Breaking News

ಸ್ನಾನಕ್ಕೆ ಹೋದ ಯುವಕ ಸಾವು,ಅಗ್ನಿಶ್ಯಾಮಕ ದಳದ ಸಿಬ್ಬಂದಿಗಳಿಂದ ಹುಡುಕಾಟ

Spread the love

ಸ್ನಾನಕ್ಕೆ ಹೋದ ಯುವಕ ಸಾವು,ಅಗ್ನಿಶ್ಯಾಮಕ ದಳದ ಸಿಬ್ಬಂದಿಗಳಿಂದ ಹುಡುಕಾಟ
ಗೋಕಾಕ : ಸ್ನಾನಕ್ಕೆ ಹೋದ ಯುವಕ ನದಿಯಲ್ಲಿ ಮುಳುಗಿ ಸಾವಿಗಿಡಾದ ಘಟನೆ ಗೋಕಾಕ ತಾಲೂಕಿನ ಕೊಣ್ಣೂರಲ್ಲಿ‌ ನಡೆದಿದೆ.ಮನೋಜ ಲಕ್ಷ್ಮಣ ನಾಯಕ (15) ವರ್ಷದ ಯುವಕ ಸಾವಿಗಿಡಾದ ಯುವಕ ಎಂದು ತಿಳಿದು ಬಂದಿದೆ,
ಕೊಣ್ಣೂರ ದುಪಧಾಳ ಸೇತುವೆ ಕೆಳಗಿರುವ ಘಟಪ್ರಭಾ ನದಿಯಲ್ಲಿ ಹೆಚ್ಚಾಗಿ ನೀರು ಹರಿಯುತ್ತಿದ್ದಾಗ 3 ಹುಡುಗರು ಈಜಲು ಹೊಗಿದ್ದಾಗ ಮನೋಜ ಲಕ್ಷ್ಮಣ ನಾಯಕ (15) ಇತನಿಗೆ ಅಷ್ಟೊಂದು ಈಜು ಬರದ ಕಾರಣ ರಬಸದಿಂದ ಹರಿಯುತ್ತಿರುವ ನೀರಿನಲ್ಲಿ ಸಿಕ್ಕುಸಾವಿಗಿಡಾಗಿದ್ದಾನೆ, ಅದೃಷ್ಟಾವಶ ಜೊತೆಯಲ್ಲಿ ಹೋದ 2 ಯುವಕರು ಸಾವಿನಿಂದ ಪಾರಾಗಿ ಬಂದಿದ್ದಾರೆ,
ಇನ್ನುಮೃತ ಯುವಕ ಕೊಣ್ಣೂರಿನ ರೇಲ್ವೆ ಸ್ಟೇಷನ್ (ಗೋಕಾಕ ರೋಡದ) ನಿವಾಸಿ ಎಂದು ತಿಳಿದು ಬಂದಿದ್ದು, ಸ್ಥಳಿಯ ಮಿನುಗಾರರು ಮತ್ತು ಗೋಕಾಕ ಆಗ್ನಿಶಾಮಕ ದಳದ ಸಿಬ್ಬಂದಿಗಳು ಬೋಟ ಮೂಲಕ ಯುವಕನ ಶವದ ಪತ್ತೆಗಾಗಿ ಅಗ್ನಿ ಶ್ಯಾಮಕ ದಳದ ಗೋಕಾಕ ಠಾಣಾಧಿಕಾರಿ ಸದಾನಂದ ಮೆಳವಂಕಿ,ಗೋಕಾಕ ಸಿಪಿಆಯ್, ಪಿ,ಎಸ್,ಐ, ಮತ್ತು ಪೋಲಿಸ ಸಿಬ್ಬಂದಿಗಳು ಸ್ಥಳದಲ್ಲಿದ್ದು ಹುಡುಕಾಟ ನಡೆಸಿದ್ದಾರೆ.

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ