Breaking News

ಮುಸ್ಲಿಮರಿಗೆ ಮೋದಿ ಸುರಕ್ಷತೆ ನೀಡಿದ್ದಾರೆ, ಅದ್ಕೆ ಭಾರತದ ಧ್ವಜ ಇರೋ ಹಡಗುಗಳು ಬರುತ್ತಿವೆ – ಜನಾರ್ದನ ರೆಡ್ಡಿ

Spread the love

ಕೊಪ್ಪಳ: ಮುಸ್ಲಿಮರಿಗೆ ಮೋದಿ ಸುರಕ್ಷತೆ ನೀಡಿದ್ದಾರೆ, ಅದಕ್ಕಾಗಿ ಭಾರತ ಧ್ವಜ ಇರೋ ಹಡುಗಗಳು ಸುರಕ್ಷಿತವಾಗಿ ನಮ್ಮ ದೇಶಕ್ಕೆ ಬರುತ್ತಿವೆ ಎಂದು ಶಾಸಕ ಜನಾರ್ದನ ರೆಡ್ಡಿ  ಹೇಳಿದ್ದಾರೆ.

ಕೊಪ್ಪಳದ ಗಂಗಾವತಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿಯವರು ಭಾರತದಲ್ಲಿ ಮುಸ್ಲಿಮರಿಗೆ ಸುರಕ್ಷತೆ ನೀಡಿದ್ದಾರೆ. ಅದಕ್ಕಾಗಿ ಇರಾನ್ ನಮ್ಮ ದೇಶದ ಹಡಗುಗಳಿಗೆ ರಕ್ಷಣೆ ಕೊಟ್ಟು ಕಳಿಸುತ್ತಿದೆ ಎಂದಿದ್ದಾರೆ.

ಸಚಿವ ಬೋಸರಾಜು ಹೇಳಿಕೆ ಬಗ್ಗೆ ಮಾತನಾಡಿದ ಅವರು, ಮೋದಿ, ಟ್ರಂಪ್ ಗೆಳೆತನ ಜೋರಾಗಿರೋದಕ್ಕೆ ನಮಗೆ ಸಿಲಿಂಡರ್ ಸಿಗ್ತಿಲ್ಲ ಅಂದಿದ್ದರು. ಭಾರತದ ಶಿಪ್‌ಗಳಿಗೆ ತೊಂದರೆ ಮಾಡಬೇಡಿ, ಅವು ಆರಾಮಾಗಿ ಹೋಗಲಿ ಅಂತ ಇರಾನ್‌ನವರೇ ಹೇಳಿದ್ದಾರೆ. ನರೇಂದ್ರ ಮೋದಿಯವರ ಗೆಳೆತನ ಇರಾನ್ ಜೊತೆ ಚೆನ್ನಾಗಿದೆಯಾ? ಅಥವಾ ಟ್ರಂಪ್ ಜೊತೆ ಚೆನ್ನಾಗಿದೆಯಾ ಅಂತ ಬೋಸರಾಜು ನೋಡಬೇಕು ಎಂದು ತಿರುಗೇಟು ನೀಡಿದ್ದಾರೆ.


Spread the love

About Laxminews 24x7

Check Also

ಲೋಕಾ ದಾಳಿ ವೇಳೆ 10 ಕೋಟಿ ಭ್ರಷ್ಟಾಚಾರ ಬಯಲು – ಕೊಪ್ಪಳ ನಗರಸಭೆಯ ಜೆಇ ಸಸ್ಪೆಂಡ್

Spread the loveಕೊಪ್ಪಳ: ಲೋಕಾಯುಕ್ತ ದಾಳಿ ವೇಳೆ 10 ಕೋಟಿ ರೂ. ಭ್ರಷ್ಟಾಚಾರ ಬಯಲಿಗೆ ಬಂದ ಹಿನ್ನೆಲೆ ಕೊಪ್ಪಳ  ನಗರಸಭೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ