Breaking News

ಬೆಳಗಾವಿ: ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಯುವಕರ ಸಾವು 

Spread the love

ಬೆಳಗಾವಿ: ಜಿಲ್ಲೆಯ ವಿವಿಧೆಡೆ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಕಬ್ಬು ತುಂಬಿದ ಟ್ರ್ಯಾಕ್ಟರ್‌ಗೆ ಬೈಕ್‌ ಡಿಕ್ಕಿ ಹೊಡೆದು ಇಬ್ಬರು ಯುವಕರು ಮೃತಪಟ್ಟಿದ್ದಾರೆ.

ರಾಯಬಾಗ ತಾಲ್ಲೂಕಿನ ಖೈರಕೋಡ ಗ್ರಾಮದ ಬಳಿ ಶನಿವಾರ ರಾತ್ರಿ ರಸ್ತೆ ಬದಿ ನಿಲ್ಲಿಸಿದ್ದ ಕಬ್ಬು ತುಂಬಿದ ಟ್ರ್ಯಾಕ್ಟರ್‌ಗೆ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ಯುವಕ ಸಾವನ್ನಪ್ಪಿದ್ದಾನೆ. ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ ಆನಂದ ಸುರೇಶ ಪೂಜಾರಿ (22) ಮೃತರು. ರಾಯಬಾಗ ತಾಲ್ಲೂಕಿನ ಖೈರಖೋಡ ಗ್ರಾಮದ ಮಾಯಪ್ಪ ಸಾತು ಪಾಟೀಲ ಟ್ರ್ಯಾಕ್ಟರ್‌ ಮಾಲೀಕ. ರಸ್ತೆಯ ಮೇಲೆ ಕತ್ತಲಲ್ಲಿ ಟ್ರ್ಯಾಕ್ಟರ್‌ ನಿಲ್ಲಿಸಿದ್ದೇ ಅಪಘಾತಕ್ಕೆ ಕಾರಣ ಎಂದು ರಾಯಬಾಗ ಪೊಲೀಸರು ತಿಳಿಸಿದ್ದಾರೆ.

ಇನ್ನೊಂದೆಡೆ ಕಟಕೋಳ- ಮುನವಳ್ಳಿ ರಸ್ತೆಯ ಮೇಲೆ ಪದಮಂಡಿ ಗ್ರಾಮದ ಬಳಿ ರಸ್ತೆಯ ಮೇಲೆ ಹೊರಟಿದ್ದ ಕಬ್ಬು ತುಂಬಿ ಟ್ರ್ಯಾಕ್ಟರ್‌ಗೆ ಬೈಕ್‌ ಡಿಕ್ಕಿ ಹೊಡೆದ ಸವಾರ ಸಾವನ್ನಪ್ಪಿದ್ದಾನೆ.ಸವದತ್ತಿ ತಾಲ್ಲೂಕು ಇಂಚಲ ಗ್ರಾಮದ ಶಿವು ಮಲ್ಲನಾಯ್ಕ ಜಕ್ಕಪ್ಪನ್ನವರ ಮೃತರು. ರಾಮದುರ್ಗ ಉಜ್ಜಿನಕೊಪ್ಪ ಗ್ರಾಮದ ಸುರೇಶ ವೆಂಕನಾಯ್ಕ ನಾಯ್ಕರ ಟ್ರ್ಯಾಕ್ಟರ್‌ ಚಾಲಕ. ಟ್ರ್ಯಾಕ್ಟರ್‌ ಅನ್ನು ಸಂಚಾರಕ್ಕೆ ಅಡ್ಡಿಯಾಗುವಂತೆ ನಿಲ್ಲಿಸಿದ್ದೇ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

 


Spread the love

About Laxminews 24x7

Check Also

ಈ ಎರಡು ದಿನ ಬೆಳಗಾವಿಯಲ್ಲಿ ಕಸಾಯಿಖಾನೆ/ಮಾಂಸಾಹಾರಿ ಅಂಗಡಿಗಳು ಬಂದ್

Spread the loveಬೆಳಗಾವಿ: ಡಾ. ಬಿ. ಆರ್. ಅಂಬೇಡ್ಕರ ಜಯಂತಿ ಹಾಗೂ ಬಸವ ಜಯಂತಿ ಅಂಗವಾಗಿ ಬೆಳಗಾವಿ ಮಹಾನಗರ ಪಾಲಿಕೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ