ರಸ್ಥರ ಸಮಸ್ಯೆಗಳಿಗೆ ಸ್ಪಂಧಿಸಿದವರು, ಅವರ ಕಾಲದಲ್ಲಿಯೇ ಸರಕಾರಿ ಪ್ರಥಮ ಧರ್ಜೆ ಡಿಗ್ರಿ ಕಾಲೇಜಿಗೆ ಅನುಮತಿ ತಂದು ಪ್ರಾರಂಭಿಸಿದರು, ಅದು ಇಂದು ಮಾದರಿಯಾಗಿದೆ, 145ದೇವಸ್ಥಾನಗಳ ಜೀರ್ಣೋದ್ದಾರ ಕೆಲಸವನ್ನು ಮಾಡಿದ್ದಾರೆ, 3744 ಮನೆಗಳ ನಿರ್ಮಾಣ ಮಾಡುವ ಮೂಲಕ ವಸತಿ ಸೌಲಭ್ಯವನ್ನು ನೀಡಿದ್ದಾರೆ, ಸಾವಿರಾರು ಕೋಟಿ ರೂಪಾಯಿಗಳ ಅನುಧಾನ ತಂದು ಕೆಲಸವನ್ನು ಕಾರ್ಯಗತಗೊಳಿಸಿದ್ದಾರೆ, ಅಭಿವೃದ್ಧಿಯೊಂದೆ ಅವರ ಮಂತ್ರ ವಾಗಿದೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಬಸವರಾಜ ಕಟಗೇರಿ ಮಾತನಾಡಿ ಬಾಗಲಕೋಟೆ ಇದು ಹಿಂದೂತ್ವದ ನೆಲ, ಪ್ರಧಾನ ನರೇಂದ ಮೋದಿಯವರ ನೇತೃತ್ವದಲ್ಲಿ ದೇಶ ಅಭಿವೃದ್ಧಿ ಹೊಂದುತ್ತಿದೆ, ಬಾಗಲಕೋಟೆಯಲ್ಲಿ ವೀರಣ್ಣ ಚರಂತಿಮಠರು ಶಾಸಕರಾಗಿದ್ದ ಅವಧಿಯಲ್ಲಿ ನಾನು ನಗರಸಭೆ ಅಧ್ಯಕ್ಷನಾಗಿದ್ದ ಸಮಯದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ, ಬಾಗಲಕೋಟೆಗೆ ಇಂದು ಅಭಿವೃದ್ಧಿ ಪರ ಕೆಲಸ ಮಾಡುವ ಶಾಸಕರ ಅವಶ್ಯಕತೆ ಇದೆ, ವೀರಣ್ಣ ಚರಂತಿಮಠರು ಸಮರ್ಥರಾಗಿದ್ದಾರೆ, ಮೊತ್ತಮ್ಮೆ ಬಿಜೆಪಿಯನ್ನು ಗೆಲ್ಲಿಸೋಣ ಎಂದರು,
ಸಭೆಯಲ್ಲಿ ಚುನಾವಣಾ ಉಸ್ತುವಾರಿ ಅರುಣ ಶಹಾಪುರ, ಮಾಜಿ ಶಾಸಕ ಬಿಜೆಪಿ ಅಭ್ಯರ್ಥಿಯಾದ ಡಾ.ವೀರಣ್ಣ ಚರಂತಿಮಠ, ನಗರ ಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ಅರುಣ ಲೋಕಾಪುರ, ಲಕ್ಷ್ಮೀ ನಾರಾಯಣ ಕಾಸಟ್, ವಿಜಯ ಅಂಗಡಿ,ಗುರುಬಸವ ಸೂಳಿಬಾವಿ,ಮಹಾಂತೇಶ ಶೆಟ್ಟರ ಸೇರಿದಂತೆ ಅನೇಕರು ಇದ್ದರು.
ಪಕ್ಷಕ್ಕೆ ನಗರಸಭೆ ಮಾಜಿ ಅಧ್ಯಕ್ಷ ಬಸವರಾಜ ಕಟಗೇರಿ ಹಾಗೂ ಅರುಣ ಲೋಕಾಪರ ಅವರಿಗೆ ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಅಭಿನಂದಿಸಿ ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸುವಂತೆ ತಿಳಿಸಿದರು.
ಪೋಟೋ 01 ಪಕ್ಷಕ್ಕೆ ನಗರಸಭೆ ಮಾಜಿ ಅಧ್ಯಕ್ಷ ಬಸವರಾಜ ಕಟಗೇರಿ ಹಾಗೂ ಅರುಣ ಲೋಕಾಪರ ಅವರಿಗೆ ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಅಭಿನಂದಿಸಿ ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸುವಂತೆ ತಿಳಿಸಿದರು.


Spread the love

About Laxminews 24x7

Check Also

ಉಪ ಚುನಾವಣೆ ಬಿಜೆಪಿಯಿಂದ ಪ್ರಚಾರ ಕಾರ್ಯಾಲಯ ಉದ್ಘಾಟನೆ. ಚುನಾವಣಾ ಪ್ರಚಾರಕ್ಕೆ ಚಾಲನೆ

Spread the loveಬಾಗಲಕೋಟೆ : ಬಾಗಲಕೋಟೆಯಲ್ಲಿ ನನ್ನ ಗೆಲುವಲ್ಲ, ಬಿಜೆಪಿ, ಹಿಂದುತ್ವದ ಗೆಲುವಾಗಲಿ ಎಂದು ಮಾಜಿ ಶಾಸಕ ಬಿಜೆಪಿ ಅಭ್ಯರ್ಥಿಯಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ