Breaking News

ಆರೋಗ್ಯ ಇಲಾಖೆ ಕಾರ್ಯಕ್ರಮದಲ್ಲಿ ಉರ್ದು ಬಳಕೆ ಮಾಡಿದ್ರೆ ಖಂಡಿಸುತ್ತೇನೆ: ಪ್ರದೀಪ್ ಈಶ್ವರ್

Spread the love

ಬೆಂಗಳೂರು: ಆರೋಗ್ಯ ಇಲಾಖೆ  ಕಾರ್ಯಕ್ರಮದಲ್ಲಿ ಉರ್ದು ಬಳಕೆ ಮಾಡಿರೋ ವಿಚಾರ ಗೊತ್ತಿಲ್ಲ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್  ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಆರೋಗ್ಯ ಇಲಾಖೆ ಕಾರ್ಯಕ್ರಮದಲ್ಲಿ ಉರ್ದು ಭಾಷೆ ಬಳಕೆ ಮಾಡಿರೋ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಗಮನಕ್ಕೆ ಬಂದಿಲ್ಲ. ತಿಳಿದುಕೊಂಡು ಹೇಳುತ್ತೇನೆ ಎಂದರು.

ನಮ್ಮಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ. ನಮ್ಮ ಮಣ್ಣಿನ ಭಾಷೆ, ನಮ್ಮ ತಾಯಿ ಭಾಷೆ ಕನ್ನಡನೇ. ಬೇರೆ ಭಾಷೆಗಳು ಹೊಟ್ಟೆ ತುಂಬಿಸಿಕೊಳ್ಳೋಕೆ, ಬದುಕು ಕಟ್ಟಿಕೊಳ್ಳೋಕೆ. ಕನ್ನಡ ಭಾಷೆ ಮಾತ್ರ ಭಾವನೆ ಜೊತೆ ಇರೋದು.ಅಂತಹದ್ದು ನಡೆದಿದ್ದರೆ ನಾನು ನಾಳೆ ಬಂದು ಖಂಡಿಸುತ್ತೇನೆ ಅಂತ ತಿಳಿಸಿದರು.


Spread the love

About Laxminews 24x7

Check Also

ಸ್ನೇಹಿತೆಯ ಪ್ರಿಯಕರನ ಕಾಲ್ ರಿಸೀವ್ ಮಾಡಿದ್ದಕ್ಕೆ ಗಲಾಟೆ – ನೇಣುಬಿಗಿದ ಸ್ಥಿತಿಯಲ್ಲಿ ಪತ್ನಿ ಶವ ಪತ್ತೆ

Spread the loveಚಿಕ್ಕಬಳ್ಳಾಪುರ: ಸ್ನೇಹಿತೆಯ ಪ್ರಿಯಕರನ ಕಾಲ್ ರಿಸೀವ್ ಮಾಡಿದ್ದಕ್ಕೆ ಗಂಡ ಹಾಗೂ ಹೆಂಡತಿ ಮಧ್ಯೆ ಗಲಾಟೆಯಾಗಿ ಕೊನೆಗೆ ಪತ್ನಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ