ಹಾಸನ: ರಿಪೀಟರ್ಸ್‌ಗೆ ಕೊಡಬೇಕಿದ್ದ ಪ್ರಶ್ನೆಪತ್ರಿಕೆ ಕೊಟ್ಟು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಯಡವಟ್ಟು ಮಾಡಿರುವ ಘಟನೆ ಹಾಸನದ ಬೇಲೂರು ಪಟ್ಟಣದಲ್ಲಿ ನಡೆದಿದೆ.
ಹೌದು, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇಂದು (ಮಾ.16) ಕಂಪ್ಯೂಟರ್ ಸೈನ್ಸ್ ಪರೀಕ್ಷೆ ನಡೆಯಿತು. ಹಾಸನದ ಬೇಲೂರು ಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜ್‌ನಲ್ಲಿ ಪರೀಕ್ಷಾ ಕೇಂದ್ರದವರು ದೊಡ್ಡ ಯಡವಟ್ ಮಾಡಿದ್ದಾರೆ. ಈ ವರ್ಷದ ಪ್ರಶ್ನೆಪತ್ರಿಕೆ ಕೊಡುವ ಬದಲು ರಿಪೀಟರ್ಸ್‌ಗೆ ಕೊಡಬೇಕಿದ್ದ ಪ್ರಶ್ನೆಪತ್ರಿಕೆ ಕೊಟ್ಟುಬಿಟ್ಟಿದ್ದಾರೆ.
ಬೇಲೂರು ಜ್ಯೂನಿಯರ್ ಕಾಲೇಜಿನ ಮೂವರು ಹಾಗೂ ಸರ್ವೋದಯ ಕಾಲೇಜಿನ ಮೂವರು ಸೇರಿ ಒಟ್ಟು 6 ವಿದ್ಯಾರ್ಥಿನಿಯರು ಪರದಾಡಿ ಪರೀಕ್ಷೆ ಬರೆದಿದ್ದಾರೆ. ಒಂದೇ ಬ್ಲಾಕ್ ಕುಳಿತು ಆರು ಜನರು ಪರೀಕ್ಷೆ ಬರೆದಿದ್ದರು. ಪರೀಕ್ಷೆ ಬರೆದು ಹೊರಬಂದ 6 ವಿದ್ಯಾರ್ಥಿನಿಯರು ಬೇರೆ ವಿದ್ಯಾರ್ಥಿನಿಯರ ಪ್ರಶ್ನೆಪತ್ರಿಕೆ ನೋಡಿದಾಗ ನಿಜಾಂಶ ಬಯಲಾಗಿದೆ. ನಂತರ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದಾರೆ.
ಆನಂತರ 1:30 ರಿಂದ 2:10ರವರೆಗೆ ಸಮಯ ನೀಡಿ, ಈ ಸಾಲಿನ ವಿದ್ಯಾರ್ಥಿಗಳಿಗೆ ನೀಡಬೇಕಿದ್ದ ಪ್ರಶ್ನೆ ಪತ್ರಿಕೆ ನೀಡಿ ಪುನಃ ಪರೀಕ್ಷೆ ಬರೆಸಿದ್ದಾರೆ. ಆದರೆ ಸಮಯ ಕಡಿಮೆ ಆಗಿರುವುದರಿಂದ ಅಂಕ ಕಡಿಮೆಯಾಗುತ್ತದೆ ಎಂದು ವಿದ್ಯಾರ್ಥಿನಿಯರು ಕಣ್ಣೀರಿಟ್ಟಿದ್ದಾರೆ.
Laxmi News 24×7