ಹುಬ್ಬಳ್ಳಿ: ಮಹಿಳೆ ವಿವಸ್ತ್ರ ಪ್ರಕರಣ ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ನಗರದ ಅಂಬೇಡ್ಕರ್ ಸರ್ಕಲ್ನಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿ, ಸಿಎಂ ಸಿದ್ದರಾಮಯ್ಯ ಅವರ ಪ್ರತಿಕೃತಿಯನ್ನು ಸಂಗೊಳ್ಳಿ ರಾಯಣ್ಣ ಸರ್ಕಲ್ನಲ್ಲಿ ದಹಿಸಿ ಆಕ್ರೋಶ ಹೊರಹಾಕಿದ್ದಾರೆ.![]()
ಇದಕ್ಕೂ ಮುನ್ನ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ , ‘ಈ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಪೊಲೀಸರಿಗಿಂತ ಸರ್ಕಾರ ಮುಂದೆ ಬಂದು ಏನೂ ಆಗಿಲ್ಲ ಎಂದು ಸ್ಪಷ್ಟಪಡಿಸಿದೆ. ಬೆಳಗಾವಿಯಲ್ಲಿ ದಲಿತ ಮಹಿಳೆಯನ್ನು ಬಟ್ಟೆ ಬಿಚ್ಚಿ ಕಂಬಕ್ಕೆ ಕಟ್ಟಿ ಹಾಕಿ ಹೊಡೆದಿದ್ದರು. ಹಾವೇರಿಯಲ್ಲಿ ಮುಸ್ಲಿಂ ಮಹಿಳೆಯನ್ನು 5 ಜನ ರೇಪ್ ಮಾಡಿದ್ದರು. ಇವೆಲ್ಲ ಸುಳ್ಳಾ..? ಕಾಂಗ್ರೆಸ್ನವರೇ ಹೇಳಿ. ಮಾಧ್ಯಮದಲ್ಲಿ ಮಹಿಳೆ ಬಟ್ಟೆ ಬಿಚ್ಚಿಕೊಂಡಳು ಎಂದು ಸುದ್ದಿ ಬರುತ್ತಿದೆ. ಪೊಲೀಸರು ಸುಮ್ಮನೆ ಇದ್ದಾರೆ. ಆ ಯಮ್ಮ ಬಟ್ಟೆಬಿಚ್ಚಿಕೊಂಡಿದ್ದು ಅಂತ ಮುಖ್ಯಮಂತ್ರಿಗಳು ಅಲ್ಲೇ ಹೇಳಿದರು. ನೀವು ಯಾವ ಆಧಾರದ ಮೇಲೆ ಹೇಳಿದಿರಿ. ಮಹಿಳೆಯ ಬಗ್ಗೆ ಕಟ್ಟು ಕತೆಗಳು ಬರುತ್ತಿವೆ. ಹೋದ ಜನ್ಮದಲ್ಲಿ ಏನಾಗಿದ್ದೆ ಎಂದು ನಮಗೆ ಬೇಡ. ಹಿಂದೆ ಏನಾಗಿದೆ ಅದರ ಬಗ್ಗೆ ಕ್ರಮ ಕೈಗೊಳ್ಳಿ. ಒಬ್ಬ ಮಹಿಳೆ ಬಟ್ಟೆ ಬಿಚ್ಚಿಕೊಳ್ಳುತ್ತಿದ್ದಾಳೆ ಎಂದರೆ ನೀವು ಏನು ಮಾಡುತ್ತಿದ್ದೀರಿ’ ಎಂದು ಪ್ರಶ್ನಿಸಿದ್ದಾರೆ.
Laxmi News 24×7