Breaking News

ಕಿತ್ತೂರು ರಾಣಿ‌ ಚನ್ನಮ್ಮ ಸಾರಿಗೆ ಸಂಸ್ಥೆ ನಾಮಕರಣಕ್ಕೆ ಶೀಘ್ರ ಕ್ರಮ‌: ಸಚಿವ ರಾಮಲಿಂಗಾರೆಡ್ಡಿ

Spread the love

ಬೆಳಗಾವಿ: ರಾಜ್ಯ ಸರಕಾರದ ವತಿಯಿಂದ ಅನೇಕ ಜನಪರ‌‌ ಯೋಜನೆಗಳನ್ನು ಜಾರಿಗೊಳಿಸುವುದರ ಮೂಲಕ ರಾಜ್ಯದ ಜನರ ಜೀವನ‌ಮಟ್ಟ ಸುಧಾರಿಸುವ ಕಾರ್ಯವಾಗುತ್ತಿದೆ. ವಾ.ಕ.ರ.ಸಾ.ಸಂಸ್ಥೆಗೆ ಕಿತ್ತೂರು ರಾಣಿ‌ ಚನ್ನಮ್ಮ ಸಾರಿಗೆ ಸಂಸ್ಥೆ ಎಂದು ನಾಮಕರಣಕ್ಕೆ ಶೀಘ್ರವೇ ಕ್ರಮ‌ ವಹಿಸಲಾಗುವುದು ಎಂದು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಹೇಳಿದರು.

ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ಶನಿವಾರ (ಫೆ.28) ಜರುಗಿದ ವಾ.ಕ.ರ.ಸಾ.ಸಂಸ್ಥೆಯ 28ನೇ ಸಂಸ್ಥಾಪನಾ ದಿನಾಚರಣೆ, ನೂತನ ಬಸ್ಸುಗಳ ಲೋಕಾರ್ಪಣೆ, ಬೆಳಗಾವಿ-1ನೇ ಘಟಕದ ನವೀಕರಣ ಕಾಮಗಾರಿ‌ ಶಂಕುಸ್ಥಾಪನೆ, ಹೊಸದಾಗಿ ನೇಮಕಾತಿ ಹೊಂದಿದ ಸಿಬ್ಬಂದಿಗಳಿಗೆ ನೇಮಕಾತಿ ಆದೇಶ ವಿತರಣೆ ಅಪಘಾತ/ಅಪರಾಧ ರಹಿತ ಸೇವೆ ಸಲ್ಲಿಸಿದ ಸಂಸ್ಥೆಯ ಚಾಲನಾ ಸಿಬ್ಬಂದಿಗಳಿಗೆ ಬೆಳ್ಳಿ ಪದಕ ವಿತರಣೆ ಹಾಗೂ ನೂತನ ತಂತ್ರಾಂಶಗಳ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ಆಯವ್ಯಯದಲ್ಲಿ ಘೋಷಿಸಿದಂತೆ ಎರಡು ಸಾವಿರ ಹೊಸ ಬಸ್ಸಗಳ ಖರೀದಿ‌ ಪ್ರಕ್ರಿಯೆ ಪ್ರಗತಿಯಲ್ಲಿದ್ದು ವಾಕರಸಾ ಸಂಸ್ಥೆಗೆ ಏಳು ನೂರು ವಾಹನಗಳ ಪೈಕಿ ಇಂದು ಇನ್ನೂರು ಐವತ್ತು ಬಸ್ ಗಳನ್ನು ಲೋಕಾರ್ಪಣೆಗೊಳಿಸಲಾಗಿದೆ ಎಂದರು.

ಬೆಳಗಾವಿ ಒಂದನೇ ಘಟಕದ ನವೀಕರಣ ಕಾಮಗಾರಿಗೆ ಅಂದಾಜು ಒಂದು ಕೋಟಿ ಕಾಮಗಾರಿಗೆ ಇಂದು ಶಂಕು ಸ್ಥಾಪನೆ ನೆರವೆರಿಸಲಾಗಿದೆ.

ಪಿಎಮ್ ಇ ಬಸ್ ಸೇವಾ ಯೋಜನೆ ಅಡಿ ಬೆಳಗಾವಿ‌ ನಗರಕ್ಕೆ ನೂರು ವಾಹನಗಳು ಮಂಜೂರಾಗಿದ್ದು, ಸಂಸ್ಥೆಯ ಆಂತರಿಕ ಸಂಪನ್ಮೂಲದಿಂದ ಐದು ಕೋಟಿ ವೆಚ್ವದಲ್ಲಿ 11 ನಗರ ಸಾರಿಗೆ ಹೊಸ ವಾಹನಗಳನ್ನು ಖರೀದಿಸಿ ಸಾರ್ವಜನಿಕ ಪ್ರಯಾಣಕ್ಕಾಗಿ ಬಳಕೆ ಮಾಡಲಾಗುತ್ತಿದೆ. ಅಂದಾಜು ಎಂಟು ಕೋಟಿ ರೂ ವೆಚ್ಚದಲ್ಲಿ ಹದಿನಾಲ್ಕು ಹವಾನಿಯಂತ್ರಿತ ಸ್ಲೀಪರ್ ಕೋಚ್ ಹಾಗೂ ಅಂದಾಜು ನಾಲ್ಕು ಕೋಟಿ ವೆಚ್ಚದಲ್ಲಿ ಹತ್ತು‌ ಹವಾನಿಯಂತ್ರಣ ರಹಿತ ಸ್ಲೀಪರ್ ಕೋಚ್ ಒಟ್ಟು ಇಪ್ಪತ್ತನಾಲ್ಕು ವಾಹನಗಳ‌ ಖರೀದಿ ಪ್ರಕ್ರಿಯೆ ಜಾರಿಯಲ್ಲಿರುತ್ತದೆ.

ಬೆಳಗಾವಿ ಅತಿ ರಾಜ್ಯದ ದೊಡ್ಡ ಜಿಲ್ಲೆಯಾಗಿದ್ದು ಕ್ರಮೇಣ ಈ ಭಾಗಕ್ಕೆ ಹೆಚ್ವುವರಿ ಹೊಸ ಬಸಗಳನ್ನು ಒದಗಿಸುವುದರ ಜೊತೆಗೆ ಶೀಘ್ರದಲ್ಲಿಯೇ ನಗರ‌ ಸಾರಿಗೆಗೆ ಎಂಭತ್ತು ಹೊಸ ಬಸಗಳನ್ನು ನೀಡುವ‌ ಭರವಸೆ ನೀಡಿದರು. ಬೆಳಗಾವಿ ವಿಭಾಗದಲ್ಲಿ ಹೊಸ‌ ಮಾರ್ಗಗಳಲ್ಲಿ ಬಸ್ ಸಂಚಾರಕ್ಕೆ ಸೂಚ‌ನೆ‌ ನೀಡಲಾಗುವುದು ಎಂದರು.

ಕಳೆದ ಬಾರಿ ಸಾರಿಗೆ ಸಚಿವರಾಗಿದ್ದ ಸಮಯದಲ್ಲೂ‌ ಅನೇಕ‌ ಬಸ ನಿಲ್ದಾಣಗಳನ್ನು ‌ನಿರ್ಮಾಣ‌ ಮಾಡಲಾಗಿದೆ. ನಮ್ಮ ಸರಕಾರದ ಅವಧಿಯಲ್ಲಿ ಅನುಕಂಪದ‌ ಆಧಾರದ ಮೇಲೆ‌ ಹತ್ತು ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳ ನೇಮಕಾತಿ ಮಾಡಿಕೊಳ್ಳಲಾಗಿದೆ. ಕಾರ್ಯನಿರ್ವಹಣೆ ಅವಧಿಯಲ್ಲಿ ಮೃತಪಟ್ಟ ಸಾರಿಗೆ ನೌಕರರಿಗೆ ಒಂದು‌ ಕೋಟಿ ರೂ ಪರಿಹಾರ‌ ಮೊತ್ತ ನೀಡುತ್ತಿರುವುದು ಸಂಸ್ಥೆಯ‌ ಹೆಗ್ಗಳಿಕೆಯಾಗಿದೆ ಎಂದು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಮಾತನಾಡಿ, ಜಿಲ್ಲೆಯ ಬಹುದಿನಗಳ ಬೇಡಿಕೆಗಳು ಇಂದು ಈಡೇರಿದಂತಾಗಿದೆ. ವಾ.ಕ.ರ.ಸಾ.ಸಂಸ್ಥೆಗೆ 250 ಹೊಸ ನೀಡಲಾಗಿದ್ದು‌, ಸಂತಸದ ಸಂಗತಿಯಾಗಿದೆ.

ಅತೀ ದೊಡ್ಡ ಜಿಲ್ಲೆಯಾದ ಬೆಳಗಾವಿಗೆ ಇನ್ನೂ ಹೆಚ್ಚಿನ ಹೊಸ ಒದಗಿಸಲು‌ ಮನವಿ ಮಾಡಿದರು. ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಕಳೆದ ಹಾಗೂ ಪ್ರಸ್ತುತ ಅಧಿಕಾರ‌ ಅವಧಿಯಲ್ಲಿ 7800 ಹೊಸ ಬಸ್ ಖರಿದಿಸಿದ್ದು, 9000 ನೇಮಕಾತಿ,1000 ಅನುಕಂಪದ‌ ನೇಮಕಾತಿ ಮಾಡಿರುವುದು ದಾಖಲೆಯಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ‌ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ ಅವರು ಮಾತನಾಡಿ ಜನರ ಸೇವೆಗೆ ಸದಾ ಸಿದ್ಧರಾಗಿರುವ ಹಗಲು ರಾತ್ರಿ ಶ್ರಮ ವಹಿಸುವ ಸಾರಿಗೆ ಇಲಾಖೆ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಸಾರಿಗೆ ಸಚಿವರು ತಮ್ಮ ಅಧಿಕಾರ ಅವಧಿಯಲ್ಲಿ ಇಲಾಖೆಗೆ ಕಾಯಕಲ್ಪ ನೀಡುವುದರ‌ ಮೂಲಕ ಅನೇಕ‌ ಬದಲಾವಣೆಗಳನ್ನು ತಂದಿರುತ್ತಾರೆ. ವಾ.ಕ.ರ.ಸಾ.ಸಂಸ್ಥೆಗೆ ಕಿತ್ತೂರ ರಾಣಿ ಚನ್ನಮ್ಮ‌ ಸಾರಿಗೆ ಸಂಸ್ಥೆ ಎಂದು ಮರು ನಾಮಕರಣಕ್ಕೆ ಒತ್ತಾಯಿಸಿದ‌ರು. ಬೆಳಗಾವಿ ಗ್ರಾಮೀಣ ಮತ ಕ್ಷೇತ್ರಕ್ಕೆ ಸುಸ್ಥಿತಿಯಲ್ಲಿರುವಂತಹ ಬಸಗಳನ್ನು ಒದಗಿಸಲು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮನವಿ ಮಾಡಿದರು.

ವಾ.ಕ.ರ.ಸಾ.ಸಂಸ್ಥೆ ಅಧ್ಯಕ್ಷರಾದ ಭರಮಗೌಡ (ರಾಜು) ಕಾಗೆ ಅವರು ಮಾತನಾಡಿ ರಾಜ್ಯದ ಎರಡನೇ ರಾಜಧಾನಿಯಾದ ಬೆಳಗಾವಿಗೆ ವಿದ್ಯುತ್ ಚಾಲಿತ ಹೊಸ‌ಬಸ್ ಖರೀದಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು. ಸಾರಿಗೆ ಸಂಸ್ಥೆಯ ಆಧಾರ ಸ್ಥಂಭಗಳಾದ ಚಾಲಕ ಹಾಗೂ ನಿರ್ವಾಹಕರ ಕಾರ್ಯ ಶ್ಲಾಘನೀಯವಾಗಿದೆ. ಪ್ರತಿನಿತ್ಯ ಸಂಸ್ಥೆಯಿಂದ ಸರಾಸರಿ 25 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರ ಪ್ರಯಾಣ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯನ್ನು ಸಂಸ್ಥೆಯು ಯಶಸ್ವಿಯಾಗಿ ನಿಭಾಯಿಸಿದೆ ಎಂದರು.

ಸಾರಿಗೆ ನೌಕರ ಬಹುದಿನಗಳ ಬೇಡಿಕೆಯನ್ನು ಶೀಘ್ರವೇ ಪರಿಹರಿಸಲು ಹಾಗೂ ಸರಕಾರದಿಂದ ಸಂಸ್ಥೆಗೆ ಬರಬೇಕಾದ ಬಾಕಿ 1100‌ ಕೋಟಿ‌ ಮೊತ್ತ ಪಾವತಿಸಲು‌ ಮನವಿ ಮಾಡಿದರು. ಕಿತ್ತೂರ ರಾಣಿ ಚನ್ನಮ್ಮ‌ ಸಾರಿಗೆ ಸಂಸ್ಥೆ ಮರು ನಾಮಕರಣಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು‌‌ ಭರಮಗೌಡ (ರಾಜು) ಕಾಗೆ ಅವರು ಹೇಳಿದರು.

ಶಾಸಕರಾದ ಆಸೀಫ್(ರಾಜು) ಸೇಠ ಅವರು ಮಾತನಾಡಿ ವಾ.ಕ.ರ.ಸಾರಿಗೆ ಸಂಸ್ಥೆಯ 1000 ನೇಮಕಾತಿಯಿಂದ ಸಾವಿರ ಕುಟುಂಬಗಳಿಗೆ ಅನೂಕುಲವಾಗಲಿದೆ. ಸಾರಿಗೆ ಸಚಿವರು ಉತ್ತರ ಕರ್ನಾಟಕ‌ ಭಾಗಕ್ಕೆ ಪ್ರತಿ ಸಂದರ್ಭದಲ್ಲೂ ಪ್ರಾಶಸ್ತ್ಯ ನೀಡುತ್ತಾ ಬಂದಿರುವುದು ಸಂತಸದ‌ ಸಂಗತಿಯಾಗಿದೆ. ರಾಜ್ಯ ಸರ್ಕಾರದ‌ ಮಹತ್ವಾಕಾಂಕ್ಷೆ ಪಂಚ ಗ್ಯಾರಂಟಿಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿವೆ. ಇದರಲ್ಲಿ ಶಕ್ತಿ ಹಾಗೂ ಗೃಹಲಕ್ಷ್ಮೀ ಯೋಜನೆಯಿಂದಾಗಿ ಮಹಿಳೆಯರು‌ ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾರೆ.

ಬೆಳಗಾವಿ ನಗರ ಪ್ರದೇಶಕ್ಕೆ ಇನ್ನೂ ಹೆಚ್ಚಿನ ಬಸಗಳನ್ನು ಒದಗಿಸಲು ಕೋರಿದರು. ರಾಜ್ಯ ಸರಕಾರದಿಂದ ಕಿತ್ತೂರ ಕರ್ನಾಟಕ‌ಭಾಗದ ಬಗ್ಗೆ ಇನ್ನೂ ಹೆಚ್ಚಿನ ಕಾಳಜಿ ವಹಿಸಿ ಈ ಭಾಗಕ್ಕೆ ಸಿಗುವಂತಹ ಎಲ್ಲ‌ ಸೌಲಭ್ಯಗಳು ದೊರಕುವಂತಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಶಾಸಕರುಗಳಾದ‌ ಬಾಬಸಾಹೇಬ ಪಾಟೀಲ, ವಿಠ್ಠಲ್ ಹಲಗೇಕರ, ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಭರಮಣ್ಣ ಉಪ್ಪಾರ,
ವಾ.ಕ.ರ.ಸಾ.ಸಂಸ್ಥೆ ಉಪಾಧ್ಯಕ್ಷರಾದ ಸುನೀಲ ಹಣಮನ್ನವರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಲಕ್ಷ್ಮಣರಾವ್ ಚಿಂಗಳೆ, ಜಿಲ್ಲಾ‌ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷರಾದ ವಿನಯ ನಾವಲಗಟ್ಟಿ, ತಾಲೂಕಾ ಅಧ್ಯಕ್ಷರುಗಳು ಪೋಲಿಸ್ ಆಯುಕ್ತ ಬೊರಸೆ ಭೂಷಣ್ ಗುಲಾಬರಾವ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿಲ್ಲಾ‌ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ವಾ.ಕ.ರ.ಸಾ.ಸಂಸ್ಥೆ ವ್ಯವಸ್ಥಾಪಕರ ನಿರ್ದೆಶಕಿ ಪ್ರಿಯಾಂಗಾ ಎಂ,
ವಾ.ಕ.ರ.ಸಾ.ಸಂಸ್ಥೆಯ ಹಿರಿಯ ಅಧಿಕಾರಿಗಳು, ಸಿಬ್ಬಂದಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಅಪಘಾತ ರಹಿತ 68 ಚಾಲಕರಿಗೆ ಬೆಳ್ಳಿ‌ಪದಕ, 188, ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ, ವೈಕ್ತಿಕ ಅಪಘಾತ, ಗುಂಪುಬಜೀವ ವಿಮಾ, ಕುಟುಂಬ ಕಲ್ಯಾಣ ನಿಧಿ ಯೋಜನೆಯ ಪರಿಹಾರ ಚೆಕ್‌‌ ವಿತರಿಸಲಾಯಿತು.
***


Spread the love

About Laxminews 24x7

Check Also

ಡಿನ್ನರ್ ಗುತ್ತಿಗೆ ನಾವು ಪಡೆದಿಲ್ಲ…ಪದೋನ್ನತಿ ಬಗ್ಗೆ ಕಾಲ ಬಂದಾಗ ನಿರ್ಣಯ; ಸಚಿವ ಸತೀಶ್ ಜಾರಕಿಹೊಳಿ

Spread the loveರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ಪುನಾರಚನೆ ಮತ್ತು ನಾಯಕತ್ವ ಬದಲಾವಣೆಯ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ. ಈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ