Breaking News

ರಕ್ತದಾನದ ಮನೋಭಾವ ಬೆಳಸಿಕೊಳ್ಳಿ: ಡಾ.ರವೀಂದ್ರ

Spread the love

ರಾಮದುರ್ಗ: ರಕ್ತದಾನ ಜೀವ ರಕ್ಷಣೆಗಿರುವ ಶ್ರೇಷ್ಠದಾನವಾಗಿದ್ದು ತುರ್ತು ಪರಿಸ್ಥಿ ಸಂದರ್ಭಗಳಲ್ಲಿ ಮುಕ್ತವಾಗಿ ರಕ್ತದಾನ ಮಾಡುವ ಮಾನವೀಯ ಮೌಲ್ಯಗಳನ್ನು ಬೆಳಸಿಕೊಳ್ಳಿ ಜೊತೆಗೆ ಸಾರ್ವಜನೀಕರಲ್ಲೂ ಅರಿವು ಮೂಡಿಸುವ ಕೆಲಸ ಮಾಡಿ ಎಂದು ಪ್ಯಾಥೋಲಾಜಿಸ್ಟ ಜನರಲ್ ಹಾಸ್ಪಿಟಲ್ ವೈದ್ಯರಾದ ಡಾ. ರವೀಂದ್ರ.ಜಿ. ಪಾಟೀಲ ಹೇಳಿದರು.

ನಗರದ ಶ್ರೀಮತಿ ಐ. ಎಸ್ ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ರೆಡಕ್ರಾಸ್ ಮತ್ತು ರಾಷ್ಟ್ರೀಯ ಸ್ವಯಂ ಸೇವಾ ಘಟಕಗಳ ಸಹಯೋಗದಲ್ಲಿ ಹಮ್ಮಿಕೊಂಡ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ವಿದ್ಯಾರ್ಥಿಗಳು ಓದು ಮಾತ್ರವಲ್ಲದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಿ, ರಕ್ತದಾನ ಮಾಡುವುದರಿಂದ ಯಾವುದೇ ಹಾನಿಯಾಗುವುದಿಲ್ಲ ಬದಲಾಗಿ ದೈಹಿಕ‌ ಮತ್ತು ಮಾನಸಿಕ ಆರೋಗ್ಯದ ವೃದ್ಧಿಯಾಗುತ್ತದೆ. ರಕ್ತದಾನ ಜೀವದಾನಕ್ಕೆ ಸಮ ಎಂದರು.

ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಂ. ಡಿ ಕಮತಗಿ ಮಾತನಾಡಿ ಮಹಾದಾನಗಳಲ್ಲಿ ರಕ್ತದಾನವೂ ಒಂದಾಗಿದ್ದು ಮತ್ತೊಬ್ಬರ ಜೀವವನ್ನು ಉಳಿಸಬಲ್ಲದು ಆದ್ದರಿಂದ ವಿದ್ಯಾರ್ಥಿಗಳು ಸಮಾಜ ಸೇವೆ ಮನೋಭಾವದಿಂದ ರಕ್ತದಾನ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಎಸ್. ಐ.ಚಿಕ್ಕನರಗುಂದ ಐಕ್ಯೂಎಸಿ ಸಂಯೋಜಕರಾದ ಸಂಜಯ ಹಾದಿಮನಿ, ರೆಡ್ ಕ್ರಾಸ್ ಸಂಯೋಜಕರಾದ ಡಾ. ವೆಂಕಟೇಶ, ಎನ್.ಎಸ್.ಎಸ್ ಘಟಕದ ಸಂಯೋಜನಾಧಿಕಾರಿಗಳಾದ ವಿನಾಯಕ ಹೊಸಮನಿ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸಿದ್ಧಾರೂಡ ಬಸಳಿಗುಂದಿ, ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಎ. ಬಿ ವಗ್ಗರ, ಮಹಾವಿದ್ಯಾಲಯದ ಬೋದಕ ಬೋದಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ವರದಿ : ಮಲ್ಲಿಕಾ ಮುರಗೋಡ


Spread the love

About Laxminews 24x7

Check Also

ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ

Spread the loveರಾಮದುರ್ಗ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ