Breaking News

ಬಳ್ಳಾರಿ ಸಿಡಿ ಬಂಡಿ ರಥೋತ್ಸವ – ಬಾಳೆ ಹಣ್ಣು, ಜೀವಂತ ಕೋಳಿ ಎಸೆದ ಭಕ್ತರು

Spread the love

ಬಳ್ಳಾರಿ: ಅಧಿದೇವತೆ ಕನಕ ದುರ್ಗಮ್ಮ ಸಿಡಿ ಬಂಡಿ ರಥೋತ್ಸವ  ಇಂದು ಅದ್ದೂರಿಯಾಗಿ ನೆರವೇರಿತು.

ನಗರ ಶಾಸಕ ನಾರಾ ಭರತ್ ರೆಡ್ಡಿ, ವಿಶೇಷ ಪೂಜೆ ಸಲ್ಲಿಸಿ, ರಥೋತ್ಸವಕ್ಕೆ ಚಾಲನೆ ನೀಡಿದರು. ಮಹಾರಾಷ್ಟ್ರ, ಆಂಧ್ರಪ್ರದೇಶ ತೆಲಂಗಾಣ ಸೇರಿ ರಾಜ್ಯದ ಹಲವು ಜಿಲ್ಲೆಗಳಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರು ಸಿಡಿ ಬಂಡಿ ರಥೋತ್ಸವದಲ್ಲಿ ಭಾಗಿಯಾಗಿ ಕಣ್ತುಂಬಿಕೊಂಡರು.

ಭಕ್ತರು ಸಿಡಿ ಬಂಡಿಗೆ ಬಾಳೆ ಹಣ್ಣಿನ ಜೊತೆಗೆ ಜೀವಂತ ಕೋಳಿ ಎಸೆದರು. ಕನಕದುರ್ಗಮ್ಮ ಸಿಡಿ ಬಂಡಿ ರಥೋತ್ಸವಕ್ಕೆ ಕೋಳಿ ಎಸೆಯುವುದು ಸಂಪ್ರದಾಯ. ಹೀಗಾಗಿ ಭಕ್ತರು ಸಿಡಿ ಬಂಡಿ ರಥೋತ್ಸವಕ್ಕೆ ಜೀವಂತ ಕೋಳಿ ಎಸೆದು ಭಕ್ತಿ ಸಮರ್ಪಿಸಿದರು. ರಥೋತ್ಸವ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.


Spread the love

About Laxminews 24x7

Check Also

ಖಾಸಗಿ ಆಸ್ಪತ್ರೆ ಮುಂದೆ ಕಸ ಸುರಿದು ಬಿಸಿ ಮುಟ್ಟಿಸಿದ ಬಳ್ಳಾರಿ ಪಾಲಿಕೆ‌ ಸಿಬ್ಬಂದಿ

Spread the loveಬಳ್ಳಾರಿ: ಖಾಸಗಿ ಅಸ್ಪತ್ರೆಯವರಿಗೆ ಬುದ್ದಿ ಕಲಿಸಲು ಮಹಾನಗರ ಬಳ್ಳಾರಿ  ಪಾಲಿಕೆ ಸಿಬ್ಬಂದಿ ಕಸವನ್ನು ತಂದು ಅಸ್ಪತ್ರೆ ಮುಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ