Breaking News

ಕಗ್ಗಂಟಾಗಿದ್ದ ದಾವಣಗೆರೆ, ಬಾಗಲಕೋಟೆಗೆ ಕಾಂಗ್ರೆಸ್ ಅಭ್ಯರ್ಥಿಗಳು ಫೈನಲ್! ಇವರಿಗೆ ಟಿಕೆಟ್ ಕೊಡೋದು ಕನ್ಫರ್ಮ್

Spread the love

ಪಚುನಾವಣೆ ದಿನಾಂಕ  ಘೋಷಣೆಯಾದಾಗಿನಿಂದಲೂ ದಾವಣಗೆರೆ ದಕ್ಷಿಣ ಮತ್ತು ಬಾಲಕೋಟೆಯಲ್ಲಿ ಚುನಾವಣಾ ರಂಗು ಹೆಚ್ಚಾಗಿದೆ. ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ  ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ರಾಜಕೀಯವಾಗಿ ಬಹಳ ಆಸಕ್ತಿಕರವಾಗಿ ಮುಂದುವರೆಯುತ್ತಿದೆ.

ಬಿಜೆಪಿ ಈಗಾಗಲೇ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಆದರೆ ಕಾಂಗ್ರೆಸ್​​ನಲ್ಲಿ ಮಾತ್ರ ಟಿಕೆಟ್​ಗಾಗಿ ಭಾರೀ ಪೈಪೋಟಿ ನಡೆಯುತ್ತಿತ್ತು. ಇದೀಗ ಕೊನೆಗೂ ಟಿಕೆಟ್​​ ಹಂಚಿಕೆ ಮುಕ್ತಾಯ ಹಂತಕ್ಕೆ ಬಂದಿದೆ.

ಸದ್ಯ ಬಿಜೆಪಿ ಟಿಕೆಟ್​ ಅಧಿಕೃತವಾಗಿ ಘೋಷಣೆಯಾಗಿದ್ದು, ಈಗ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳ ಘೋಷಣೆಗೆ ಎಲ್ಲರೂ ಕಾಯುತ್ತಿದ್ದಾರೆ. ರಾಜ್ಯ ಕಾಂಗ್ರೆಸ್‌ನ ಆಪ್ತ ಮೂಲಗಳ ಪ್ರಕಾರ, ನಾಳೆ ಬೆಳಿಗ್ಗೆಯೇ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಲಿದೆ.

ಕಾಂಗ್ರೆಸ್​​ನಿಂದ ಟಿಕೆಟ್​​ ಹಂಚಿಕೆ ಫೈನಲ್​!

ರಾಜ್ಯ ಕಾಂಗ್ರೆಸ್ ಆಪ್ತ ಮೂಲಗಳಿಂದ ಬಂದ ಮಾಹಿತಿ ಪ್ರಕಾರ, ನಾಳೆ ಬೆಳಗ್ಗೆ ಅಧಿಕೃತವಾಗಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಲಿದೆ.​​ ಅದೇ ಸಮಯದಲ್ಲಿ ಬಿ-ಫಾರಂ (ಅಭ್ಯರ್ಥಿಗಳಿಗೆ ನೀಡುವ ಅಧಿಕೃತ ಟಿಕೆಟ್ ಪತ್ರ) ಕೂಡ ಹಂಚಲಾಗುವುದು ಎಂದು ತಿಳಿದುಬಂದಿದೆ. ಕಾಂಗ್ರೆಸ್ ಪಕ್ಷದ ನಿರ್ಧಾರದ ಪ್ರಕಾರ, ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಸಮರ್ಥ ಶಾಮನೂರು ಅವರಿಗೆ ಟಿಕೆಟ್ ನೀಡಲಾಗುತ್ತದೆ. ಬಾಗಲಕೋಟೆ ಕ್ಷೇತ್ರದಿಂದ ಉಮೇಶ್ ಮೇಟಿ ಅವರಿಗೆ ಟಿಕೆಟ್ ನೀಡುವ ನಿರ್ಧಾರ ಆಗಿದೆ. ಎಐಸಿಸಿ (ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ)ಯಿಂದ ಅಧಿಕೃತ ಘೋಷಣೆಯೊಂದೇ ಈಗ ಬಾಕಿ ಇದೆ. ಇದು ಯಾವುದೇ ಸಮಯದಲ್ಲೂ ಬರಬಹುದು ಎಂದು ಮೂಲಗಳು ಹೇಳುತ್ತಿವೆ.

ನಾಳೆ ಅಧಿಕೃತವಾಗಿ ಘೋಷಣೆ!

ಕಾಂಗ್ರೆಸ್ ಮೊದಲು ಇಂದು ಸಂಜೆಯೇ ಟಿಕೆಟ್ ಘೋಷಣೆ ಮಾಡುವ ಯೋಚನೆಯಲ್ಲಿತ್ತು. ಆದರೆ ಇಂದು ಪವಿತ್ರ ರಂಜಾನ್ ಹಬ್ಬದ ಆಚರಣೆ ಇರುವುದರಿಂದ ಅದನ್ನು ಮುಂದೂಡಲಾಗಿದೆ. ಅಲ್ಪಸಂಖ್ಯಾತ ಸಮುದಾಯದವರಿಗೆ ಬೇಸರವಾಗಬಹುದು ಎಂಬ ಕಾರಣದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ವಿಶೇಷವಾಗಿ ದಾವಣಗೆರೆಯಲ್ಲಿ ಟಿಕೆಟ್ ಘೋಷಣೆಯಿಂದ ಅಲ್ಪಸಂಖ್ಯಾತರು ಬೇಸರಗೊಳ್ಳುವ ಶಂಕೆ ಇದ್ದುದರಿಂದ ನಾಳೆ ಬೆಳಿಗ್ಗೆಗೆ ಘೋಷಣೆ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ.

ನಾಳೆ ಬೆಳಿಗ್ಗೆ ಟಿಕೆಟ್ ಘೋಷಣೆಯಾದ ನಂತರ ಕೂಡಲೇ ಬಿ-ಫಾರಂ ಹಂಚಿಕೆ ಮಾಡಲಾಗುವುದು. ಸೋಮವಾರ ಕಾಂಗ್ರೆಸ್ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ ಮಾಡಲಾಗುವುದು. ಎರಡೂ ಕ್ಷೇತ್ರಗಳಿಂದ ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್‌ನ ಆಪ್ತ ಮೂಲಗಳು ನ್ಯೂಸ್ 18ಗೆ ತಿಳಿಸಿವೆ.

ಅತ್ತ ಶಾಮನೂರು ಕುಟುಂಬಕ್ಕೆ ಆದ್ಯತೆ, ಇತ್ತ ಮೇಟಿ ಕುಟುಂಬ

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶಾಮನೂರು ಕುಟುಂಬಕ್ಕೆ ದೊಡ್ಡ ಪ್ರಭಾವವಿದೆ. ಹಿಂದೆ ಶಾಮನೂರು ಶಿವಶಂಕರಪ್ಪ ಅವರು ಈ ಕ್ಷೇತ್ರದಿಂದ ಹಲವು ಬಾರಿಗೆದ್ದಿದ್ದರು. ಈಗ ಅವರ ಮೊಮ್ಮಗ ಸಮರ್ಥ ಶಾಮನೂರು ಅವರಿಗೆ ಟಿಕೆಟ್ ನೀಡುವುದು ಕಾಂಗ್ರೆಸ್‌ಗೆ ಬಲವಾದ ನಿರ್ಧಾರವಾಗಿದೆ. ಬಾಗಲಕೋಟೆಯಲ್ಲಿ ಉಮೇಶ್ ಮೇಟಿ ಅವರು ಹಿರಿಯ ನಾಯಕರಾಗಿದ್ದು, ಅವರಿಗೆ ಟಿಕೆಟ್ ನೀಡುವುದು ಕೂಡ ಪಕ್ಷಕ್ಕೆ ಒಳ್ಳೆಯ ಅಂಶವಾಗಿದೆ.

ಈ ಉಪಚುನಾವಣೆಯು ಕಾಂಗ್ರೆಸ್ ಮತ್ತು ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಬಿಜೆಪಿ ಈಗಾಗಲೇ ಅಭ್ಯರ್ಥಿಗಳನ್ನು ಘೋಷಿಸಿ ಪ್ರಚಾರ ಆರಂಭಿಸಿದೆ. ಕಾಂಗ್ರೆಸ್ ಈಗ ಟಿಕೆಟ್ ಘೋಷಣೆಯೊಂದಿಗೆ ಪ್ರಚಾರಕ್ಕೆ ಮುಂದಾಗಲಿದೆ. ನಾಮಪತ್ರ ಸಲ್ಲಿಕೆಯ ನಂತರ ಚುನಾವಣಾ ಪ್ರಚಾರ ಇನ್ನಷ್ಟು ತೀವ್ರಗೊಳ್ಳಲಿದೆ.

ರಾಜಕೀಯವಾಗಿ ಬಹಳ ಮಹತ್ವದ್ದಾಗಿರುವ ಉಪಚುನಾವಣೆ!

ರಾಜ್ಯದಲ್ಲಿ ಈ ಎರಡು ಕ್ಷೇತ್ರಗಳ ಉಪಚುನಾವಣೆಯು ರಾಜಕೀಯವಾಗಿ ಬಹಳ ಮಹತ್ವದ್ದಾಗಿದೆ. ಕಾಂಗ್ರೆಸ್ ಈ ಸೀಟುಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಬಿಜೆಪಿ ಈ ಸೀಟುಗಳನ್ನು ಗೆದ್ದು ತನ್ನ ಬಲವನ್ನು ತೋರಿಸಲು ಬಯಸುತ್ತಿದೆ. ನಾಳೆಯ ಟಿಕೆಟ್ ಘೋಷಣೆಯ ನಂತರ ಎರಡೂ ಪಕ್ಷಗಳ ಪ್ರಚಾರ ಜೋರಾಗಲಿದೆ. ಕಾಂಗ್ರೆಸ್ ಪಕ್ಷದ ಈ ನಿರ್ಧಾರವು ರಂಜಾನ್ ಹಬ್ಬದ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಭಾವನೆಗಳನ್ನು ಗೌರವಿಸುವ ಪ್ರಯತ್ನವಾಗಿದೆ. ನಾಳೆ ಬೆಳಿಗ್ಗೆ ಟಿಕೆಟ್ ಘೋಷಣೆಯಾದ ನಂತರ ಕೂಡಲೇ ಪ್ರಚಾರ ಆರಂಭವಾಗಲಿದೆ. ಈ ಉಪಚುನಾವಣೆಯಲ್ಲಿ ಜನರು ಯಾರನ್ನು ಆಯ್ಕೆ ಮಾಡುತ್ತಾರೆ ಎಂಬುದು ಈಗ ಕುತೂಹಲಕಾರಿಯಾಗಿದೆ.


Spread the love

About Laxminews 24x7

Check Also

ಟಿಕೆಟ್ ಘೋಷಣೆಗೂ ಮುನ್ನವೇ ನಾಮಪತ್ರ ಸಲ್ಲಿಸಿದ ಗೋವಿಂದ ಬಳ್ಳಾರಿ

Spread the loveಬಾಗಲಕೋಟೆ: ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಏಪ್ರಿಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ