ಗಂಗಾವತಿ, ಕೊಪ್ಪಳ: ಶಾಲಾ ಮಕ್ಕಳ ಪ್ರವಾಸ ಎಂದರೆ ಸಹಜವಾಗಿ ಆಯಾ ಶಾಲಾ ಆಡಳಿತ ಮಂಡಳಿಯವರು ಮಕ್ಕಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ಯಲು ಪ್ರತ್ಯೇಕ ವಾಹನಗಳನ್ನು ಇಲ್ಲವೇ ಸಾರಿಗೆ ಇಲಾಖೆ ವಾಹನಗಳನ್ನು ಬಳಸಿಕೊಳ್ಳುತ್ತಾರೆ.
ಆದರೆ ನಗರದ ಶಾಲೆಯೊಂದು ತನ್ನ ತನ್ನ ಸಂಸ್ಥೆಯಲ್ಲಿ ಓದುತ್ತಿರುವ ನೂರಾರು ಮಕ್ಕಳನ್ನು ರೈಲಿನಲ್ಲಿಯೇ ಕರೆದೊಯ್ದು ಗದಗ ಜಿಲ್ಲಾ ಪ್ರವಾಸ ಮಾಡಿಸಿಕೊಂಡು ಬರುವ ಮೂಲಕ ಹೊಸದೊಂದು ಪ್ರಯೋಗಕ್ಕೆ ಕೈಹಾಕಿ ಯಶಸ್ವಿಯಾಗಿದೆ.
ಜಯನಗರದ ಬೈಪಾಸ್ ರಸ್ತೆಯಲ್ಲಿರುವ ಮಹಾನ್ ಕಿಡ್ಸ್ ಶಾಲೆಯ ಆಡಳಿತ ಮಂಡಳಿಯು ಮಕ್ಕಳನ್ನು ರೈಲಿನಲ್ಲಿ ಪ್ರವಾಸಕ್ಕೆ ಕರೆದೊಯ್ದು ಹೊಸದೊಂದು ಅನುಭೂತಿ ನೀಡಿದೆ. ಅದರಲ್ಲೂ ಗಂಗಾವತಿಯಿಂದ ಕೊಪ್ಪಳಕ್ಕೆ ಹೋಗುವ ರೈಲಿನ ಮಾರ್ಗದಲ್ಲಿನ ಪ್ರಾಕೃತಿಕ ದೃಶ್ಯಗಳನ್ನು ಮಕ್ಕಳು ಎಂಜಾಯ್ ಮಾಡಿದ್ದಾರೆ.
ರೈಲು ಪ್ರಯಾಣದ ಸಂದರ್ಭದಲ್ಲಿ ಎದುರಾಗುವ ವಿಶಾಲ ಬಯಲು ಪ್ರದೇಶ, ಅದರ ಬೆನ್ನಲ್ಲೆ ಬೃಹತ್ ಬೆಟ್ಟಗುಡ್ಡಗಳ ಸಾಲು, ಕಣ್ಣು ಹಾಯಿಸಿದುದ್ದಕ್ಕೂ ತಂಪು ನೀಡುವ ಹಚ್ಚ ಹಸುರಿನ ಭತ್ತದ ಪೈರಿನ ದೃಶ್ಯಗಳನ್ನು ಮಕ್ಕಳು ಎಂಜಾಯ್ ಮಾಡಿದರು.
Laxmi News 24×7