Breaking News

ನಕಲಿ ಬ್ಯಾಂಕ್ ಖಾತೆ ಐವರ ವಿರುದ್ಧ ಕೇಸ್‌

Spread the love

ಬೆಳಗಾವಿ: ಸೈಬರ್ ವಂಚನೆಗೆ ಅನುಕೂಲವಾಗುವಂತೆ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ನಿರ್ವಹಿಸುತ್ತಿದ್ದ ಆರೋಪದ ಮೇಲೆ ಜಿಲ್ಲೆಯ ನಿಪ್ಪಾಣಿ ನಗರದ ಐವರ ವಿರುದ್ಧ ಸೈಬರ್‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಶುಭಂ ಲಕ್ಕಣ್ಣವರ, ಅಮಿತ ಶೇಖರ ಶಿಂಧೆ, ರಾಹುಲ ಶಿವಾಜಿ ಹಂಚನಾಳೆ, ಅಕ್ಷಯ ಅನಿಲ ಪಸಾರೆ ಮತ್ತು ಗಜಾನನ ಚಂದ್ರಕಾಂತ ದರ್ಮೋಡೆ ಅವರ ವಿರುದ್ಧ ಐಟಿ ಕಾಯ್ದೆ ಮತ್ತು ಬಿಎನ್‌ಎಸ್‌ನ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ. ಇವರು ಫೆಡರಲ್ ಬ್ಯಾಂಕಿನಲ್ಲಿ ಖಾತೆಗಳನ್ನು ತೆರೆದಿದ್ದರು.

ಪಶ್ಚಿಮ ಬಂಗಾಳದಿಂದ ಕಾರ್ಯನಿರ್ವಹಿಸುತ್ತಿರುವ ಸೈಬರ್ ಅಪರಾಧಿಗಳು ಆನ್‌ಲೈನ್ ವಂಚನೆಗಳ ಮೂಲಕ ಪಡೆದ ಹಣವನ್ನು ಚಾನೆಲ್ ಮಾಡಲು ಸ್ಥಳೀಯ ನಿವಾಸಿಗಳ ಬ್ಯಾಂಕ್ ಖಾತೆಗಳನ್ನು ಬಳಸುತ್ತಿದ್ದರು. ಸಾಕ್ಷ್ಯ ನಾಶ ಮಾಡಲು ಹಣವನ್ನು ಇಲ್ಲಿನವರ ಖಾತೆಗಳಿಗೆ ವರ್ಗಾಯಿಸುತ್ತಿದ್ದರು. ಇದರಿಂದ ವಂಚನೆಯಿಂದ ಪಡೆದ ಹಣ ಎಲ್ಲಿಗೆ ಹೋಗಿದೆ ಎಂಬುದು ಪತ್ತೆ ಆಗದಂತೆ ಮಾಡಲಾಗುತ್ತಿತ್ತು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರಕರಣದ ಕುರಿತು ಜಿಲ್ಲೆಯ ಕೆಲವು ಖಾತೆಗಳ ಮೇಲೂ ಸೈಬರ್‌ ಪೊಲೀಸರು ಕಣ್ಣಿಟ್ಟಿದ್ದರು. ಪರಿಣಾಮ ಐವರ ಖಾತೆಗಳು ಪತ್ತೆಯಾಗಿವೆ ಎಂದು ತಿಳಿಸಲಾಗಿದೆ.

ಬೈಕ್‌ ಸವಾರರ ಸಾವು: ಖಾನಾಪುರ ತಾಲ್ಲೂಕಿನ ನಾಗರಗಾಳಿ ಗ್ರಾಮದ ಹದ್ದಿಯ ಬಳಿ ರಾಮನಗರ- ಅಳ್ನಾವರ ರಸ್ತೆಯ ಮೇಲೆ ಬೈಕ್‌ ಅಪಘಾತಕ್ಕೀಡಾಗಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜೋಯಿಡಾದ ನಿವಾಸಿ ದಿಗಂಬರ ಪಾಂಡುರಂಗ ಗಾವಡೆ (27) ಮೃತಪಟ್ಟವರು. ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ