Breaking News

ಪ್ರಚೋದನಕಾರಿ ಭಾಷಣ; ಶಾಸಕ ಯತ್ನಾಳ್ ವಿರುದ್ಧ ಪ್ರಕರಣ ದಾಖಲು

Spread the love

 

ಯಾದಗಿರಿಯ ಗುರುಮಠಕಲ್‌ನಲ್ಲಿ ನಡೆದ ಶಿವಾಜಿ ಜಯಂತಿ ಸಭೆಯಲ್ಲಿ ವಿವಾದಾತ್ಮಕ ಹಾಗೂ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ವಿರುದ್ಧ ಪೊಲೀಸರು ಮಂಗಳವಾರ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಒಂದು ಕೋಮಿನ ವಿರುದ್ಧ ಟೀಕೆ, “ಗಾಂಧೀಜಿ ಪಾಕಿಸ್ತಾನದ ಪಿತಾಮಹ’ ಎಂಬ ವಿವಾದಿತ ಹೇಳಿಕೆ ಹಾಗೂ ಪ್ರಚೋದನಾತ್ಮಕ ಮಾತುಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಗುರುಮಠಕಲ್ ಪೊಲೀಸ್‌ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 196, 299 ಸೇರಿದಂತೆ ವಿವಿಧ ಕಠಿಣ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


Spread the love

About Laxminews 24x7

Check Also

ಪೋಕ್ಸೋ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ: ಬಾಲಕಿ ಹೇಳಿಕೆ ಮೇಲೆ ಮಲ್ಲಿಕಾರ್ಜುನ ಮುತ್ಯಾನ ಭವಿಷ್ಯ ನಿರ್ಧಾರ

Spread the loveಯಾದಗಿರಿ: ಮಹಲ್ ರೋಜಾದ‌ ಮಲ್ಲಿಕಾರ್ಜುನ ಮುತ್ಯಾ ವಿರುದ್ಧದ ಪೋಕ್ಸೋ ಕೇಸ್​ಗೆ ಸಂಬಂಧಿಸಿದಂತೆ ಕೇಸ್ ಕೈ ಬಿಡುವಂತೆ ಆಗ್ರಹಿಸಿ ಭಕ್ತರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ