Breaking News

ಧನಲಕ್ಷ್ಮೀ ಕಾರ್ಖಾನೆಯ ಕಬ್ಬು ನುರಿಸುವ ಹಂಗಾಮು ಗುರುವಾರ ಮುಕ್ತಾಯ

Spread the love

ಧನಲಕ್ಷ್ಮೀ ಕಾರ್ಖಾನೆಯ ಕಾರ್ಯವ್ಯಾಪ್ತಿಯಲ್ಲಿ ಬರುವ ಎಲ್ಲ ಕಬ್ಬು ನೊಂದಾಯಿಸಿದ ರೈತ ಬಾಂಧವರು ಹಾಗೂ ಶೇರು ಸದಸ್ಯರು ಗುರುವಾರ ದಿನಾಂಕ : 26-02-2026 ರಂದು ರಾತ್ರಿ 8:00 ಗಂಟೆಗೆ 2025-26 ನೇ ಸಾಲಿನ ಕಬ್ಬು ನುರಿಸುವ ಹಂಗಾಮನ್ನು ಮುಕ್ತಾಯಗೊಳಿಸಲು ತೀರ್ಮಾನಿಸಲಾಗಿದೆ. ಕಾರಣ ರೈತರು ಕಬ್ಬನ್ನು ಕಟಾವು ಮಾಡಿ ನಿಗದಿಪಡಿಸಿದ ದಿನಾಂಕದೊಳಗಾಗಿ ಕಾರ್ಖಾನೆಗೆ ಸರಬರಾಜು ಮಾಡಬೇಕೆಂದು ತಿಳಿಯಪಡಿಸಲಾಗಿದೆ.

ಸದರಿ ಅವಧಿಯ ಒಳಗಾಗಿ ಕಬ್ಬು ಕಟಾವು ಮತ್ತು ಸಾಗಾಣಿಕೆ ಮಾಡದೇ ಇರುವ ಕಬ್ಬಿಗೆ ಕಾರ್ಖಾನೆಯವರು ಯಾವುದೇ ರೀತಿಯಲ್ಲಿ ಜವಾಬ್ದಾರರಾಗಿರುವದಿಲ್ಲ. ಹಾಗೂ ಮುಂದಿನ ಯಾವದೇ ರೀತಿಯ ಕಬ್ಬು ಬೆಳೆಯ ಹಾನಿಗೆ ಸಂಪೂರ್ಣವಾಗಿ ರೈತರೇ ಜವಾಬ್ದಾರರಾಗಿರುತ್ತಾರೆ.

ಪ್ರಸಕ್ತ ಹಂಗಾಮು 2025-26 ಸಾಲಿನ ಕಬ್ಬು ನುರಿಸುವ ಹಂಗಾಮನ್ನು ಯಶಸ್ವಿಗೊಳಿಸಲು ಸಹಕಾರ ನೀಡಿದ ಸಮಸ್ತ ಧನಲಕ್ಷ್ಮೀ ಕಾರ್ಖಾನೆಯ ಆಡಳಿತ ಮಂಡಳಿಯವರಿಗೆ, ರೈತ ಮುಖಂಡರಿಗೆ, ರೈತ ಬಾಂಧವರಿಗೆ, ಸಮಸ್ತ ಕಬ್ಬು ಕಟಾವು ಮತ್ತು ಸಾಗಾಣಿಕೆ ಗುತ್ತಿಗೆದಾರರಿಗೆ, ಸಿಬ್ಬಂದಿ ಹಾಗೂ ಕಾರ್ಮಿಕ ಬಂಧುಗಳಿಗೆ ಕಾರ್ಖಾನೆಯ ಆಡಳಿತ ಮಂಡಳಿಯ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಇದೆ ರೀತಿಯ ಸಹಕಾರವನ್ನು ಮುಂದಿನ ದಿನಗಳಲ್ಲಿಯೂ ಸಹ ನೀಡುವಂತೆ ತಮ್ಮೆಲ್ಲರಲ್ಲಿ ವಿನಂತಿಸುತ್ತೇವೆ ಎಂದು ಧನಲಕ್ಷ್ಮೀ ಕಾರ್ಖಾನೆಯು ಪ್ರಕಟಣೆಯಲ್ಲಿ ತಿಳಿಸಿದೆ.


Spread the love

About Laxminews 24x7

Check Also

ಸಾವಿನಲ್ಲೂ ಒಂದಾದ ಅಮರ ಪ್ರೇಮಿಗಳು

Spread the loveರಾಮದುರ್ಗ: ತಾಲೂಕಿನ ಮಲ್ಲಾಪೂರ ಗ್ರಾಮದಲ್ಲಿ ಇಂದು ಬೆಳಗಿನ ಜಾವ ಮನಕಲಕುವ ಘಟನೆಯೊಂದು ಸಂಭವಿಸಿದೆ. ಇಲ್ಲಿನ ಹರಿಯುವ ಮಲಪ್ರಭಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ