Breaking News

ಸರ್ಕಾರ ಮಾಡದ ಕಾರ್ಯ NGO ಗಳಿಂದ ಸಾಧ್ಯ – ಡಿ ಡಿ ಪಿ ಆಯ್ ಆರ್ ಶಿತಾರಾಂ

Spread the love

ಹುಕ್ಕೇರಿ : ಸರ್ಕಾರ ಮಾಡದ ಕಾರ್ಯ NGO ಗಳಿಂದ ಸಾಧ್ಯ – ಡಿ ಡಿ ಪಿ ಆಯ್ ಆರ್ ಶಿತಾರಾಂ
ಸರ್ಕಾರ ಮಾಡದ ಕಾರ್ಯ ಗಳನ್ನು ಸರಕಾರೆತರ ಸಂಘ ಸಂಸ್ಥೆಗಳು ಮಾಡುತ್ತಿವೆ ಎಂದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಶಿಕ್ಷಣ ಇಲಾಖೆ ಉಪ ನಿರ್ದೆಶಕ ಆರ್ ಶಿತಾರಾಂ ಹೇಳಿದರು.
ಅವರು ಇಂದು 2025 – 26 ನೇ ಸಾಲಿನ ಶಾಲಾ ಪ್ರಾರಂಭೊತ್ಸವ ಅಂಗವಾಗಿ ಹುಕ್ಕೇರಿ ನಗರದ ಗುರುಶಾಂತೇಶ್ವರ ಅಕ್ಷರ ದಾಸೋಹ ಕೇಂದ್ರದಲ್ಲಿ ಅನ್ನಪೂರ್ಣೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಮದ್ಯಾಹ್ನದ ಬಿಸಿ ಊಟ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಶ್ರೀಗಳು ಹುಕ್ಕೇರಿ, ಚಿಕ್ಕೋಡಿ, ನಿಪ್ಪಾಣಿ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸತ್ಕರಿಸಿ ಗೌರವಿಸಿ ಮಾತನಾಡಿ ಶಾಲೆಗಳಲ್ಲಿ ಮಕ್ಕಳ ಧಾಖಲಾತಿ ಹೆಚ್ಚಿಸಲು ಮತ್ತು ಆರೋಗ್ಯವಂತರಾಗಿರಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದ ಅಕ್ಷರ ದಾಸೋಹ ಯೋಜನೆ ಕರ್ನಾಟಕದಲ್ಲಿ ಸುಮಾರು 53 ಸ್ವಯಂ ಸೇವಾ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ ಅದರಲ್ಲಿ ಹುಕ್ಕೇರಿ ಗುರುಶಾಂತೇಶ್ವರ ಜನ ಕಲ್ಯಾಣ ಸಂಸ್ಥೆಯು ಸಹ ಅಚ್ಚುಕಟ್ಟಾಗಿ ಯೋಜನೆ ಜಾರಿ ಮಾಡುತ್ತಿದೆ ಎಂದರು
ನಂತರ ಅಧಿಕಾರಿಗಳು ಅಡುಗೆ ಮಾಡುವ ಸ್ಥಳ ,ಉಗ್ರಾಣ ಪರಿಶಿಲಿಸಿದರು.
ಉಪ ನಿರ್ದೆಶಕ ಆರ್ ಶಿವರಾಂ ಮಾದ್ಯಮಗಳೊಂದಿಗೆ ಮಾತನಾಡಿ ಸರ್ಕಾರದ ಹಲವಾರು ಯೋಜನೆಗಳು ವಿವ೮ಧ ಸಂಘ ಸಂಸ್ಥೆಗಳು ಅಚ್ಚು ಕಟ್ಟಾಗಿ ಕಾರ್ಯ ನಿರ್ವಹಿಸುತಗತಿವೆ ಅದರಂತೆ ಹುಕ್ಕೇರಿ ನಗರದ ಗುರುಶಾಂತೇಶ್ವರ ಜನ ಕಲ್ಯಾಣ ಸಂಸ್ಥೆ ಸುಮಾರು ವರ್ಷಗಳಿಂದ ಅಕ್ಷರ ದಾಸೋಹ ಯೋಜನೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ, ಮಕ್ಕಳಿಗೆ ರುಚು ಮತ್ತು ಶುಚಿಯಾದ ದಿನ ನಿತ್ಯ ಶ್ರೀಗಳ ಮಾರ್ಗದರ್ಶನದಲ್ಲಿ ಪ್ರಸಾದ ನಿಡುತ್ತಿರುವದು ಶ್ಲಾಘನಿಯ ವಾಗಿದೆ ಎಂದರು
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಪ್ರಭಾವತಿ ಪಾಟೀಲ, ಸಂಪನ್ಮೂಲ ಅಧಿಕಾರಿ ಎ ಎಸ್ ಪದ್ಮನ್ನವರ, ಶಿಕ್ಷಣಾಧಿಕಾರಿಗಳಾದ ಹರಿದಾಸ ಖಾಡೆ, ಸಂಗಮೇಶ ಹೂಗಾರ, ಮಹಾದೇವ ಜಿನಗೌಡ ಉಪಸ್ಥಿತರಿದ್ದರು.
ಆದರೆ ಜಿಲ್ಲಾ ಮಟ್ಟದ ಅಧಿಕಾರಿಗಳ ಉಪಸ್ಥಿತಿಯ ಕಾರ್ಯಕ್ರಮಲ್ಲಿ ಸ್ಥಳಿಯ ಅಕ್ಷರ ದಾಸೋಹ ನಿರ್ದೆಶಕಿ ಶ್ರೀಮತಿ ಸವಿತಾ ಹಲಕಿ ಅನುಪಸ್ಥಿತಿ ಯಿಂದ ಅಧಿಕಾರಿಗಳು ಅಸಮಾಧಾನ ವ್ಯಕ್ತ ಪಡಿಸಿದರು.

Spread the love

About Laxminews 24x7

Check Also

ಬೆಳಗಾವಿ ಪ್ರತಿ ವರ್ಷದಂತೆ ಈ ವರ್ಷವೂ 98ನೇ ನಾಡ ಹಬ್ಬ ಉತ್ಸವವನ್ನು ಸೆ.22ರಿಂದ ಸೆ.26ರವರೆಗೆ ನಗರದ ಕನ್ನಡ ಸಾಹಿತ್ಯ ‌ಭವನದಲ್ಲಿ ಆಯೋಜಿಸಲಾಗಿದೆ

Spread the loveಬೆಳಗಾವಿ ಪ್ರತಿ ವರ್ಷದಂತೆ ಈ ವರ್ಷವೂ 98ನೇ ನಾಡ ಹಬ್ಬ ಉತ್ಸವವನ್ನು ಸೆ.22ರಿಂದ ಸೆ.26ರವರೆಗೆ ನಗರದ ಕನ್ನಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ