Breaking News

ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ 6 ವರ್ಷ – ಕಾಂಗ್ರೆಸ್ ಶಾಸಕರಿಗೆ ಡಿನ್ನರ್ ಪಾರ್ಟಿ

Spread the love

ಬೆಂಗಳೂರು: ಡಿ.ಕೆ.ಶಿವಕುಮಾರ್  ಕೆಪಿಸಿಸಿ ಅಧ್ಯಕ್ಷರಾಗಿ ಇಂದಿಗೆ 6 ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ಇಂದು ರಾತ್ರಿ ಪಕ್ಷದ ಶಾಸಕರಿಗೆ ಭೋಜನಕೂಟ  ಆಯೋಜಿಸಿದ್ದರು.

ರಾಜಕೀಯ ಲೆಕ್ಕಾಚಾರ, ಪವರ್ ಶೇರಿಂಗ್ ಗೊಂದಲದ ನಡುವೆ ಡಿಸಿಎಂ ಡಿನ್ನರ್ ಕೂಟ ಸಾಕಷ್ಟು ಕುತೂಹಲ ಮೂಡಿಸಿದೆ ಎನ್ನಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವರು ಹಾಗೂ ಶಾಸಕರು ಇಂದಿನ ಭೋಜನ ಕೂಟದಲ್ಲಿ ಭಾಗಿಯಾಗಿದ್ದರು. ಇತ್ತೀಚೆಗಷ್ಟೇ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಟ್ಟು ಕೊಡೋ ಬಗ್ಗೆ ಡಿಕೆಶಿ ಸುಳಿವು ಕೊಟ್ಟಿದ್ದರು. ಬಿಜೆಪಿ ಶಾಸಕರಾದ ಎಸ್‌ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್ ಡಿನ್ನರ್ ಪಾರ್ಟಿಗೆ ಹಾಜರಾಗಿದ್ದರು.

ದಿನೇಶ್ ಗೂಳಿಗೌಡ, ಟಿಬಿ ಜಯಚಂದ್ರ, ಕುಣಿಗಲ್ ರಂಗನಾಥ್, ಪ್ರಿಯಾಂಕ್ ಖರ್ಗೆ, ಡಿ.ಸುಧಾಕರ್, ಶರತ್ ಬಚ್ಚೇಗೌಡ, ಬಸಂತಪ್ಪ, ಎಂ,ಕೃಷ್ಣಪ್ಪ, ಕೆ.ಹೆಚ್.ಮುನಿಯಪ್ಪ, ಎಸಿ ಶ್ರೀನಿವಾಸ್, ಪುಟ್ಟರಂಗಶೆಟ್ಟಿ, ಮಾಗಡಿ ಬಾಲಕೃಷ್ಣ, ಬಿ.ನಾಗೇಂದ್ರ, ಜಿಟಿ ಪಾಟೀಲ್, ಯುಬಿ ಬಣಕಾರ್, ಚನ್ನರಾಜ್ ಹಟ್ಟಿಹೊಳಿ, ಸುನಿಲ್ ಕುಮಾರ್, ಚಂದ್ರಶೇಖರ ಪಾಟೀಲ್, ಎಸ್‌ಎಸ್ ಮಲ್ಲಿಕಾರ್ಜುನ, ಪುಟ್ಟಸ್ವಾಮಿ ಗೌಡ, ಮಂಜುನಾಥ್ ಭಂಡಾರಿ, ಅಶೋಕ್ ರೈ, ಎಆರ್ ಕೃಷ್ಣಮೂರ್ತಿ, ಎನ್‌ಎಸ್ ಭೋಸರಾಜು, ಬೇಳೂರು ಗೋಪಾಲಕೃಷ್ಣ, ಜಗದೇವ್ ಗುತ್ತೇದಾರ್, ಮಧು ಬಂಗಾರಪ್ಪ ಇತರರು ಡಿನ್ನರ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು.

ಸಿಎಂ  ಸಿದ್ದರಾಮಯ್ಯ ಜೊತೆ ಡಿನ್ನರ್ ಪಾರ್ಟಿಗೆ ರಾಜಣ್ಣ ಆಗಮಿಸಿದ್ದರು. ಸಚಿವರಾದ ಈಶ್ವರ ಖಂಡ್ರೆ, ಚಲುವರಾಯಸ್ವಾಮಿ, ಜಿ.ಪರಮೇಶ್ವರ್, ಕೃಷ್ಣ ಬೈರೇಗೌಡ, ಸತೀಶ್ ಜಾರಕಿಹೊಳಿ ಕೂಡ ಆಗಮಿಸಿದ್ದರು.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ