Breaking News

ಉರ್ದುವಿನಲ್ಲಿ ಸರ್ಕಾರಿ ಕಾರ್ಯಕ್ರಮದ ಆಹ್ವಾನ ಪತ್ರಿಕೆ ನೀಡಿದ್ರೆ ತಪ್ಪೇನು? – ದಿನೇಶ್‌ ಗುಂಡೂರಾವ್‌

Spread the love

ಬೆಂಗಳೂರು: ರಾಜ್ಯದಲ್ಲಿ ಆಡಳಿತ ಭಾಷೆ ಕನ್ನಡವಾಗಿದರೂ  ಆರೋಗ್ಯ ಇಲಾಖೆ ಉರ್ದುವಿನಲ್ಲಿ ಸರ್ಕಾರಿ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಪ್ರಕಟಿಸಿದ್ದು ಚರ್ಚೆಗೆ ಗ್ರಾಸವಾಗಿದೆ.

ಇಲಾಖೆಯು ಇಂದು ಹಿಮೋಫಿಲಿಯಾ ರೋಗಿಗಳಿಗೆ ಚಿಕಿತ್ಸೆ ಹಾಗೂ 108 ಆಂಬುಲೆನ್ಸ್ ಸೇವೆಗಳ ಲೋಕಾರ್ಪಣೆ ಕಾರ್ಯಕ್ರಮ ಆಯೋಜಿಸಿತ್ತು. ಆದರೆ ಆಹ್ವಾನ ಪತ್ರಿಕೆಯನ್ನು ಉರ್ದು ಭಾಷೆಯಲ್ಲೂ ತನ್ನ ವೆಬ್‌ಸೈಟ್‌ನಲ್ಲಿ ಇಲಾಖೆ ಪ್ರಕಟಿಸಿತ್ತು.

ಸರ್ಕಾರದ ನಿರ್ಧಾರಕ್ಕೆ ಕನ್ನಡ ಸಂಘಟನೆಗಳಿಂದ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಸಚಿವ ದಿನೇಶ್ ಗುಂಡೂರಾವ್ ಆರೋಗ್ಯ ಇಲಾಖೆಯ ನಿರ್ಧಾರವನ್ನು ಸಮರ್ಥಿಸಿ, ಕನ್ನಡ ಇಂಗ್ಲಿಷ್, ಉರ್ದು , ಹಿಂದಿಯಲ್ಲೂ ಆಹ್ವಾನ ಪತ್ರಿಕೆ ಪ್ರಕಟವಾಗಿದೆ. ಉರ್ದು ಜನರೂ ಇದ್ದಾರೆ. ಅವರಿಗೆ ಉರ್ದು ಪತ್ರಿಕೆಗಳಲ್ಲಿ ಉರ್ದುವಿನಲ್ಲಿ ಜಾಹೀರಾತು ಕೊಡಲಾಗಿದೆ ಎಂದರು.

ಸರ್ಕಾರದ ನಿರ್ಧಾರದಲ್ಲಿ ಏನು ತಪ್ಪಿದೆ? ಓಲೈಕೆ ಏನಿದೆ ಇದರಲ್ಲಿ? ಹಿಂದಿಯಲ್ಲಿ ಬರೆದರೆ ಓಲೈಕೆನಾ? ಇಂಗ್ಲಿಷ್‌ನಲ್ಲಿಕೊಟ್ಟರೆ ಇಂಗ್ಲಿಷ್ ಓಲೈಕೆನಾ? ಎಲ್ಲರಿಗೂ ಮಾಹಿತಿ ಇರಲೆಂದು ಜಾಹೀರಾತು ನೀಡಲಾಗುತ್ತದೆ ಎಂದು ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದರು.

Spread the love

About Laxminews 24x7

Check Also

ಪಿಯುಸಿ ಎರಡೂ ಪರೀಕ್ಷೆಗಳಲ್ಲಿ ಪಡೆದ ಅತ್ಯಧಿಕ ಅಂಕಗಳನ್ನೇ ಸಿಇಟಿ ಫಲಿತಾಂಶಕ್ಕೆ ಪರಿಗಣನೆ: ಕೆಇಎ

Spread the love ಬೆಂಗಳೂರು: ದ್ವಿತೀಯ ಪಿಯುಸಿ  ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಪರೀಕ್ಷೆ- 1 ಮತ್ತು ಪರೀಕ್ಷೆ-2ರಲ್ಲಿ ಪಡೆದ ಅಂಕಗಳ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ