Breaking News

ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ

Spread the love

ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ
ಟೀಕೆಗಳು ಸಾಯುತ್ತವೆ; ಕೆಲಸಗಳು ಉಳಿಯುತ್ತವೆ; ಕಲ್ಲಪ್ಪ ಬಡಿಗೇರ
ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ
ಉತ್ತಮ ಸೇವೆ ಸಲ್ಲಿಸಿದ ಗಣ್ಯರ ಸನ್ಮಾನMay be an image of dais and text that says "ಬಲ್ನಾಡಲತ ಹಿಲ್ಲಾ ಪಂಜಾಯತು, ಕನ್ನಡ ಮತ್ತುತ ಕಂಸ್ಕೃತಿ မပာဆီ ಹಾಗೂ ಮ್ುಮಾನಗರ ಪಾಲಿಕೆ బెಕగಾಪಿ. ರಸಂಯೇತ್ವ ಭಿವ್ರಯದಳ್ತಿ ವಿಶ್ವಕರ್ಮ ಅಮರ ಶಿಲ್ಲಿ ಜಕಣಾಚಾರಿ ಸಂಸ್ಮರಣಾ 00 ದಿನಾಚರಣೆ-೨೦-೨ರ ದಿನಾಚರಣೆ- -೨೦೨೬ ಸರ್ವರಿಗೂ ಅದರದ ಸುಸ್ವಾಗತ CmCE សស្វាទេំប まい ರರ್ಕಾರ ವಿಶ್ಷಬಜ್ಾತ ರಮಿವಕಿಶ್ಪು ಜತ ಮಕಣಾಬಾತರಸರು はじい 고수브금 ယေ ဘ၀"
ಟೀಕೆಗಳು ಸಾಯುತ್ತವೆ; ಕೆಲಸಗಳು ಉಳಿಯುತ್ತವೆ
ವಿಶ್ವಕರ್ಮಾ ಸಮಾಜದ ಏಳ್ಗೆ ಎಲ್ಲರ ಜವಾಬ್ದಾರಿ; ಕಲ್ಲಪ್ಪ ಬಡಿಗೇರ
ಟೀಕೆಗಳು ಸಾಯುತ್ತವೆ. ಕೆಲಸಗಳು ಉಳಿಯುತ್ತವೆ. ವಿಶ್ವಕರ್ಮ ಸಮಾಜ ಅಲ್ಪ ಸಮಾಜವಾಗಿದ್ದರೂ ಯಾವ ಕ್ಷೇತ್ರದಲ್ಲಿಯೂ ಕಡಿಮೆಯಿಲ್ಲ. ಈ ಸಮಾಜದ ಏಳ್ಗೆಗೆ ಎಲ್ಲರೂ ಜವಾಬ್ದಾರಿ ವಹಿಸಬೇಕೆಂದು ಕಲ್ಲಪ್ಪ ಬಡಿಗೇರ ಅಭಿಪ್ರಾಯಪಟ್ಟರು.
May be an image of one or more people and dais
ಇಂದು ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಹಾನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯನ್ನು ನಗರ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಆಚರಿಸಲಾಯಿತು.
ವೇದಿಕೆಯ ಮೇಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಸಮಾಜದ ಪ್ರಮುಖರಾದ ಪಿಂಟು ಬಡಿಗೇರ್, ಎ.ಬಿ. ಸಂಪಗಾಂವ ಇನ್ನುಳಿದವರು ಉಪಸ್ಥಿತರಿದ್ಧರು.
ಸಮಾರಂಭವನ್ನು ಉದ್ಧೇಶಿಸಿ ಮಾತನಾಡಿದ ಕಲ್ಲಪ್ಪ ಬಡಿಗೇರ ಅವರು ಕರ್ನಾಟಕದ ವಿಶ್ವಕರ್ಮರ ಕೀರ್ತಿ ವಿಶ್ವಾದ್ಯಂತ ಪಸರಿಸಿದೆ. ಇದಕ್ಕೆ ಅರುಣ ಯೋಗಿ ಅವರು ಅಯೋಧ್ಯಾ ರಾಮಮಂದಿರಕ್ಕಾಗಿ ಕೆತ್ತಿದ ರಾಮನ ಮೂರ್ತಿಯೇ ಸಾಕ್ಷಿಯಾಗಿದೆ. ವಿಶ್ವಕರ್ಮ ಸಮಾಜ ಅಲ್ಪ ಸಮಾಜವಾಗಿದ್ದರೂ ಯಾವ ಕ್ಷೇತ್ರದಲ್ಲಿಯೂ ಕಡಿಮೆಯಿಲ್ಲ. ಈ ಸಮಾಜದ ಏಳ್ಗೆಗೆ ಎಲ್ಲರೂ ಜವಾಬ್ದಾರಿ ವಹಿಸಬೇಕು. ಟೀಕೆಗಳು ಸಾಯುತ್ತವೆ. ಕೆಲಸಗಳು ಉಳಿಯುತ್ತವೆ. ಈಗ ಜನರು ಜಾಗೃತವಾಗಿದ್ದು, ಶೈಕ್ಷಣಿಕ ಕ್ಷೇತ್ರದಲ್ಲಿಯೂ ಅಭಿವೃದ್ಧಿ ಹೊಂದಿದೆ. ಹಲವರು ಒಳ್ಳೆಯ ಸ್ಥಾನಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆಂದು ಹೆಮ್ಮೆ ವ್ಯಕ್ತಪಡಿಸಿದರು.May be an image of ‎dais and ‎text that says "‎ほ ಸರ್ವರಿಗೂ ಆದರದ ದಿನಾಂಕ: 8פס-ח-חס ಬಳಿಗ್ಗೆ 00-00 ಗಂಟೆ ಮಾರ ಗಂಧ‎"‎‎
ನಂತರ ಉತ್ತಮ ಸೇವೆಯನ್ನು ಸಲ್ಲಿಸಿದ ವಿಶ್ವಕರ್ಮಾ ಸಮಾಜಬಾಂಧವರನ್ನು ಗಣ್ಯರ ಹಸ್ತದಿಂದ ಸನ್ಮಾನಿಸಲಾಯಿತು.
ವಿಶ್ವಕರ್ಮ ಸಮಾಜ ಬಾಂಧವರು ಅಮರಶಿಲ್ಪಿ ಜಕಣಾಚಾರಿ ಅವರ ಜಯಂತಿ ಆಯೋಜಿಸಿದ್ದಕ್ಕೆ ಅಭಿಮಾನ ವ್ಯಕ್ತಪಡಿಸಿದರು. ಅಲ್ಲದೇ, ಸರ್ಕಾರದ ಮಟ್ಟದಲ್ಲಿ ವಿಶ್ವಕರ್ಮಾ ಜಯಂತಿಯನ್ನು ಆಚರಿಸಬೇಕು. ಸರ್ಕಾರಿ ರಜೆ ನೀಡಬೇಕೆಂದು ರಮೇಸ್ ದೇಸೂರಕರ ಮತ್ತು ಮಂಜುನಾಥ ಬಡಿಗೇರ ಮನವಿ ಮಾಡಿದರು. ಬೈಟ್
ಈ ಸಂದರ್ಭದಲ್ಲಿ ಸಿದ್ಧಾರ್ಥ ಸುತಾರ್, ಪೂರ್ಣೀಮಾ ಪತ್ತಾರ್, ಅರ್ಚನಾ ಮೇಸ್ತ್ರೀ, ರೇಖಾ ಸುತಾರ್, ರಾಘವೇಂದ್ರ ಹಾವಣ್ಣವರ, ಆಕಾಶ ದೇಶನೂರ, ಜ್ಯೋತಿ ಸುತಾರ್ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ