Breaking News

ಆಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಿ ಕೇಂದ್ರ ಸಚಿವ ಅನ್ನಪೂರ್ಣಾ ದೇವಿ ಅವರನ್ನು ಭೇಟಿಯಾದ ನಿಯೋಗ

Spread the love

ಆಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಿ
ಕೇಂದ್ರ ಸಚಿವ ಅನ್ನಪೂರ್ಣಾ ದೇವಿ ಅವರನ್ನು ಭೇಟಿಯಾದ ನಿಯೋಗ
ಖಾನಾಪೂರ ತಾಲೂಕಿನ ಆಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗಳು ಮತ್ತು ಬೇಡಿಕೆಗಳತ್ತ ಗಮನಹರಿಸುವ ಸಲುವಾಗಿ, ಖಾನಾಪೂರದ ಶಾಸಕರಾದ ವಿಠ್ಠಲ್ ಹಲಗೇಕರ ಅವರ ಮಾರ್ಗದರ್ಶನದಲ್ಲಿ, ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (AITUC) ಖಾನಾಪೂರ ಘಟಕದ ವತಿಯಿಂದ ದೆಹಲಿಯಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯಾದ ಅನ್ನಪೂರ್ಣಾ ದೇವಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಕೆ ಮಾಡಲಾಯಿತು.
ಈ ವೇಳೆ ರಾಜ್ಯಸಭಾ ಸಂಸದರಾದ ಈರಣ್ಣಾ ಕಡಾಡಿ ಅವರ ನೇತೃತ್ವದ ಶಿಷ್ಟಮಂಡಳಿ ಸಚಿವ ಅನ್ನಪೂರ್ಣಾ ದೇವಿ ಅವರಿಗೆ ಮನವಿಯನ್ನು ಸಲ್ಲಿಸಿತು. ಈ ಭೇಟಿಯು ಖಾನಾಪೂರದ ಶಾಸಕರಾದ ವಿಠ್ಠಲ್ ಹಲಗೇಕರ ಅವರ ಮಾರ್ಗದರ್ಶನದಲ್ಲಿ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಶಾಸಕರ ಪತ್ನಿ ಹಾಗೂ ಆಂಗನವಾಡಿ ಶಿಕ್ಷಕಿ ಶ್ರೀಮತಿ ರುಕ್ಮಿಣಿ ಹಲಗೇಕರ, ಮೇಘಾ ಮಿಠಾರಿ, ಅನಿತಾ ಪಾಟೀಲ, ಭಾರತಿ ಪೈ, ಸುಮಿತ್ ನಾಯ್ಕ್, ಪ್ರದೀಪ ಹಲಗೇಕರ ಸೇರಿದಂತೆ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಲ್ಲಿಸಿರುವ ಮನವಿಯಲ್ಲಿ ಮನವಿಯಲ್ಲಿ ಖಾನಾಪೂರ ತಾಲೂಕಿನ ಅಲ್ಪಸಂಖ್ಯಾತ ಭಾಷಿಕ (ಮರಾಠಿಭಾಷಿಕ) ಆಂಗನವಾಡಿ ಕಾರ್ಯಕರ್ತೆಯರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳನ್ನು ವಿವರಿಸಲಾಗಿದೆ. ಈ ಕಾರ್ಯಕರ್ತೆಯರು ಶಿಶುಪೋಷಣಾ, ಪೋಷಣಾ ಹಾಗೂ ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಪಾತ್ರವಹಿಸಿಕೊಂಡಿದ್ದಾರೆ. ಆದರೂ, ಇವರು ವಿವಿಧ ತಾಂತ್ರಿಕ ಮತ್ತು ಆಡಳಿತಾತ್ಮಕ ಅಡಚಣೆಗೆ ಎದುರಿಸುತ್ತಿದ್ದಾರೆ.
ರೇಷನ್ ಸರಬರಾಜು ಕಡಿಮೆಯಾದ ಕಾರಣ ಪೋಷಕರಿಂದ ಅಸಮಾಧಾನ ವ್ಯಕ್ತವಾಗುತ್ತಿರುವಂತೆ,ಟಿಎಚ್ ಆರ್ ಪ್ರಕ್ರಿಯೆಯಲ್ಲಿ ತೊಂದರೆಯಾಗುತ್ತಿದೆ ಪೋಷಕರು ಓಟಿಪಿ ನೀಡದೇ ಇದ್ದರೆ ಡೇಟಾ ಅಪ್‌ಲೋಡ್ ಆಗಲ್ಲ, ಪರಿಣಾಮವಾಗಿ ರೇಷನ್ ವಿತರಣೆ ವ್ಯತ್ಯಯವಾಗುತ್ತದೆ,ಕಾರ್ಯಕರ್ತೆಯರಿಗೆ ನೀಡಲಾದ ಮೊಬೈಲ್ ಫೋನ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.
ಏರಟೇಲ್ ಸಿಮ್‌ ನೀಡಲಾಗಿದೆ, ಆದರೆ ಕೆಲವೊಂದು ಪ್ರದೇಶಗಳಲ್ಲಿ ನೆಟ್ವರ್ಕ್ ಸಮಸ್ಯೆ ಇರುವುದರಿಂದ ಬಹಳ ಅನಾನುಕೂಲ ಉಂಟಾಗುತ್ತಿದ್ದೆ ಮಕ್ಕಳು ಕಡಿಮೆಯಿರುವ ಆಂಗನವಾಡಿಗಳನ್ನು ಬೇರೆ ಅಂಗನವಾಡಿ ಕೇಂದ್ರಕ್ಕೆ ವರ್ಗಾಯಿಸಬೇಕು. ಹಳೆಯ ಕೇಂದ್ರಗಳು – ಕಡಿಮೆ ಪಠ್ಯಸಂಖ್ಯೆ: ಕಳೆದ 20–25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕೆಲವು ಆಂಗನವಾಡಿಗಳಲ್ಲಿ ಈವರೆಗೆ ಮಕ್ಕಳು ಕಡಿಮೆಯಿದ್ದಾರೆ. ಈ ಕೇಂದ್ರಗಳ ಸಿಬ್ಬಂದಿಯನ್ನು ಹೆಚ್ಚು ಸಂಖ್ಯೆಯ ಮಕ್ಕಳಿರುವ ಕೇಂದ್ರಗಳಿಗೆ ವರ್ಗಾಯಿಸಬೇಕು.ಸುಪ್ರೀಂ ಕೋರ್ಟ್ ಆದೇಶದನ್ವಯ ಸೇವೆಗೆ ನಿವೃತ್ತಿಯಾದ ಮೇಲೆ ಗ್ರ್ಯಾಚ್ಯುಯಿಟಿ ಲಭಿಸಬೇಕು.
ಕರ್ನಾಟಕ ಸರ್ಕಾರ 2023ರಿಂದ ಈ ಯೋಜನೆ ಆರಂಭಿಸಿದೆ, ಆದರೆ 2011–12ರ ಹಿಂದಿನ ನೌಕರರಿಗೂ ಈ ಲಾಭ ವಿಸ್ತರಿಸಬೇಕು.ಇತರ ಸರ್ಕಾರಿ ನೌಕರರಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಭತ್ಯೆ ಲಭಿಸಬೇಕು. ಖಾಸಗಿ ಶಾಲೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಅನುಮತಿ ನೀಡಲಾಗುತ್ತಿದೆ, ಇದರಿಂದ ಆಂಗನವಾಡಿಗಳ ಪ್ರವೇಶ ಸಂಖ್ಯೆ ಕುಸಿತವಾಗಿದೆ. ಕಳೆದ 20–25 ವರ್ಷಗಳಿಂದ ಕಾರ್ಯಕರ್ತೆಯರು ವಿವಿಧ ಭಾಷೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಆದರೆ ಇತ್ತೀಚೆಗೆ ಕೇವಲ ಕನ್ನಡ ಭಾಷೆಗೆ ಆದ್ಯತೆ ನೀಡಲಾಗುತ್ತಿದೆ,
ಇದರಿಂದ ಪದೋನ್ನತಿಗೆ ಅಡಚಣೆ ಉಂಾಗುತ್ತದೆ ಈ ಎಲ್ಲಾ ಬೇಡಿಕೆಗಳತ್ತ ಗಂಭೀರವಾಗಿ ಗಮನಹರಿಸಿ, ಆಂಗನವಾಡಿ ಕಾರ್ಯಕರ್ತೆಯರ ಸೇವೆ ಗೌರವಪೂರ್ಣವಾಗುವಂತೆ ಮತ್ತು ಸುಲಭವಾಗುವಂತೆ ಅಗತ್ಯ ಸುಧಾರಣೆ ತಕ್ಷಣವೇ ಜಾರಿಗೆ ತರಬೇಕೆಂದು ಈ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಶಿಷ್ಟಮಂಡಳಿಯ ಭೇಟಿಯಿಂದ ಖಾನಾಪೂರ ತಾಲೂಕಿನ ಸಾವಿರಾರು ಆಂಗನವಾಡಿ ಕಾರ್ಯಕರ್ತೆಯರ ಹಕ್ಕುಗಳಿಗಾಗಿ ಸರ್ಕಾರದಿಂದ ಸಕಾರಾತ್ಮಕ ಕ್ರಮ ನಿರೀಕ್ಷಿಸಲಾಗುತ್ತಿದೆ.ಎಂಬುದರ ಬೇಡಿಕೆ ಮಾಡುವ ಮನವಿಯನ್ನು ಸಲ್ಲಿಸಲಾಯಿತು.

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ