Breaking News

“ಮಾರ್ಚ್ 11 ರಿಂದ 15 ವರೆಗೆ ನಿಪ್ಪಾಣಿಯಲ್ಲಿ ಅದ್ದೂರಿ ಕೃಷಿ ಉತ್ಸವ”

Spread the love

ನಿಪ್ಪಾಣಿ: ನಗರದ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ಅವರಣರದಲ್ಲಿ ಶ್ರೀ ಬೀರೇಶ್ವರ ಕೋ ಆಫ್ ಕ್ರೆಡಿಟ್ ಸೋಸಾಯಿಟಿ ಲಿ.,ಯಕ್ಸಂಬಾ (ಮಲ್ಟಿ – ಸ್ಟೇಟ್) ಹಾಗೂ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ನಿಯಮಿತ.,(ಬಹು -ರಾಜ್ಯ) ಸಂಯುಕ್ತಾಶ್ರಯದಲ್ಲಿ ಮಾರ್ಚ 11 ರಿಂದ 15 ವರೆಗೆ 5 ದಿನಗಳ ಕಾಲ ನಡೆಯಲಿರುವ ಬೃಹತ್ “ಕೃಷಿ ಉತ್ಸವ” ಕಾರ್ಯಕ್ರಮದ ಕುರಿತು ಪೂರ್ವಭಾವಿ ಸಭೆಯನ್ನು ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷರಾದ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಸಭೆ ನಡೆಸಿ,ಸಲಹೆ ಸೂಚನೆಗಳನ್ನು ನೀಡಿದರು.

ಈ ಕೃಷಿ ಉತ್ಸವ 12 ಎಕರೆ ಜಾಗದಲ್ಲಿ 300 ಸ್ಟಾಲ್ ಗಳನ್ನೂ ಒಳಗೊಂಡು ಕೃಷಿ,ಆಹಾರ,ಗೃಹೋಪಯೋಗಿ ವಸ್ತುಗಳು,ಗ್ರಾಹಕರ,ಅಟೋಮೊಬೈಲ್ ವಿವಿಧ ಬಗೆಯ ರೈತರಿಗೆ ಉಪಯೋಗವಾಗುವ ಮಳಿಗೆಗಳು ಇರಲಿವೆ.ಚಿಕ್ಕ ಮಕ್ಕಳಿಗೆ ಅಮ್ಯೂಸ್ಮೆಂಟ್ ಪಾರ್ಕ್(ಮನೋರಂಜನಾ ಉದ್ಯಾನ) ಇರಲಿದೆ.ಪ್ರತಿದಿನ ಸಾಯಂಕಾಲ ಸಾಂಸ್ಕ್ರತಿಕ ಕಾರ್ಯಕ್ರಮಗಳು ನೆರವೇರಲಿವೆ.ಕೃಷಿ, ಪಶುಸಂಗೋಪನೆ, ಹೈನುಗಾರಿಕೆ,ಸಾವಯವ ಕೃಷಿ ಬಗ್ಗೆ ವಿಜ್ಞಾನಿಗಳು ಮಾಹಿತಿ ನೀಡಲಿದ್ದಾರೆ.

ಈ ಸಂದರ್ಭದಲ್ಲಿ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ಅಧ್ಯಕ್ಷರು,ಉಪಾಧ್ಯಕ್ಷರು,ನಿರ್ದೇಶಕ ಮಂಡಳಿ ಸದಸ್ಯರು,ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಐಶ್ವರ್ಯಾಗೆ ಮಿಸೆಸ್, ಲಬ್ಧಿಗೆ ಮಿಸ್ ಪಟ್ಟ

Spread the loveನಿಪ್ಪಾಣಿ: ಜೊಲ್ಲೆ ಗ್ರೂಪ್, ಹಾಲಸಿದ್ಧನಾಥ ಸಹಕಾರ ಸಕ್ಕರೆ ಕಾರ್ಖಾನೆ ಮತ್ತು ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿ ವತಿಯಿಂದ ಕೃಷಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ