Breaking News

ದೇಶದಲ್ಲಿ ಸಿಲಿಂಡರ್ ಎಮರ್ಜೆನ್ಸಿಗೆ ಮೋದಿ ವಿದೇಶಾಂಗ ನೀತಿಯ ವೈಫಲ್ಯವೇ ಕಾರಣ: ಪ್ರಿಯಾಂಕ್ ಖರ್ಗೆ

Spread the love

ಬೀದರ್: ಇರಾನ್ ಮತ್ತು ಇಸ್ರೆಲ್ ವಾರ್‌ನಿಂದ ರಾಜ್ಯ ಸೇರಿದಂತೆ ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಎಮರ್ಜೆನ್ಸಿಗೆ  ಪ್ರಧಾನಿ ಮೋದಿ  ವಿದೇಶಾಂಗ ನೀತಿಯ ವೈಫಲ್ಯವೇ ಕಾರಣ ಎಂದು ಬೀದರ್‌ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸಿಲಿಂಡರ್ ಎಮರ್ಜೆನ್ಸಿ ಕುರಿತು ಬೀದರ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯುದ್ಧ ಪ್ರಾರಂಭವಾಗೋದಕ್ಕೂ ಮೊದಲು ಇಸ್ರೆಲ್‌ನಲ್ಲಿ ಏನು ಕೆಲಸ ಇತ್ತು, ಏಕಾಏಕಿ ಡೊಮೆಸ್ಟಿಕ್ ಮತ್ತು ಕಮರ್ಷಿಯಲ್ ಸಿಲಿಂಡರ್ ಬೆಲೆ ಹೆಚ್ಚಳ ಮಾಡಿದ್ರಿ. ಏನು ಸಮಸ್ಯೆ ಇಲ್ಲಾ ಅಂದರೆ ಅಗತ್ಯ ಸರಕುಗಳ ಕಾಯ್ದೆ ಯಾಕೆ ಜಾರಿ ಮಾಡಿದ್ರಿ? ಈ ಎಸ್ಮಾ ಆಕ್ಟ್ ಯಾವಾಗ ಜಾರಿಯಾಗುತ್ತೆ? ಕೇಂದ್ರ ಸರ್ಕಾರಕ್ಕೆ ಏನಾಗುತ್ತಿದೆ ಅಂತಾನೆ ಗೊತ್ತಿಲ್ಲಾ, ಹೋಟೆಲ್‌ಗೆ ಸಿಲಿಂಡರ್ ಇಲ್ಲಾ, ಹಾಸ್ಟೆಲ್‌ನಲ್ಲಿ ಅಡುಗೆ ಆಗುತ್ತಿಲ್ಲಾ ಎಂದು ಕಿಡಿಕಾರಿದರು.

ಫ್ಯಾಕ್ಟರಿಗಳು ಕೂಡಾ ನಿಂತೋಗಿದ್ದು ಪುಣೆಯ ಟಾಟಾ ಕಾರ್ ತಯಾರಿಕೆ 60%ನಷ್ಟು ನಿಂತೋಗಿದೆ. ಇದಕ್ಕೆಲ್ಲಾ ಯಾರು ಹೊಣೆ, ಬೇರೆ ದೇಶದಲ್ಲಿ ಆಗುತ್ತಿಲ್ಲಾ, ನಮ್ಮ ದೇಶದಲ್ಲೇ ಮಾತ್ರ ಯಾಕೆ ಆಗುತ್ತಿದೆ? ಯುದ್ಧ ನಮ್ಮ ದೇಶದಲ್ಲಿ ನಡೆಯುತ್ತಿದೆಯಾ? ಇರಾನ್‌ನಿಂದ ಕಚ್ಛಾ ತೈಲ ತುಂಬಿಕೊಂಡು ರಷ್ಯಾ ಮತ್ತು ಚೀನಾ ಹಡಗುಗಳು ಹೋಗುತ್ತಿವೆ, ಆದ್ರೆ ನಮ್ಮ ಹಡಗಿನ ಬಗ್ಗೆ ಮಾಹಿತಿ ಇಲ್ಲಾ. ಟ್ರಂಪ್ ಸೇರಿದಂತೆ ಎಲ್ಲರನ್ನೂ ಮೋದಿ ಬೆಸ್ಟ್ ಫ್ರೆಂಡ್ ಅಂತಾರೆ, ಬಿಜೆಪಿ ಸಿಲಿಂಡರ್ ಕೊರತೆ ಇಲ್ಲ ಎಂದು ಹೇಳುತ್ತಿದ್ದಾರೆ. ಹಾಗಾದರೆ ನೀವೆ ಸಿಲಿಂಡರ್ ಬುಕ್ ಮಾಡಿ ಎಂದು ಹರಿಹಾಯ್ದರು.

ಈ ಹಿಂದೆ 24 ಗಂಟೆಗಳಲ್ಲಿ ಸಿಲಿಂಡರ್ ಸಿಗತ್ತಿತ್ತು. ಈಗ ಸಿಗುತ್ತಿದೆಯಾ? ಸಮಸ್ಯೆ ಇದ್ರು ಕಣ್ಣುಮುಚ್ಚಿಕೊಂಡು ಕುಳಿತ್ರೆ ಬಗೆಹರಿಯಲ್ಲಾ, ಬಿಜೆಪಿ ನಾಯಕರು ಮೋದಿ ಗುಣದಾನ ಮಾಡಿದ್ರೆ ಅವರಿಗೆ ಪ್ರೊಮೋಷನ್ ಸಿಗುತ್ತೆ ಎಂದು ವಾಗ್ದಾಳಿ ನಡೆಸಿದರು.


Spread the love

About Laxminews 24x7

Check Also

ಬೀದರ್‌ನಲ್ಲಿ ಚರಂಡಿಗೆ ಬಿದ್ದು 5 ವರ್ಷದ ಬಾಲಕ ಸಾವು

Spread the loveಬೀದರ್: ಮನೆಯ ಮುಂದೆ ಆಟ ಆಡುವ ಸಮಯದಲ್ಲಿ ಚರಂಡಿಗೆ  ಬಿದ್ದು ಬಾಲಕ  ಸಾವನ್ನಪ್ಪಿದ ಘಟನೆ ಬೀದರ್  ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ