Breaking News

ಫೆ.28ರಂದು ನಶಾ ಮುಕ್ತ ಭಾರತ, ನಶಾ ಮುಕ್ತ ಕರ್ನಾಟಕ, ನಶಾ ಮುಕ್ತ ಕ್ಯಾಂಪಸ್ ಅಭಿಯಾನ ಜಾಥಾ

Spread the love

ಬೆಳಗಾವಿ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಅಡಿಯಲ್ಲಿ ಜಿಲ್ಲೆಯಲ್ಲಿರುವ ಆರೋಗ್ಯ ವಿಜ್ಞಾನ ಕಾಲೇಜು ಸಹಯೋಗದಲ್ಲಿ ಸ್ವಾಸ್ಥೃ ಭಾರತ ಶ್ರೇಷ್ಠ ಭಾರತ ಅಂಗವಗಿ ಯುವ ಶುದ್ಧಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಡಾ.ರವಿ ಪಾಟೀಲ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಫೆ.28ರಂದು ಬೆಳಗ್ಗೆ 7.30 ಗಂಟೆಗೆ ನಶಾ ಮುಕ್ತ ಭಾರತ, ನಶಾ ಮುಕ್ತ ಕರ್ನಾಟಕ, ನಶಾ ಮುಕ್ತ ಕ್ಯಾಂಪಸ್, ಅಂಗಾಂಗ ದಾನ ಅಭಿಯಾನ ಜಾಥಾ ಆರಂಭಗೊಂಡು ಸರ್ದಾರ ಮೈದಾನದಲ್ಲಿ ಪೂರ್ಣಗೊಳ್ಳಲಿದೆ. ಎಲ್ಲ ಶಾಲಾ ಕಾಲೇಜುಗಳಿಂದ ಸಾವಿರಾರೂ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರು ಭಾಗವಹಿಸಲಿದ್ದಾರೆ  ಎಂದರು.
ಮಾದಕ ದ್ರವ್ಯ, ಮದ್ಯ ಮತ್ತು ತಂಬಾಕು ವ್ಯಸನವು ಬಹಳ ಹಿಂದಿನಿಂದಲೂ ಬೆಳೆದು ಬಂದಿದ್ದು, ನಗರ, ಗ್ರಾಮೀಣ ಭಾಗದಲ್ಲಿ ಬಡ, ಮಧ್ಯ ವರ್ಗದ ಕುಟುಂಬದ ಮೇಲೆ ಪರಿಣಾಮ ಬೀರಿದೆ. ಅಲ್ಲದೆ, ನಾನಾ ರೀತಿಯ ಕಾಯಿಲೆಗಳಿಗೆ ತುತ್ತಾಗುವುದನ್ನು ತಪ್ಪಿಸಲು, ಯುವ ಸಮುದಾಯವನ್ನು ವ್ಯಸನ ಮುಕ್ತರನ್ನಾಗಿಸಲು ಹಾಗೂ ಮಾನವ ಅಂಗಾಂಗ ದಾನ ಮತ್ತು ಅದರ ಪ್ರಯೋಜನ ಕುರಿತು  ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಚಾಲನೆ ನೀಡಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀಹೆಬ್ಬಾಳ್ಕರ್, ರಾಜೀವ ಗಾಂಧಿ ಆರೋಗ್ಯವಿವಿ ಕುಲಪತಿ ಡಾ.ಭಗವಾನ್ ಬಿ.ಸಿ., ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಸಿಇಒ ರಾಹುಲ ಶಿಂಧೆ, ನಗರದ ಪೊಲೀಸ್ ಆಯುಕ್ತ ಬೊರಸೆ ಭೂಷನ್ ಇತರರು ಭಾಗವಹಿಸಲಿದ್ದಾರೆ.
ಡಾ.ಸಚೀನ ಪಟ್ಟಣಶೆಟ್ಟಿ, ವಿನಯ ಮೊಹನ, ಲಕ್ಷ್ಮಣ ಅರಮನಿ, ಎ.ಎಸ್.ನಾಗಲಿಕರ, ಡಾ.ಅಡಿವೇಶ  ಅರಕೇರಿ ಇತರರಿದ್ದರು.

Spread the love

About Laxminews 24x7

Check Also

ಸಂಸತ್ತು,ಶಾಸಕಾಂಗ ಸಭೆಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಳ

Spread the loveಬೆಳಗಾವಿ:ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಮಹಿಳಾ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಸಂಸತ್ ಹೊಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ