ಬೆಳಗಾವಿ: ನಗರದಲ್ಲಿ ಎರಡು ವಾರಗಳಿಂದ ನಡೆದಿದ್ದ ಮುರುಘೇಂದ್ರಗೌಡ ಪಾಟೀಲ ಅಖಿಲ ಭಾರತೀಯ ಟೆನಿಸ್‌ಬಾಲ್ ಕ್ರಿಕೆಟ್ ಟೂರ್ನಾಮೆಂಟ್‌ನಲ್ಲಿ ಭಾನುವಾರ ಅಂತಿಮ ಹಣಾಹಣಿಯಲ್ಲಿ ಮಹಾರಾಷ್ಟ್ರದ ಪಾಂಡುರಂಗ ಸಿಸಿ ತಂಡ ಬೆಳಗಾವಿಯ ಸಾಯಿರಾಜ ವಾರಿಯರ್ಸ್ ತಂಡವನ್ನು ಸೋಲಿಸುವ ಮೂಲಕ ಟ್ರೋಫಿ ಮತ್ತು 5 ಲಕ್ಷ ರೂ. ನಗದು ಗೆದ್ದುಕೊಂಡಿದೆ.
ನಗರದ ಸರ್ದಾರ್ಸ್ ಮೈದಾನದಲ್ಲಿ ಬಿಜೆಪಿ ಮುಖಂಡ ಮುರುಘೇಂದ್ರಗೌಡ ಪಾಟೀಲ ಆಯೋಜಿಸಿದ್ದ ಈ ಪಂದ್ಯಾವಳಿಯಲ್ಲಿ ರಾಜ್ಯ ಹಾಗೂ ಹೊರರಾಜ್ಯದ ಒಟ್ಟು 40 ತಂಡ ಭಾಗವಹಿಸಿದ್ದವು. ಸಾಯಿರಾಜ ತಂಡ 10 ಓವರ್‌ಗಳಲ್ಲಿ 87 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ್ದ ಪಾಂಡುರಂಗ ತಂಡ 88 ರನ್‌ಗಳಿಸಿ ಟ್ರೋಫಿ ಗೆದ್ದುಕೊಂಡಿತು.
ಸಂಸದ ಜಗದೀಶ ಶೆಟ್ಟರ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಸ್ವಾಮೀಜಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಮಲ್ಲಣ್ಣ ಯಾದವಾಡ, ಸುಭಾಸ ಪಾಟೀಲ, ಶಿವನಗೌಡ ಪಾಟೀಲ, ಹನಮಂತ ಕೊಂಗಾಲಿ, ರಿಯಾಜ್ ಕಿಲ್ಲೇದಾರ ಇತರರು ವಿಜೇತರಿಗೆ ಬಹುಮಾನ ವಿತರಿಸಿದರು.
ವಿಜೇತ ತಂಡಕ್ಕೆ 5,27,127 ರೂ. ಹಾಗೂ ರನ್ನರ್ ಅಪ್ ತಂಡಕ್ಕೆ 2,51,127 ರೂ. ಬಹುಮಾನ ನೀಡಲಾಯಿತು. ಸರಣಿ ಶ್ರೇಷ್ಠ ಓಂಕಾರ ಕಿಣೆಗೆ ಬೈಕ್ ಬಹುಮಾನ ಕೊಡಲಾಯಿತು. ಪಂದ್ಯಾವಳಿ ಯಶಸ್ಸಿಗೆ ಶ್ರಮಿಸಿದವರನ್ನು ಸನ್ಮಾನಿಸಲಾಯಿತು.
Laxmi News 24×7