Breaking News

ಹೆಣ್ಣು ಮಗು ಹುಟ್ಟಿದಕ್ಕೆ 15 ದಿನದ ಹಸುಗೂಸಿಗೆ ವಿಷ ನೀಡಿ ಕೊಲೆ: ಪಾಪಿ ತಂದೆಯ ಬಂಧನ…!

Spread the love

ಬೆಳಗಾವಿ: ಜಿಲ್ಲೆಯ ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ 15 ದಿನದ ನವಜಾತ ಶಿಶುವಿನ ಸಾವಿನ ಪ್ರಕರಣಕ್ಕೆ ಬೆಚ್ಚಿಬೀಳಿಸುವ ತಿರುವು ಸಿಕ್ಕಿದೆ. ಮಗು ಸಹಜವಾಗಿ ಮೃತಪಟ್ಟಿಲ್ಲ; ಸ್ವಂತ ತಂದೆಯೇ ವಿಷ ನೀಡಿ ಕೊಲೆ ಮಾಡಿರುವುದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.

ಭೀಮರಾಯ್ ಚಿಪ್ಪಾಡಿ ಹಾಗೂ ಶೀಲಾ ಚಿಪ್ಪಾಡಿ ದಂಪತಿಗೆ ಇತ್ತೀಚೆಗೆ ಹೆಣ್ಣು ಮಗು ಜನಿಸಿದ್ದು, ಆಕೆಗೆ ‘ಪ್ರಿಯಾಂಕಾ’ ಎಂದು ಹೆಸರಿಡಲಾಗಿತ್ತು. ಆದರೆ ಹೆಣ್ಣು ಮಗು ಹುಟ್ಟಿದುದನ್ನು ಒಪ್ಪಲಾರದ ತಂದೆ ಭೀಮರಾಯ್, ಮಗುವನ್ನು ಕೊಲ್ಲಲು ಸಂಚು ರೂಪಿಸಿದ್ದಾನೆ ಎಂಬುದು ತಿಳಿದುಬಂದಿದೆ.

ಮಗು ಅಚಾನಕ್ ಮೃತಪಟ್ಟಾಗ ತಾಯಿ ಶೀಲಾ ಅವರಿಗೆ ಅನುಮಾನ ಮೂಡಿ, ತಮ್ಮ ಗಂಡನೇ ಮಗುವಿಗೆ ವಿಷ ನೀಡಿದ್ದಾನೆ ಎಂದು ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಮೇರೆಗೆ ಪೊಲೀಸರು ವಿಚಾರಣೆ ನಡೆಸಿದಾಗ ಪ್ರಕರಣದ ನಿಜಾಂಶ ಹೊರಬಂದಿದೆ.

ಪೊಲೀಸ್ ವಿಚಾರಣೆ ವೇಳೆ ಆರೋಪಿ ತನ್ನೇ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್ ಭೂಷಣ್ ಬೋರಸೆ ಅವರು, “ಮಗುವಿನ ಕೊಲೆ ನಡೆದಿರುವುದು ದೃಢಪಟ್ಟಿದೆ. ಆರೋಪಿ ಭೀಮರಾಯ್ ಚಿಪ್ಪಾಡಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ” ಎಂದು ತಿಳಿಸಿದ್ದಾರೆ.

ಹೆಣ್ಣು ಮಗು ಎಂಬ ಕಾರಣಕ್ಕೆ ನವಜಾತ ಶಿಶುವಿನ ಹತ್ಯೆ ನಡೆದಿರುವುದು ಸಮಾಜವನ್ನು ಬೆಚ್ಚಿಬೀಳಿಸಿದ್ದು, ಇಂತಹ ಮನೋಭಾವನೆಗೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ.


Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ